Home ಬೆಂಗಳೂರು ಕಳೆದ ವರ್ಷದ ಧನತೇರಸ್‌ಗೆ ಹೋಲಿಸಿದರೆ ಚಿನ್ನದ ಬೆಲೆ ಎಷ್ಟು ಏರಿಕೆಯಾಗಿದೆ? ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆ ಹೇಗಿದೆ?
ಬೆಂಗಳೂರುದಾವಣಗೆರೆವಾಣಿಜ್ಯ

ಕಳೆದ ವರ್ಷದ ಧನತೇರಸ್‌ಗೆ ಹೋಲಿಸಿದರೆ ಚಿನ್ನದ ಬೆಲೆ ಎಷ್ಟು ಏರಿಕೆಯಾಗಿದೆ? ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆ ಹೇಗಿದೆ?

Share
ಚಿನ್ನ
Share

ನವದೆಹಲಿ: ಕಳೆದ ವರ್ಷದ ಧನತೇರಸ್‌ಗೆ ಹೋಲಿಸಿದರೆ ಈ ಬಾರಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದು, ಗ್ರಾಹಕರು ಹೆಚ್ಚಿನ ಹಣ ತೆರಬೇಕಾಗಿದೆ. ಈ ವರ್ಷದ ಜನವರಿಯಲ್ಲಿ ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟ ತಲುಪಿದ್ದ ಹಳದಿ ಲೋಹದ ಬೆಲೆ, ಇತ್ತೀಚಿನ ತಿಂಗಳುಗಳಲ್ಲಿ ತುಸು ಇಳಿಕೆ ಕಂಡಿದೆ. ಆದಾಗ್ಯೂ, ಕಳೆದ ವರ್ಷಕ್ಕೆ ಹೋಲಿಸಿದರೆ ಹೂಡಿಕೆದಾರರಿಗೆ ಸಾಧಾರಣ ಲಾಭ ದೊರೆತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಹಣದುಬ್ಬರ, ಬಡ್ಡಿ ದರ ಹಾಗೂ ಡಾಲರ್ ಬಲಗೊಳ್ಳುತ್ತಿರುವುದು ಚಿನ್ನದ ಬೆಲೆಯ ಮೇಲೆ ಪ್ರಮುಖ ಪ್ರಭಾವ ಬೀರುತ್ತಿದೆ.

ಪ್ರಸ್ತುತ ಧನತೇರಸ್‌ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1.38 ಲಕ್ಷದಿಂದ 1.41 ಲಕ್ಷ ರೂ.ಗಳ ನಡುವೆ ಇದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 1.27 ಲಕ್ಷದಿಂದ 1.29 ಲಕ್ಷ ರೂ.ಗಳ ಆಸುಪಾಸಿನಲ್ಲಿದೆ (ಜಿಎಸ್‌ಟಿ ಮತ್ತು ತಯಾರಿಕಾ ಶುಲ್ಕ ಹೊರತುಪಡಿಸಿ).

ಬೆಲೆ ಏರಿಕೆ ವಿವರ: ಕಳೆದ ವರ್ಷದ ಧನತೇರಸ್‌ಗೆ ಹೋಲಿಸಿದರೆ ಚಿನ್ನವು ಶೇ. 5.5 ರಿಂದ 7.6 ರಷ್ಟು ದುಬಾರಿಯಾಗಿದೆ. ಇದು ಕಳೆದ ಒಂದು ವರ್ಷದಲ್ಲಿ ಪ್ರತಿ 10 ಗ್ರಾಂಗೆ ಸುಮಾರು 8,000 ರೂ.ಗಳಿಂದ 10,000 ರೂ.ಗಳವರೆಗೆ ಹೆಚ್ಚಳ ಕಂಡಿದೆ.

ಕೇಂದ್ರ ಬ್ಯಾಂಕ್‌ಗಳ ಖರೀದಿ ಭರಾಜೆ: ವಿಶ್ವ ಚಿನ್ನದ ಮಂಡಳಿಯ (WGC) ವರದಿಯ ಪ್ರಕಾರ, ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕೇಂದ್ರ ಬ್ಯಾಂಕ್‌ಗಳು ತಮ್ಮ ಮೀಸಲು ನಿಧಿಗೆ 321 ಟನ್ ಚಿನ್ನವನ್ನು ಸೇರಿಸಿಕೊಂಡಿವೆ. ಇದು ಹಿಂದಿನ ವರ್ಷಕ್ಕಿಂತ ಶೇ. 42ರಷ್ಟು ಹೆಚ್ಚಾಗಿದೆ.

ಭಾರತದಲ್ಲಿ ಬೇಡಿಕೆ ಮತ್ತು ಡಿಜಿಟಲ್ ಗೋಲ್ಡ್: ಭಾರತದಲ್ಲಿ ಒಟ್ಟಾರೆ ಆಭರಣ ಬೇಡಿಕೆ ಇಳಿಕೆಯಾಗಿದ್ದರೂ, ಭಾರತೀಯರ ನಡುವೆ ಡಿಜಿಟಲ್ ಚಿನ್ನದ ಖರೀದಿಯು ಭರ್ಜರಿ ಏರಿಕೆ ಕಂಡಿದ್ದು, ಶೇ. 44ರಷ್ಟು ಹೆಚ್ಚಳ ದಾಖಲಾಗಿದೆ.

ಹೂಡಿಕೆದಾರರು ಮುನ್ನೆಚ್ಚರಿಕೆ ವಹಿಸುತ್ತಿದ್ದರೂ, ಕೇಂದ್ರ ಬ್ಯಾಂಕ್‌ಗಳು ಮತ್ತು ಸಾಂಸ್ಥಿಕ ಹೂಡಿಕೆದಾರರಿಂದ ಚಿನ್ನಕ್ಕೆ ನಿರಂತರ ಬೆಂಬಲ ದೊರೆಯುತ್ತಿದೆ.

Share

Leave a comment

Leave a Reply

Your email address will not be published. Required fields are marked *

Related Articles