Home ಕ್ರೈಂ ನ್ಯೂಸ್ 21 ವರ್ಷದ ದಾಂಪತ್ಯಕ್ಕೆ ಅಂತ್ಯ: 5 ಮಕ್ಕಳ ತಾಯಿಯನ್ನು ಪ್ರಿಯಕರನಿಗೆ ನೀಡಿ ಶಿವನ ದೇಗುಲದ ಮುಂದೆ ಮದುವೆ ಮಾಡಿಸಿದ ಪತಿ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

21 ವರ್ಷದ ದಾಂಪತ್ಯಕ್ಕೆ ಅಂತ್ಯ: 5 ಮಕ್ಕಳ ತಾಯಿಯನ್ನು ಪ್ರಿಯಕರನಿಗೆ ನೀಡಿ ಶಿವನ ದೇಗುಲದ ಮುಂದೆ ಮದುವೆ ಮಾಡಿಸಿದ ಪತಿ!

Share
ಮದುವೆ
Share

ಸಂತ ಕಬೀರ್ ನಗರ (ಉತ್ತರ ಪ್ರದೇಶ): ದಾಂಪತ್ಯದಲ್ಲಿ ದಿನನಿತ್ಯದ ಜಗಳ ಮತ್ತು ಅಶಾಂತಿಗೆ ಅಂತ್ಯ ಹಾಡಲು ಪತಿಯೊಬ್ಬ ತನ್ನ ಹೆಂಡತಿಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿ ಕಳುಹಿಸಿಕೊಟ್ಟಿರುವ ಅಪರೂಪದ ಘಟನೆ ಉತ್ತರ ಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯಲ್ಲಿ ನಡೆದಿದೆ.

21 ವರ್ಷಗಳ ದಾಂಪತ್ಯ, 5 ಮಕ್ಕಳು:

ದೇಬ್ರಿ ಗ್ರಾಮದ ಬುದ್ಧಿರಾಮ್ ನಿಷಾದ್ (45) ಹಾಗೂ ಫೂಲ್ಮತಿ (37) 21 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ 18 ವರ್ಷದ ಮಗ ಸೇರಿದಂತೆ ಒಟ್ಟು ಐದು ಜನರಿದ್ದಾರೆ. ಆದರೆ, ಕೆಲವು ತಿಂಗಳ ಹಿಂದೆ ಫೂಲ್ಮತಿಗೆ 26 ವರ್ಷದ ಅವಧೇಶ್ ಎಂಬ ಯುವಕನ ಪರಿಚಯವಾಗಿ ಪ್ರೇಮಾಂಕುರವಾಗಿದೆ.

ನಿರಂತರ ಗೊಂದಲ, ಕುಟುಂಬದ ಸಮ್ಮುಖದಲ್ಲೇ ಮದುವೆ:

ಎರಡು ತಿಂಗಳ ಹಿಂದೆ ಫೂಲ್ಮತಿ ಪ್ರಿಯಕರನೊಂದಿಗೆ ತೆರಳಿದ್ದರೂ, ಕುಟುಂಬಸ್ಥರ ಮನವೊಲಿಕೆಯ ನಂತರ ಮನೆಗೆ ಮರಳಿದ್ದರು. ಆದಾಗ್ಯೂ ಮನೆಯಲ್ಲಿದ್ದ ಕಲಹ ಶಮನವಾಗಲಿಲ್ಲ. ಪ್ರತಿದಿನದ ಜಗಳದಿಂದ ಬೇಸತ್ತ ಬುದ್ಧಿರಾಮ್, ಹೆಂಡತಿಯ ಇಷ್ಟದಂತೆ ಆಕೆಯ ಮದುವೆಯನ್ನು ಪ್ರಿಯಕರನೊಂದಿಗೆ ನೆರವೇರಿಸಲು ತೀರ್ಮಾನಿಸಿದರು.

ಅಶ್ರಫ್‌ಪುರ ಗ್ರಾಮದ ಶಿವನ ದೇವಾಲಯದಲ್ಲಿ ಗ್ರಾಮಸ್ಥರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆ ನೆರವೇರಿತು. ಪತಿ ಬುದ್ಧಿರಾಮ್ ಸ್ವತಃ ಮದುವೆ ಸಮಾರಂಭದಲ್ಲಿ ಭಾಗವಹಿಸಿ, ಹೆಂಡತಿಯ ಬೀಳ್ಕೊಡುಗೆ (ಬಿದಾಯಿ) ಕಾರ್ಯಕ್ರಮವನ್ನೂ ನಡೆಸಿಕೊಟ್ಟರು. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles