Home ಕ್ರೈಂ ನ್ಯೂಸ್ “ಪಾಕಿಸ್ತಾನವೇ ಹುಷಾರ್, ನಾವು ಸಿದ್ಧರಿದ್ದೇವೆ”: ಉಗ್ರರ ವಿರುದ್ಧ ಹೋರಾಡಲು ಸಜ್ಜಾದ ಜಮ್ಮು-ಕಾಶ್ಮೀರ ಮಹಿಳಾ ಪೊಲೀಸ್ ಸಿಬ್ಬಂದಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

“ಪಾಕಿಸ್ತಾನವೇ ಹುಷಾರ್, ನಾವು ಸಿದ್ಧರಿದ್ದೇವೆ”: ಉಗ್ರರ ವಿರುದ್ಧ ಹೋರಾಡಲು ಸಜ್ಜಾದ ಜಮ್ಮು-ಕಾಶ್ಮೀರ ಮಹಿಳಾ ಪೊಲೀಸ್ ಸಿಬ್ಬಂದಿ!

Share
ಪಾಕಿಸ್ತಾನ
Share

ಜಮ್ಮು ಕಾಶ್ಮೀರ: ಪಾಕಿಸ್ತಾನವೇ ಹುಷಾರ್. ನಾವೂ ಸಿದ್ಧರಿದ್ದೇವೆ. ಉಗ್ರರ ವಿರುದ್ಧ ಹೋರಾಡಲು ನಾವು ಸಜ್ಜಾಗಿದ್ದೇವೆ. ಇದು ಭಯೋತ್ಪಾದನೆ ವಿರುದ್ಧ ರಣಕಹಳೆ ಮೊಳಗಿಸಿರುವ ಜಮ್ಮು-ಕಾಶ್ಮೀರ ಮಹಿಳಾ ಪೊಲೀಸ್ ಸಿಬ್ಬಂದಿ.

ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ. ಒಂದು ಕಾಲದಲ್ಲಿ ಇಲ್ಲಿನ ಯುವತಿಯರು ಕೇವಲ ಶಿಕ್ಷಣ ಅಥವಾ ವೈದ್ಯಕೀಯ ಕ್ಷೇತ್ರದತ್ತ ಮುಖ ಮಾಡುತ್ತಿದ್ದರು. ಆದರೆ ಇಂದು ದೇಶದ ರಕ್ಷಣೆಗಾಗಿ ಖಾಕಿ ಧರಿಸಿ, ಭಯೋತ್ಪಾದನೆಯ ವಿರುದ್ಧ ಮುಂಚೂಣಿಯಲ್ಲಿ ನಿಲ್ಲಲು ಯುವತಿಯರು ಪೈಪೋಟಿ ನಡೆಸುತ್ತಿದ್ದಾರೆ.

ಸೋಮವಾರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರಿಂದ ನೇಮಕಾತಿ ಪತ್ರ ಪಡೆದ 100 ಹೊಸ ಸಿಬ್ಬಂದಿಗಳಲ್ಲಿ ಶೇಕಡಾ 60 ರಷ್ಟು ಮಹಿಳೆಯರೇ ಇದ್ದಾರೆ ಎಂಬುದು ವಿಶೇಷ.

ನೆಲದ ಹೆಣ್ಣುಮಕ್ಕಳ ರಣಗರ್ಜನೆ:

ನೇಮಕಾತಿ ಪಡೆದ ನೂರ್ ಜಹಾನ್ ಅಖ್ತರ್ ಎಂಬ ಯುವತಿ, “ಪಾಕಿಸ್ತಾನವೇ ಜರಾ ಹುಷಾರಾಗಿರು, ನಾವು ಉಗ್ರರನ್ನು ಎದುರಿಸಲು ಸಂಪೂರ್ಣ ಸಿದ್ಧರಾಗಿದ್ದೇವೆ” ಎಂದು ಎಚ್ಚರಿಕೆ ನೀಡಿದ್ದಾರೆ. ಗಡಿ ಭಾಗವಾದ ಪೂಂಚ್‌ನಲ್ಲಿ ಬೆಳೆದ ಮೆಹ್ರೀನ್ ಹಾಗೂ ಪೊಲೀಸ್ ಹಿನ್ನೆಲೆಯುಳ್ಳ ಇಫ್ರಾ ಮುಷ್ತಾಕ್ ಮಲಿಕ್, ತಾವು ಎಂತಹದೇ ಆಪರೇಷನ್‌ಗಳಿಗೂ ಸಿದ್ಧವಾಗಿದ್ದು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಲು ಕೂಡ ಹಿಂಜರಿಯುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಕಲ್ಲು ತೂರಾಟದಂತಹ ಘಟನೆಗಳು ಗಣನೀಯವಾಗಿ ಕಡಿಮೆಯಾಗಿದ್ದು, ಯುವ ಪೀಳಿಗೆಯು ಪಾಕಿಸ್ತಾನದ ಕುತಂತ್ರಗಳನ್ನು ಅರಿತು ಮುಖ್ಯವಾಹಿನಿಗೆ ಬರುತ್ತಿದೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಹೊಸ ಬ್ಯಾಚ್ ಅನ್ನು ಸ್ವಾಗತಿಸಿ, ಜಮ್ಮು-ಕಾಶ್ಮೀರ ಪೊಲೀಸರ ಶೌರ್ಯದ ಪರಂಪರೆಯನ್ನು ಮುಂದುವರಿಸಲು ಕರೆ ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles