SUDDIKSHANA KANNADA NEWS/ DAVANAGERE/ DATE:19-11-2024
ಬೆಂಗಳೂರು: ಮೇಳೈಸಿದ ಕನ್ನಡ ನಾಡು ನುಡಿ ಸಂಭ್ರಮ, ವಿದ್ಯಾರ್ಥಿಗಳ ಕನ್ನಡ ಪ್ರೇಮ, ಕನ್ನಡಾಂಬೆಗೆ ಅರ್ಥಪೂರ್ಣ ನಮನ. ತಾಯಿ ಭುವನೇಶ್ವರಿ ದೇವಿಯ ಅದ್ಧೂರಿ ಮೆರವಣಿಗೆಗೆ ರಂಗು ತಂದ ವಿದ್ಯಾರ್ಥಿ ಸಮೂಹ.
ಇದು ಬೆಂಗಳೂರಿನ ವಿಜಯನಗರದ ಚಂದ್ರಾ ಬಡಾವಣೆಯಲ್ಲಿ ಇನ್ ಸೈಟ್ಸ್ ಐಎಎಸ್ ಸಂಸ್ಥೆ ಆಶ್ರಯದಲ್ಲಿ ಏರ್ಪಡಿಸಿದ್ದ ನಮ್ಮ ಕರುನಾಡ ಹೆಮ್ಮೆಯ ನಾಡ ನುಡಿ ಹಬ್ಬ ಕನ್ನಡ ರಾಜ್ಯೋತ್ಸವದ “ಐಸಿರಿ ಉತ್ಸವದಲ್ಲಿ.
ಈ ಉತ್ಸವದಲ್ಲಿ ಇನ್ ಸೈಟ್ಸ್ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು. ಅರ್ಥಪೂರ್ಣವಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ರಾಜ್ಯದ ಮೂಲೆಮೂಲೆಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದು ವಿಶೇಷವಾಗಿತ್ತು. ಪ್ರತಿಯೊಬ್ಬರೂ ಕನ್ನಡ ಪ್ರೇಮ ಮೆರೆದಿದ್ದು ಗಮನ ಸೆಳೆಯಿತು.
ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ಸಾರಥ್ಯದಲ್ಲಿ ನಡೆದ ಈ ಕಾರ್ಯಕ್ರಮವು ಅದ್ಭುತವಾಗಿ ಮೂಡಿ ಬಂತು. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಯಾವ ಸಂಸ್ಥೆಯೂ, ಅಕಾಡೆಮಿಯೂ ಆಚರಿಸದ ರೀತಿಯಲ್ಲಿ
ವೈಭವೋಪೇತವಾಗಿ ಸಂಭ್ರಮಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಬೆಂಗಳೂರಿನ ವಿಜಯನಗರದ ಚಂದ್ರಾ ಬಡಾವಣೆಯಲ್ಲಿ ತಾಯಿ ಭುವನೇಶ್ವರಿ ದೇವಿಯ ಅದ್ದೂರಿ ಮೆರವಣಿಗೆ ಕಣ್ಮನ ಸೆಳೆಯಿತು. ಸಕಲ ವೈಭವದೊಂದಿಗೆ ಮೆರವಣಿಗೆ ನಡೆಯಿತು. ಈ ಮೆರವಣಿಗೆ ವೇಳೆ ಜಿ. ಬಿ. ವಿನಯ್ ಕುಮಾರ್ ಅವರನ್ನು ಎತ್ತಿಕೊಂಡು ವಿದ್ಯಾರ್ಥಿಗಳು ಕುಣಿದು ಸಂಭ್ರಮಿಸಿದರು.
ಇನ್ ಸೈಟ್ಸ್ ಐಎಎಸ್ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಕರುನಾಡ ಸಾಂಸ್ಕೃತಿಕ ಉತ್ಸವದ ರಂಗು ಹೆಚ್ಚಲು ವಿದ್ಯಾರ್ಥಿಗಳ ಪರಿಶ್ರಮ. ನೃತ್ಯಗಾನ ರಸಾಯನ, ದಾವಣಗೆರೆಯ ಬಸವ ಕಲಾ ತಂಡದ ನಂದಿಕೋಲು ಕುಣಿತವೂ ಎಲ್ಲರು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಖ್ಯಾತ ಶಮಿತಾ ಮಲ್ನಾಡ್ ಮತ್ತು ಪೃಥ್ವಿ ಭಟ್ ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮವೂ ಜರುಗಿತು.
ಕನ್ನಡ ನಾಡಿನ ಇತಿಹಾಸ, ಐತಿಹಾಸಿಕ ಹಿನ್ನೆಲೆ, ಕನ್ನಡ ಭಾಷೆ ಕುರಿತಾದ ಹಾಡುಗಳು ಎಲ್ಲರ ಸಂಭ್ರಮ ಮತ್ತಷ್ಟು ಹೆಚ್ಚುವಂತೆ ಮಾಡಿತು. ಅದೇ ರೀತಿಯಲ್ಲಿ ಖ್ಯಾತ ಹಾಸ್ಯನಟ ಮಿಮಿಕ್ರಿ ಗೋಪಿ ಅವರಿಂದ ಹಾಸ್ಯ ರಸಸಂಜೆಯಲ್ಲಿ ನಕ್ಕು ನಲಿದ ವಿದ್ಯಾರ್ಥಿಗಳು ಡೊಳ್ಳು ಕುಣಿತ, ಮಲ್ಲಕಂಬ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಕಣ್ತುಂಬಿಕೊಂಡರು.