ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಬೆಂಗಳೂರು ಐಎಎಸ್ ಹಬ್ ಆಗಲು ಇನ್ ಸೈಟ್ಸ್ ಸಂಸ್ಥೆ ಕಾರಣ: ಜಿ. ಬಿ. ವಿನಯ್ ಕುಮಾರ್

On: November 19, 2024 6:46 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:19-11-2024

ಬೆಂಗಳೂರು: ಇಂದು ಬೆಂಗಳೂರು ಐಎಎಸ್ ಹಬ್ ಆಗಲು ಕಾರಣ ಇನ್ ಸೈಟ್ಸ್ ಸಂಸ್ಥೆ ಎಂದು ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ಹೇಳಿದರು.

ಬೆಂಗಳೂರಿನ ವಿಜಯನಗರದ ಚಂದ್ರಾ ಬಡಾವಣೆಯಲ್ಲಿ ಇನ್ ಸೈಟ್ಸ್ ಐಎಎಸ್ ಸಂಸ್ಥೆ ಆಶ್ರಯದಲ್ಲಿ ಏರ್ಪಡಿಸಿದ್ದ ನಮ್ಮ ಕರುನಾಡ ಹೆಮ್ಮೆಯ ನಾಡ ನುಡಿ ಹಬ್ಬ ಕನ್ನಡ ರಾಜ್ಯೋತ್ಸವದ ಐಸಿರಿ ಉತ್ಸವದಲ್ಲಿ ಮಾತನಾಡಿದ ಅವರು, ನಮ್ಮ ಸಂಸ್ಥೆಯಿಂದ ಓದಿ ಹೋಗಿರುವ ಹಲವರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಸೇರಿದಂತೆ ಹಲವು ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶಾದ್ಯಂತ ಸಂಸ್ಥೆಯು ಕೋಚಿಂಗ್ ಸೆಂಟರ್ ಹೊಂದಿದೆ. ಕರ್ನಾಟಕದ ನಾನು ಜಮ್ಮುಕಾಶ್ಮೀರದಲ್ಲಿ ಐಎಎಸ್, ಐಪಿಎಸ್ ಕೋಚಿಂಗ್ ಸೆಂಟರ್ ಆರಂಭಿಸಿದ್ದೇನೆ. ಇದು ಕನ್ನಡಿಗರ ಶಕ್ತಿಗೆ ಸಾಕ್ಷಿ ಎಂದು ಹೇಳಿದರು.

ಬೀದರ್ ನಿಂದ ಚಾಮರಾಜನಗರದವರೆಗಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ತುಂಬಾನೇ ಖುಷಿ ಕೊಟ್ಟಿದೆ. ಅವರ ಸ್ವಂತ ಖರ್ಚಿನಲ್ಲಿಯೇ ಬಂದಿದ್ದಾರೆ. 15 ದಿನಗಳಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ತಯಾರಿ ಮಾಡಿಕೊಂಡು ತಾಲೀಮು ನಡೆಸಿ, ಕಲಾ ಪ್ರದರ್ಶನ ನೀಡಿದ್ದಾರೆ. ಯಾವ ಖಾಸಗಿ ಕಾಲೇಜು, ಖಾಸಗಿ ಶಿಕ್ಷಣ ಸಂಸ್ಥೆಗಳು, ಕೋಚಿಂಗ್ ಸೆಂಟರ್ ಗಳು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿಲ್ಲ. ಆದ್ರೆ, ಇನ್ ಸೈಟ್ಸ್ ಸಂಸ್ಥೆ ಮಾಡಿದೆ ಎಂದು ತಿಳಿಸಿದರು.

ಕನ್ನಡ ಭಾಷೆಗೆ ಬಹಳ ಇತಿಹಾಸವಿದೆ, ಭವ್ಯ ಪರಂಪರೆ ಇದೆ. ಸಮೃದ್ಧಿ ಹೊಂದಿರುವ ನುಡಿ ಇದು. ಕನ್ನಡದ ಅಸ್ತಿತ್ವದ ಬಗ್ಗೆ ಕೆಲವರು ಮಾತನಾಡುತ್ತಾರೆ. ನನ್ನ ಪ್ರಕಾರ ಯಾವುದೇ ಕಾರಣಕ್ಕೂ ಕನ್ನಡ ಅಳಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಮುಂಬರುವ ದಿನಗಳಲ್ಲಿ ಮತ್ತಷ್ಟು ಬೆಳೆಯಬೇಕಾಗಿದೆ. ಸಮೃದ್ಧತೆ ಹೊಂದಿರುವ ಸಾಹಿತ್ಯ ಕನ್ನಡ ಭಾಷೆಯಲ್ಲಿದೆ. ಜಮ್ಮು ಕಾಶ್ಮೀರದಲ್ಲಿ ಕನ್ನಡಿಗನೊಬ್ಬ ಸಂಸ್ಥೆ ಸ್ಥಾಪಿಸುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ಹೇಳಿದರು.

ಐಎಎಸ್ ಪಾಸ್ ಮಾಡುವುದು ಅಷ್ಟು ಸುಲಭವಲ್ಲ. ಇದಕ್ಕೆ ವ್ಯಕ್ತಿತ್ವ ವಿಕಸನ ಆಗಬೇಕು. ಹೆಚ್ಚಾಗಿ ಓದಬೇಕು. ಸಾಮಾನ್ಯ ಜ್ಞಾನ, ಕಠಿಣ ಪರಿಶ್ರಮ ಇದ್ದರೆ ಖಂಡಿತ ಸಾಧ್ಯವಾಗುತ್ತದೆ. ಶೈಕ್ಷಣಿಕ ರಂಗದಲ್ಲಿರುವ ಅಸಮಾನತೆ ತೊಲಗಬೇಕು. ಎಷ್ಟೋ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ. ಶಾಲೆಗಳು ಗುಣಮಟ್ಟದಿಂದ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಹೊಂದಿಲ್ಲ. ಇದು ವಿಷಾದದ ಸಂಗತಿ ಎಂದು ಜಿ. ಬಿ. ವಿನಯ್ ಕುಮಾರ್ ಹೇಳಿದರು.

ಕಳೆದ ವರ್ಷ ಕನ್ನಡ ರಾಜ್ಯೋತ್ಸವ ಆಚರಿಸುವಾಗ ಮಳೆ ಬಂದಿತ್ತು. ಆದ್ರೂ ವಿದ್ಯಾರ್ಥಿಗಳು ಮಳೆ ಲೆಕ್ಕಿಸದೇ ಕನ್ನಡ ರಾಜ್ಯೋತ್ಸವ ಆಚರಿಸಿದ್ದರು. ಈ ಬಾರಿ ವಿಜೃಂಭಣೆ, ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದೇವೆ ಎಂದು
ಹೇಳಿದರು.

ಬರಿಗೈನಲ್ಲಿ ಬೆಂಗಳೂರಿಗೆ ಬಂದಿದ್ದೆ. 10ರಿಂದ 15 ವಿದ್ಯಾರ್ಥಿಗಳಿಗೆ ತರಬೇತಿ ನೀಡಿದೆ. ನಮ್ಮ ಸಂಸ್ಥೆಯ ಹೆಸರು ರಾಷ್ಟ್ರಮಟ್ಟದಲ್ಲಿ ಹೆಸರು ಬರುವಂತಾಗಲು ವಿದ್ಯಾರ್ಥಿಗಳು ಪಡೆದ ರ್ಯಾಂಕ್ ಗಳೇ ಕಾರಣ. ಬೆಂಗಳೂರಿನ ಚಂದ್ರಾ ಬಡಾವಣೆಯು ಈಗ ಇನ್ ಸೈಟ್ಸ್ ಸಂಸ್ಥೆಯ ಬಡಾವಣೆ ಎಂಬಂತ ರೀತಿಯಲ್ಲಿ ಬೆಳೆದು ನಿಂತಿದೆ. ಇದಕ್ಕೆ ವಿದ್ಯಾರ್ಥಿಗಳೇ ಕಾರಣ. ನನ್ನೊಬ್ಬನಿಂದ ಇದು ಸಾಧ್ಯವಾಗಿಲ್ಲ. ನಿಮ್ಮಲ್ಲರ ಸಹಕಾರದಿಂದ ನೆರವೇರಿದೆ. ಪ್ರಶ್ನಾತೀತವಾಗಿ ಇಂದು ನಮ್ಮ ಸಂಸ್ಥೆ ಬೆಳೆದಿದೆ. ನಮ್ಮನ್ನು ಬೆಳೆಸಿದ ಮತ್ತು ಜನರ ಆಶೀರ್ವಾದವೇ ನಮಗೆ ಶ್ರೀರಕ್ಷೆ ಎಂದು ಜಿ. ಬಿ. ವಿನಯ್ ಕುಮಾರ್ ಬಡಾವಣೆ ಜನರ ಕುರಿತಾಗಿ ಹೇಳಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment