SUDDIKSHANA KANNADA NEWS/ DAVANAGERE/ DATE:16-11-2024
ದಾವಣಗೆರೆ: ಕಾಗಿನೆಲೆ ಕನಕ ಗುರು ಪೀಠದ ಹೊಸದುರ್ಗ ಶಾಖಾ ಮಠ ಕೆಲ್ಲೂಡ್ ನಲ್ಲಿ ಈ ಬಾರಿ ನಡೆಯುತ್ತಿರುವ ಏಳನೇ ಲಕ್ಷ ದೀಪೋತ್ಸವ ಹಾಗೂ ವಿಶಾಲ ಮಠದ ಅವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀಗಳ ಸುಸಜ್ಜಿತ ಮಠ, ಶೈಕ್ಷಣಿಕ ಕಟ್ಟಡಗಳು, ಏಷ್ಯಾದಲ್ಲಿಅತ್ಯಂತ ಬೃಹತ್ ಎತ್ತರದ 37 ಅಡಿಯ ಕನಕ ಶಿಲಾಮೂರ್ತಿ ಸೇರಿದಂತೆ ಬೃಹತ್ ಬೃಂದಾವನ ಇಂಥ ಅದ್ಭುತ ಪೂರ್ವ ಅಭಿವೃದ್ಧಿ ಕಾರ್ಯಗಳಿಗೆ ಭಕ್ತಾದಿಗಳಿಗೆ ನಿತ್ಯವೂ ಅನ್ನದಾನ ದಾಸೋಹಕ್ಕೆ ಇಡೀ ದಾವಣಗೆರೆ ಜಿಲ್ಲೆಯ ಭಕ್ತರು ದೇಣಿಗೆ ನೀಡುತ್ತಿದ್ದಾರೆ.
ದಾವಣಗೆರೆ ನಗರದ ಭಕ್ತರು ಕೂಡ 130 ಪಾಕೆಟ್ ಗೂ ಹೆಚ್ಚು ಅಕ್ಕಿಯನ್ನು ಇಂದು ಶ್ರೀಗಳಿಗೆ ಸಮರ್ಪಣೆ ಮಾಡಿದರು. ನಗರದ ಜಿಲ್ಲಾ ವಿದ್ಯಾ ವರ್ಧಕ ಸಂಘದ ಬಯಲು ಸಭಾಂಗಣದಲ್ಲಿ ಜಿಲ್ಲೆಯ ಕುರುಬ ಸಮಾಜ ಸೇರಿದಂತೆ ವಿದ್ಯಾವರ್ಧಕ ಸಂಘ ಸದಸ್ಯರು, ಹಾಲುಮತ ಮಹಾಸಭಾ, ಸಂಗೊಳ್ಳಿ ರಾಯಣ್ಣ ಯುವ ಗರ್ಜನೆ ಸೇರಿದಂತೆ ಕುರುಬ ಸಮಾಜದ ವಿವಿಧ ಸಂಘಟನೆಗಳ ಭಕ್ತರು, ನೌಕರರು, ಉದ್ಯಮಿಗಳು, ದಾವಣಗೆರೆ ಸುತ್ತಮುತ್ತಲಿನ ಗ್ರಾಮಗಳ ರೈತರು ಸೇರಿದಂತೆ ಪಾಲ್ಗೊಂಡು ಶ್ರೀಗಳಿಗೆ ಭಕ್ತಿಪೂರ್ವಕವಾಗಿ ಅಕ್ಕಿ ಸಮರ್ಪಿಸಿದ್ದು ವಿಶೇಷ.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ಶ್ರೀ ಈಶ್ವರಾನಂದ ಪುರಿ ಶ್ರೀಗಳು ಮಠ ಮತ್ತು ಕಾಗಿನೆಲೆ ಗುರುಪೀಠ ಇಡೀ ಈ ಭಾಗದ ಭಕ್ತಿ ಪ್ರೇಮದ ಸಂಕೇತ. ಒಟ್ಟಾರೆ ನಮ್ಮ ತಳ ಸಮುದಾಯದ ಹಿಂದುಳಿದ ವರ್ಗದ ಸ್ವಾಭಿಮಾನದ ಸಂಕೇತವೂ ಕೂಡ ಹೌದು. ಭಕ್ತರು ಇದ್ದರೆ ಗುರುಪೀಠಗಳು, ಭಕ್ತರು ನೀಡುವ ಸೇವೆ ಅನನ್ಯ. ಸಂಘಟಿತ ಒಗ್ಗೂಡಿಕೆಯ ಸಮಾಜದ ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಶಕ್ತಿ ಕೇಂದ್ರವೂ ಕೂಡ ಆಗಬೇಕಾದಂತಹ ತುರ್ತು ಅಗತ್ಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಇತ್ತೀಚಿನ ವರ್ಷಗಳ ಹಿಂದೆ ಬೀರೇಂದ್ರ ಶ್ರೀಗಳು ಆಶಿಸಿದಂತೆ ರಾಜ್ಯದ 50 ಲಕ್ಷಕ್ಕೂ ಹೆಚ್ಚು ಶೋಷಿತ ಹಿಂದುಳಿದ ಕುರುಬ ಸಮುದಾಯ ಇಡೀ ದೇಶದ ಇತರೆ ವರ್ಗದ ಸಮುದಾಯಗಳ ಜೊತೆ ಸೌಹಾರ್ದ ಸಂಘಟನೆ ಒಗ್ಗೂಡಿಕೆ ಸಹಬಾಳ್ವೆಯಿಂದ ತಲೆಯೆತ್ತಿ ನಿಲ್ಲಬೇಕಾಗಿದೆ. ತಮ್ಮಲ್ಲಿನ ಸಂಕಚಿತ ಭಾವನೆಗಳನ್ನು ತೊಡೆದು ಹಾಕಿ. ನಾವೆಲ್ಲಾ ಗುರುಪೀಠದ ಶ್ರೇಷ್ಠತೆಯ ಸ್ವಾಭಿಮಾನದ ಭಕ್ತರು ಎಂದು ಆತ್ಮಭಿಮಾನದಿಂದ ತಲೆಎತ್ತಿ ನಿಲ್ಲಿ ಎಂದು ಕರೆ ನೀಡಿದರು.
ಇತ್ತೀಚೆಗೆ ಕುರುಬ ಸಮಾಜದ ಮೇಲೆ ನಡೆಯುತ್ತಿರುವ ರಾಜಕೀಯ ದಬ್ಬಾಳಿಕೆ, ಸಾಮಾಜಿಕ ಶೋಷಣೆ, ಶೈಕ್ಷಣಿಕ ಅಸಮಾನತೆ ವಿರುದ್ಧ ಎದ್ದು ನಿಲ್ಲಬೇಕಿದೆ. ಸ್ವಾತಂತ್ರ್ಯ ಸ್ವಾಭಿಮಾನಿ, ಸಂಗೊಳ್ಳಿ ರಾಯಣ್ಣರ ಆಶಯಗಳು ಈಡೇರಬೇಕಾಗಿದೆ. ಅದಕ್ಕಾಗಿ ನೀವೆಲ್ಲ ಒಗ್ಗೂಡಿ ಗುರು ಪೀಠಗಳನ್ನು ಗಟ್ಟಿಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ ಕುಂಬಳೂರು ಪಾಲಾಕ್ಷಪ್ಪ, ಲೋಕಿಕೆರೆ ಸಿದ್ದಪ್ಪ, ಸತೀಶ್ ಕೊಳೇನಹಳ್ಳಿ,
ಸಿದ್ದಲಿಂಗಪ್ಪ, ಹಲವರು ಮಾತನಾಡಿದರು,
ನಗರಸಭೆ ಮಾಜಿ ಸದಸ್ಯ ಎಲ್ಐಸಿ ನಿಂಗಣ್ಣ, ಕನಕ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪರಶುರಾಮ್, ದಾವಣಗೆರೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕುಂದುವಾಡ ಗಣೇಶಪ್ಪ, ಕಾರ್ಯದರ್ಶಿ ದೀಪಕ್ ಜೋಗಪ್ಪನವರ್, ಸ್ವಾಭಿಮಾನಿ ಬಳಗದ ಪುರಂದರ ಲೋಕಿಕೆರೆ, ಹದಡಿ ಮಾಂತೇಶ್ ತ್ಯಾವಣಗಿ, ಮಹಾಂತೇಶ್, ಕೊಗನೂರು ಮಂಜು ಎಕ್ಕನಹಳ್ಳಿ ದ್ಯಾಮಣ್ಣ, ಮಹಾನಗರ ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್, ಅಣಬೆರು ಶಿವಮೂರ್ತಿ, ಬಟ್ಟಲಕಟ್ಟೆ ಪರಶುರಾಮ್, ಶಿಕ್ಷಕ ಲೋಕಿಕೆರೆ ಶಂಕರ್ ಮೂರ್ತಿ, ಹದಡಿ ಬಸವರಾಜ್, ನಿವೃತ್ತ ಶಿಕ್ಷಕ ಶಿವಣ್ಣ, ತಕ್ಕಡಿ ಮಂಜು ಮಂಜುನಾಥ್, ಆನೇಕಲ್ ವೀರಣ್ಣ, ಷಣ್ಮುಖಪ್ಪ, ಶಶಿಧರ್ ಮತ್ತಿತರರು ಹಾಜರಿದ್ದರು. ದೀಟೂರು ಚಂದ್ರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.