Home ಕ್ರೈಂ ನ್ಯೂಸ್ ಮಹಿಳಾ ಶೌಚಾಲಯದ ವಾಶ್‌ಬೇಸಿನ್ ಅಡಿಯಲ್ಲಿ ಮೊಬೈಲ್ ಗುಪ್ತ ಕ್ಯಾಮೆರಾ: ಆರೋಪಿ ಜೈಲಿಗೆ
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಮಹಿಳಾ ಶೌಚಾಲಯದ ವಾಶ್‌ಬೇಸಿನ್ ಅಡಿಯಲ್ಲಿ ಮೊಬೈಲ್ ಗುಪ್ತ ಕ್ಯಾಮೆರಾ: ಆರೋಪಿ ಜೈಲಿಗೆ

Share
ಮಹಿಳಾ
Share

ಹೈದರಾಬಾದ್: ಹೈದರಾಬಾದ್‌ನ ಕಾವಡಿಗುಡ ಪ್ರದೇಶದಲ್ಲಿರುವ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಕಚೇರಿಯ ಮಹಿಳಾ ಶೌಚಾಲಯದಲ್ಲಿ ರಹಸ್ಯವಾಗಿ ಮೊಬೈಲ್ ಫೋನ್ ಅಳವಡಿಸಿ ಕೃತ್ಯ ಎಸಗಲು ಯತ್ನಿಸಿದ ಆರೋಪದ ಮೇಲೆ ಫ್ಲೋರ್ ಅಟೆಂಡೆಂಟ್‌ ವೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 13 ರಂದು ಕಚೇರಿಯ 6ನೇ ಮಹಡಿಯ ಮಹಿಳಾ ಶೌಚಾಲಯದಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಕಚೇರಿಯ 35 ವರ್ಷ ವಯಸ್ಸಿನ ಮುಖ್ಯ ವ್ಯವಸ್ಥಾಪಕರು (ಚೀಫ್ ಮ್ಯಾನೇಜರ್) ಶೌಚಾಲಯಕ್ಕೆ ತೆರಳಿದ್ದಾಗ ವಾಶ್‌ಬೇಸಿನ್ ಕೆಳಗೆ, ಕಮೋಡ್‌ಗೆ ನೇರವಾಗಿ ಅಭಿಮುಖವಾಗಿ ಬಿಳಿ ಕಾಗದದಲ್ಲಿ ಸುತ್ತಿ, ಎರಡು ರಂಧ್ರಗಳನ್ನು ಮಾಡಿ ಗೋಡೆಗೆ ಟೇಪ್‌ನಿಂದ ಅಂಟಿಸಿದ್ದ ಮೊಬೈಲ್ ಫೋನ್ ಅನ್ನು ಗಮನಿಸಿದ್ದಾರೆ. ಆರಂಭದಲ್ಲಿ ಅದನ್ನು ಏರ್ ಫ್ರೆಶ್ನರ್ ಎಂದು ಭಾವಿಸಿದ್ದರೂ, ನಂತರ ಅದು ಮೊಬೈಲ್ ಫೋನ್ ಎಂದು ತಿಳಿದುಬಂದಿದೆ. ಕೂಡಲೇ ಅದನ್ನು ಹೊರಗೆ ತಂದು ವಿಚಾರಿಸಿದಾಗ, ಆರೋಪಿ ಅಟೆಂಡೆಂಟ್ ಫೋನ್ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ನಂತರ ಸಿಬ್ಬಂದಿ ಹಾಗೂ ಭದ್ರತಾ ಸಿಗ್ದು ಆತನನ್ನು ಹಿಡಿದಿದ್ದಾರೆ.

ಘಟನೆಯ ಸ್ಥಳ: ಹೈದರಾಬಾದ್‌ನ ಕಾವಡಿಗುಡದಲ್ಲಿರುವ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಕಚೇರಿ.

ಕೃತ್ಯದ ರೀತಿ: ವಾಶ್‌ಬೇಸಿನ್ ಕೆಳಗೆ ರಂಧ್ರವಿರುವ ಬಿಳಿ ಕಾಗದದಲ್ಲಿ ಮೊಬೈಲ್ ಫೋನ್ ಅನ್ನು ಟೇಪ್ ಮಾಡಿ ರಹಸ್ಯ ರೆಕಾಡಿಂಗ್ ಮಾಡಲು ಯತ್ನ.

ಆರೋಪಿಯ ವರ್ತನೆ: ಸಿಬ್ಬಂದಿ ಮೊಬೈಲ್‌ನಲ್ಲಿ ಪಿನ್-ಪ್ರೊಟೆಕ್ಟೆಡ್ ಫೋಲ್ಡರ್ ಪರಿಶೀಲಿಸಲು ಮುಂದಾದಾಗ, ಆರೋಪಿ ಮೊಬೈಲ್ ಅನ್ನು ಕಸಿದುಕೊಂಡು ನೆಲಕ್ಕೆ ಎಸೆದು ನಾಶಪಡಿಸಲು ಯತ್ನಿಸಿದ್ದಾನೆ.

ಕಾನೂನು ಕ್ರಮ: ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಕ್ಟೋಬರ್ 22 ರಂದು ಪ್ರಕರಣವನ್ನು ಹೈದರಾಬಾದ್ ಸೈಬರ್‌ಕ್ರೈಮ್ ಪೊಲೀಸರಿಗೆ ವರ್ಗಾಯಿಸಲಾಗಿದೆ. ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಚೇರಿಯ ಮಹಿಳಾ ಸಿಬ್ಬಂದಿಯ ಗೌಪ್ಯತೆಯನ್ನು ರಕ್ಷಿಸಲು ಮತ್ತು ಮೊಬೈಲ್‌ನಲ್ಲಿ ಯಾವುದೇ ರಹಸ್ಯ ರೆಕಾರ್ಡಿಂಗ್‌ಗಳು ನಡೆದಿದೆಯೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ದೂರುದಾರರು ಒತ್ತಾಯಿಸಿದ್ದಾರೆ. ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಆರೋಪಿಯ ಕಸ್ಟಡಿಗೆ ಕೋರಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles