Home ದಾವಣಗೆರೆ ಪ್ರೋಟೀನ್ ಸೇವನೆಯಲ್ಲಿ ಭಾರತೀಯರು ಮುಂದು: ಆದರೆ ಶೇ. 93 ರಷ್ಟು ಜನರಿಗೆ ಸರಿಯಾದ ತಿಳುವಳಿಕೆಯೇ ಇಲ್ಲ! ಏನಿದು ಆಘಾತಕಾರಿ ರಿಪೋರ್ಟ್?
ದಾವಣಗೆರೆನವದೆಹಲಿಬೆಂಗಳೂರು

ಪ್ರೋಟೀನ್ ಸೇವನೆಯಲ್ಲಿ ಭಾರತೀಯರು ಮುಂದು: ಆದರೆ ಶೇ. 93 ರಷ್ಟು ಜನರಿಗೆ ಸರಿಯಾದ ತಿಳುವಳಿಕೆಯೇ ಇಲ್ಲ! ಏನಿದು ಆಘಾತಕಾರಿ ರಿಪೋರ್ಟ್?

Share
ಪ್ರೋಟೀನ್
Share

ನವದೆಹಲಿ: ಭಾರತದಲ್ಲಿ ಪ್ರತಿ ಇಬ್ಬರಲ್ಲಿ ಒಬ್ಬರು (ಸುಮಾರು ಶೇ. 50) ತಮ್ಮ ದಿನನಿತ್ಯದ ಪ್ರತಿಯೊಂದು ಆಹಾರದಲ್ಲೂ ಪ್ರೋಟೀನ್ ಸೇರಿಸಿಕೊಳ್ಳುತ್ತಿದ್ದಾರೆ. ಆದರೆ, ತಮ್ಮ ಪ್ರೋಟೀನ್ ಪ್ರಮಾಣವನ್ನು ನಿರಂತರವಾಗಿ ಟ್ರ್ಯಾಕ್ ಮಾಡುವವರಲ್ಲೂ ಶೇ. 93 ರಷ್ಟು ಮಂದಿ ಪ್ರೋಟೀನ್ ಕುರಿತು ತೀವ್ರ ಗೊಂದಲದಲ್ಲಿದ್ದಾರೆ ಎಂದು ಸ್ಮಿಟನ್ (Smytten) ಸಹಯೋಗದ ‘ಪಲ್ಸ್‌ಎಐ ರಿಸರ್ಚ್’ (PulseAI Research) ನಡೆಸಿರುವ “ಇಂಡಿಯಾಸ್ ಪ್ರೋಟೀನ್ ಪ್ಯಾರಡಾಕ್ಸ್” (India’s Protein Paradox) ವರದಿ ಬಹಿರಂಗಪಡಿಸಿದೆ.

ದೇಶಾದ್ಯಂತ 2,000 ಜನರನ್ನು ಸಮೀಕ್ಷೆಗೆ ಒಳಪಡಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಜಾಗೃತಿ ಮತ್ತು ಪ್ರೋಟೀನ್ ಕುರಿತ ನೈಜ ತಿಳುವಳಿಕೆಯ ನಡುವೆ ದೊಡ್ಡ ಕಂದಕವಿರುವುದನ್ನು ಈ ಸರ್ವೇ ಬೆಟ್ಟು ಮಾಡಿದೆ.

ವರದಿಯ ಪ್ರಮುಖ ಮುಖ್ಯಾಂಶಗಳು:

ಅರಿವಿದ್ದರೂ ಗೊಂದಲ: ಶೇ. 41 ರಷ್ಟು ಗ್ರಾಹಕರು ಪ್ರತಿದಿನ ಎಷ್ಟು ಪ್ರೋಟೀನ್ ತೆಗೆದುಕೊಳ್ಳುತ್ತಿದ್ದೇವೆ ಎಂದು ಲೆಕ್ಕ ಹಾಕುತ್ತಾರೆ ಹಾಗೂ ಶೇ. 50 ರಷ್ಟು ಜನರು ಆಹಾರ ಉತ್ಪನ್ನ ಖರೀದಿಸುವ ಮುನ್ನ ನ್ಯೂಟ್ರಿಷನ್ ಲೇಬಲ್ ಪರಿಶೀಲಿಸುತ್ತಾರೆ. ಆದಾಗ್ಯೂ, ಶೇ. 93 ರಷ್ಟು ಗ್ರಾಹಕರಿಗೆ ಸರಿಯಾದ ಮಾಹಿತಿ ತಿಳಿದಿಲ್ಲ.

ವೈದ್ಯರ ಸಲಹೆ ಪಡೆಯುವವರು ಕಮ್ಮಿ: ಕೇವಲ ಶೇ. 19 ರಷ್ಟು ಜನರು ಮಾತ್ರ ಪ್ರೋಟೀನ್ ವಿಷಯದಲ್ಲಿ ವೈದ್ಯರು ಅಥವಾ ಪೋಷಕಾಂಶ ತಜ್ಞರ (Nutritionists) ಸಲಹೆ ಪಡೆಯುತ್ತಿದ್ದು,ಳಿದವರು ಸ್ವಯಂ ಸಂಶೋಧನೆ ಮತ್ತು ಅನುಭವಗಳ ಮೇಲೆಯೇ ಅವಲಂಬಿತರಾಗಿದ್ದಾರೆ.

ಬೆಲೆ ತೊಡಕಲ್ಲ: ಶೇ. 71 ಕ್ಕೂ ಹೆಚ್ಚು ಜನರು ಪ್ರೋಟೀನ್ ಆಹಾರಗಳು ಕೈಗೆಟುಕುವ ದರದಲ್ಲೇ ಇವೆ ಎಂದು ಭಾವಿಸಿದ್ದಾರೆ. ಸಮಸ್ಯೆಯಿರುವುದು ಬೆಲೆಯಲ್ಲ, ಬದಲಿಗೆ ಪ್ರೋಟೀನ್ ಕುರಿತ ಸ್ಪಷ್ಟ ಮತ್ತು ಸರಳ ಮಾಹಿತಿಯ ಕೊರತೆಯಲ್ಲಿ.

ಸಸ್ಯಾಹಾರಿ ಮತ್ತು ಮಾಂಸಾಹಾರಿಗಳ ಆಯ್ಕೆ: ಮಾಂಸಾಹಾರಿಗಳ ಪೈಕಿ ಶೇ. 31.4 ರಷ್ಟು ಜನರು ಕಾಳುಗಳು ಹಾಗೂ ಒಣಹಣ್ಣುಗಳಂತಹ ಸಸ್ಯಾಧಾರಿತ ಪ್ರೋಟೀನ್ ಮೇಲೆ ಅವಲಂಬಿತರಾಗಿದ್ದಾರೆ. ಇನ್ನು ಸಸ್ಯಾಹಾರಿಗಳು ಹಾಲು, ಡೈರಿ ಉತ್ಪನ್ನಗಳು ಮತ್ತು ಕಾಳುಗಳಿಂದ ಪ್ರೋಟೀನ್ ಪಡೆಯುತ್ತಿದ್ದಾರೆ.

ಕೇವಲ ಜಿಮ್ ಅಥವಾ ಫಿಟ್‌ನೆಸ್ ಪ್ರಿಯರಿಗೆ ಮಾತ್ರವಲ್ಲದೆ, ಸಾಮಾನ್ಯ ಆರೋಗ್ಯ ನಿರ್ವಹಣೆಗೂ ಪ್ರೋಟೀನ್ ಅಗತ್ಯ ಎಂಬ ಜಾಗೃತಿ ಮೂಡುತ್ತಿದೆಯಾದರೂ, ಜನರ ನಂಬಿಕೆ ಮತ್ತು ನೈಜ ವರ್ತನೆಯ ನಡುವೆ ಹೊಂದಾಣಿಕೆಯಿಲ್ಲದಿರುವುದು ಈ ವರದಿಯಿಂದ ಸ್ಪಷ್ಟವಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles