Home ದಾವಣಗೆರೆ ಮದುವೆಯ ಉಡುಪಿನಲ್ಲೇ 18 ಕಿ.ಮೀ. ನಡೆದು ಗಂಡನ ಮನೆ ಸೇರಿದ ನವವಧು: ರಸ್ತೆಗಾಗಿ ಮುಖ್ಯಮಂತ್ರಿಗೆ ಕಣ್ಣೀರಿನ ಮನವಿ!
ದಾವಣಗೆರೆನವದೆಹಲಿಬೆಂಗಳೂರು

ಮದುವೆಯ ಉಡುಪಿನಲ್ಲೇ 18 ಕಿ.ಮೀ. ನಡೆದು ಗಂಡನ ಮನೆ ಸೇರಿದ ನವವಧು: ರಸ್ತೆಗಾಗಿ ಮುಖ್ಯಮಂತ್ರಿಗೆ ಕಣ್ಣೀರಿನ ಮನವಿ!

Share
ಮದುವೆ
Share

ಉತ್ತರಾಖಂಡ: ಮದುವೆಯ ದಿನವೆಂದರೆ ಪ್ರತಿಯೊಬ್ಬ ಹೆಣ್ಣಿನ ಜೀವನದಲ್ಲೂ ಮರೆಯಲಾಗದ ಸುಂದರ ಕ್ಷಣ. ಕೈತುಂಬಾ ಬಳೆ, ಆಭರಣ, ಸುಂದರವಾದ ಲೆಹೆಂಗಾ ತೊಟ್ಟು, ನೂರಾರು ಕನಸುಗಳನ್ನು ಹೊತ್ತು ಗಂಡನ ಮನೆಗೆ ಕಾಲಿಡುವ ಆಸೆ ಪ್ರತಿಯೊಬ್ಬ ವಧುವಿಗೂ ಇರುತ್ತದೆ. ಆದರೆ ಉತ್ತರಾಖಂಡದ ಶರ್ಮಿಳಾ ಎಂಬ ನವವಧುವಿಗೆ ಮದುವೆಯ ಸಂಭ್ರಮದ ನಡುವೆಯೇ ಕಹಿ ಅನುಭವ ಎದುರಾಗಿದೆ.

ಗ್ರಾಮಕ್ಕೆ ಸರಿಯಾದ ರಸ್ತೆ ಸಂಪರ್ಕವಿಲ್ಲದ ಕಾರಣ, ಮದುವೆಯ ಭಾರವಾದ ಲೆಹೆಂಗಾ ಹಾಗೂ ಆಭರಣಗಳನ್ನಿಟ್ಟುಕೊಂಡೇ ಬರೋಬ್ಬರಿ 18 ಕಿಲೋಮೀಟರ್ ಕಡಿದಾದ ಬೆಟ್ಟದ ದಾರಿಯಲ್ಲಿ ಕಾಲ್ನಡಿಗೆಯಲ್ಲೇ ಸಾಗಬೇಕಾದ ನರಕಯಾತನೆ ಎದುರಾಗಿದೆ.

ಹೊಸ ಜೀವನದ ಸಂಭ್ರಮದಲ್ಲಿರಬೇಕಾದ ವಧು ದಣಿದು ಬಸವಳಿದು ಗಂಡನ ಮನೆ ತಲುಪಿದ್ದು, ಈ ಘಟನೆ ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ತಾನು ಅನುಭವಿಸಿದ ಈ ಕಷ್ಟವನ್ನು ತನ್ನ ಊರಿನ ಜನ ಪ್ರತಿದಿನ ಅನುಭವಿಸುತ್ತಿದ್ದಾರೆ ಎಂಬ ನೋವಿನಿಂದ ನವವಧು ಶರ್ಮಿಳಾ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ವಿಡಿಯೋ ಮೂಲಕ ಭಾವನಾತ್ಮಕ ಮನವಿ ಸಲ್ಲಿಸಿದ್ದಾರೆ. “ನಾನಂತೂ ಮದುವೆಯ ಉಡುಗೆಯಲ್ಲೇ 18 ಕಿಲೋಮೀಟರ್ ನಡೆದುಬಿಟ್ಟೆ. ಆದರೆ ನಮ್ಮೂರಿನ ಜನ ಪ್ರತಿದಿನ ಇದೇ ಕಷ್ಟ ಅನುಭವಿಸುತ್ತಿದ್ದಾರೆ. ದಯವಿಟ್ಟು ನಮ್ಮೂರಿಗೆ ರಸ್ತೆ ಮಾಡಿಸಿಕೊಡಿ” ಎಂದು ಕಣ್ಣೀರಿಡುತ್ತಾ ವಿನಂತಿಸಿಕೊಂಡಿದ್ದಾರೆ.

ಕಷ್ಟಕರ ಪ್ರಯಾಣ: ರಸ್ತೆ ಸಂಪರ್ಕವಿಲ್ಲದೆ ಮದುವೆಯ ಭಾರವಾದ ಉಡುಪಿನಲ್ಲಿಯೇ 18 ಕಿ.ಮೀ. ಬೆಟ್ಟದ ಹಾದಿಯಲ್ಲಿ ಸಾಗಿದ ನವವಧು.

ಮುಖ್ಯಮಂತ್ರಿಗಳಿಗೆ ಮನವಿ: ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರಿಗೆ ವಿಡಿಯೋ ಸಂದೇಶದ ಮೂಲಕ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸಲು ಅಗ್ರಹ.

ಗ್ರಾಮೀಣರ ದಿನನಿತ್ಯದ ನರಕಯಾತನೆ: ಶಿಕ್ಷಣ, ತುರ್ತು ವೈದ್ಯಕೀಯ ನೆರವು ಹಾಗೂ ಗರ್ಭಿಣಿಯರಿಗೆ ಸುರಕ್ಷಿತ ದಾರಿಗಾಗಿ ತಕ್ಷಣವೇ ರಸ್ತೆ ನಿರ್ಮಾಣ ಮಾಡಲು ಸ್ಥಳೀಯರ ಆಗ್ರಹ.

ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಜನರು ಮೂಲಭೂತ ಸೌಕರ್ಯಕ್ಕಾಗಿ ಕಣ್ಣೀರು ಹಾಕಬೇಕಾದ ಪರಿಸ್ಥಿತಿ ಬದಲಾಗಬೇಕಿದೆ. ಶರ್ಮಿಳಾ ಅವರ ಈ ಮನವಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಗ್ರಾಮಕ್ಕೆ ತಕ್ಷಣವೇ ಅಗತ್ಯ ರಸ್ತೆ ಸಂಪರ್ಕವನ್ನು ಕಲ್ಪಿಸಿಕೊಡಬೇಕಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles