ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere: ಭೂ ಪರಿವರ್ತನೆಗೆ 1.50 ಲಕ್ಷ ರೂ. ಲಂಚ ಸ್ವೀಕಾರ ವೇಳೆ ಸಿಕ್ಕಿಬಿದ್ದ ಪಿಡಿಒ: ಇಒ ಸಹ ಲೋಕಾಯುಕ್ತ ಬಲೆಗೆ

On: September 30, 2023 11:56 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:30-09-2023

ದಾವಣಗೆರೆ (Davanagere): ನಿವೇಶನಕ್ಕೆ ಕೃಷಿ ಭೂಮಿ ಪರಿವರ್ತನೆ ಮಾಡಿಕೊಡಲು 1.50 ಲಕ್ಷ ರೂಪಾಯಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಹರ ತಾಲೂಕು ಕಾರ್ಯನಿರ್ವಹಣಾಧಿಕಾರಿ ರವಿ, ಸಾರಥಿ ಗ್ರಾಮ ಪಂಚಾಯಿತಿ ಪಿಡಿಒ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಇಬ್ಬರನ್ನು ಬಂಧಿಸಲಾಗಿದೆ.

Read Also This Story: 

Davanagere: ಎಡಪಂಥೀಯ ಸಾಹಿತಿಗಳಿಗೆ ಬೆದರಿಕೆ ಪತ್ರ: ದಾವಣಗೆರೆಯ ಜಾಲಿನಗರದ ಆರೋಪಿ ಸೆರೆ, ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟ ಸತ್ಯವೇನು…?

ಹರಿಹರ ಇ ಒ ರವಿ ಹಾಗೂ ಸಾರಥಿ ಪಿಡಿಒ ರಾಘವೇಂದ್ರ ಬಂಧಿತ ಅಧಿಕಾರಿಗಳು.

ಘಟನೆ ಹಿನ್ನೆಲೆ:

ಶ್ರೀರಾಮ ಸೇನೆ ಕಾರ್ಯಕರ್ತ ಶ್ರೀನಿವಾಸ ಎಂಬುವವರಿಂದ ಹರಿಹರ ತಾಲೂಕಿನ ಕರಲಹಳ್ಳಿ ಗ್ರಾಮದ ರೀ ಸರ್ವೆ ನಂಬರ್ 1/1 ರಲ್ಲಿ 1 ಎಕರೆ ಜಮೀನು ಹಾಗೂ ಸರ್ವೇ ನಂಬರ್ 1/5 ರಲ್ಲಿ 1 ಎಕರೆ ಜಮೀನಿನ ಸ್ವಾಧೀನ ರಹಿತ ಕ್ರಯದ
ಕರಾರು ಪತ್ರ ಮಾಡಿಸಿಕೊಂಡು ಎರಡು ಜಮೀನುಗಳ ಮೂಲ ಮಾಲೀಕರ ಹೆಸರಿನಲ್ಲಿಯೇ ಸೈಟ್ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ವಸತಿ ಉದ್ದೇಶಕ್ಕೆ ಅಪ್ರೂವ್ ಕೂಡ ಆಗಿತ್ತು. ಈ ಪ್ರದೇಶದಲ್ಲಿ ಸೈಟುಗಳನ್ನಾಗಿ ವಿಂಗಡಿಸಿ ಸೈಟ್ ಪ್ಲಾನ್ ತಯಾರಿಸಲಾಗಿತ್ತು. ಈ ಪ್ಲಾನ್‌ನಲ್ಲಿ ನಿವೇಶನಗಳಿಗೆ ಇ – ಸ್ವತ್ತು ಖಾತೆ ದಾಖಲು ಮಾಡಿಸಿದ ನಂತರ ನಮ್ಮ ಹೆಸರಿಗಾಗೀ, ನಾವು ಹೇಳುವವರ ಹೆಸರಿಗಾಗಲೇ ನಿವೇಶನಗಳನ್ನು ನೋಂದಣಿ ಮಾಡಿಕೊಡುವಂತೆ ಜಮೀನುಗಳ ಮಾಲೀಕರಿಂದ ಕ್ರಯದ ಕರಾರು ಪತ್ರ ಮಾಡಿಕೊಂಡು ಈ ಕೆಲಸದ ವಿಚಾರವಾಗಿ ಕಚೇರಿಗಳಿಗೆ ಓಡಾಡಿ ದಾಖಲಾತಿ ಮಾಡಿಸಲಾಗಿತ್ತು.

ಈ ಜಮೀನುಗಳಿಗೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು ತಾಂತ್ರಿಕ ಅನುಮೋದನೆ ಮತ್ತು ವಿನ್ಯಾಸ ನಕ್ಷೆ ರಚಿಸಲು ಎರಡು ಜಮೀನುಗಳ ಮಾಲೀಕರು ಸಾರಥಿ ಪಿಡಿಒ ರಾಘವೇಂದ್ರ ಅವರಿಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಆದ್ರೆ, ಪಿಡಿಓ ರಾಘವೇಂದ್ರ ಹಾಗೂ ಹರಿಹರ ತಾಲ್ಲೂಕು ಪಂಚಾಯಿತಿ ಇಒ ರವಿ ಅವರು ಜಮೀನುಗಳ ಪ್ಲಾನ್ ಅಪ್ರೂವ್ ಮಾಡಲು ಒಟ್ಟು ರೂ. 1,60, 000 ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇಂದು ಬೆಳಿಗ್ಗೆ 9 ಗಂಟೆಗೆ ಸಾರಥಿ ಪಿ.ಡಿಓ ರಾಘವೇಂದ್ರ ಅವರು ತಮ್ಮ ಹರಿಹರದ ಅಮರಾವತಿ ಕಾಲೋನಿಯಲ್ಲಿನ ವಾಸದ ಮನೆಯಲ್ಲಿ ರೂ . 1,50,000 ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದಿದ್ದಾರೆ. ಮಾತ್ರವಲ್ಲ, ಈ ಪ್ರಕರಣದಲ್ಲಿ ಎರಡನೇ ಆರೋಪಿಯಾದ ರವಿ ಅವರನ್ನು ಸಹ ಬಂಧಿಸಿ ತನಿಖೆ ಮುಂದುವರಿಸಲಾಗಿದೆ.

ಲೋಕಾಯುಕ್ತ ಬಲೆಗೆ ಬಿದ್ದ ರವಿ ಅವರು, ದಾವಣಗೆರೆ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯೆ ಗೌರಮ್ಮ ಗಿರೀಶ್ ಅವರ ಪುತ್ರಿಯ ಪತಿಯಾಗಿದ್ದಾರೆ. ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಅವರ ನೇತೃತ್ವದಲ್ಲಿ ದೂರು ನೀಡಲಾಗಿತ್ತು.

ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್ . ಕೌಲಾಪೂರೆ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಸಿ. ಮಧುಸೂದನ್ , ಪ್ರಭು ಬಸೂರು, ಹೆಚ್.ಎಸ್ , ರಾಷ್ಟ್ರಪತಿ, ದಾವಣಗೆರೆ ಲೋಕಾಯುಕ್ತ ಠಾಣೆಯ ಸಿಬ್ಬಂದಿ ಆಂಜನೇಯ, ವೀರೇಶಯ್ಯ, ಧನರಾಜ್, ಲಿಂಗೇಶ್, ಮಲ್ಲಿಕಾರ್ಜುನ್, ಗಿರೀಶ್, ಕೋಟಿನಾಯ್ಕ, ಕೃಷ್ಣನಾಯ್ಕ, ಬಸವರಾಜ, ಜಂಪಿದ್ ಖಾನಂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment