Home ದಾವಣಗೆರೆ ಮದುವೆಗೆ ಒತ್ತಾಯಿಸಿದ ಮಹಿಳಾ ಶಿಕ್ಷಕಿ ಹತ್ಯೆ, ಕಾರಿನ ಡಿಕ್ಕಿಯಲ್ಲಿ ಶವವಿಟ್ಟು ತಿರುಗಾಡಿದ ಶಾಲಾ ಮ್ಯಾನೇಜರ್!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಮದುವೆಗೆ ಒತ್ತಾಯಿಸಿದ ಮಹಿಳಾ ಶಿಕ್ಷಕಿ ಹತ್ಯೆ, ಕಾರಿನ ಡಿಕ್ಕಿಯಲ್ಲಿ ಶವವಿಟ್ಟು ತಿರುಗಾಡಿದ ಶಾಲಾ ಮ್ಯಾನೇಜರ್!

Share
ಶಿಕ್ಷಕಿ
Share

ದೇವರಿಯಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯಲ್ಲಿ ತನ್ನನ್ನು ಮದುವೆಯಾಗುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದ 26 ವರ್ಷದ ಮಹಿಳಾ ಶಿಕ್ಷಕಿಯನ್ನು ಶಾಲಾ ಮ್ಯಾನೇಜರ್ ಒಬ್ಬರು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ವಿ ಎನ್ ಸೆಂಟ್ರಲ್ ಅಕಾಡೆಮಿಯ ಮ್ಯಾನೇಜರ್ ಆಗಿರುವ ವಿಜಯ್ ನಿಶಾದ್ ಎಂಬಾತನೇ ಈ ಕೃತ್ಯವೆಸಗಿದ ಆರೋಪಿಯಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಮೃತ ಶಿಕ್ಷಕಿಯನ್ನು ರಾಣಿ ವಿಶ್ವಕರ್ಮ ಎಂದು ಗುರುತಿಸಲಾಗಿದೆ. ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ, ಆರೋಪಿ ವಿಜಯ್ ನಿಶಾದ್ ತನ್ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನು. ಆದರೆ ಆಕೆ ತನನ್ನು ಮದುವೆಯಾಗುವಂತೆ ತೀವ್ರ ಒತ್ತಡ ಹೇರಿದಾಗ, ಅಕ್ಟೋಬರ್ 31ರಂದು ಶಾಲೆಯ ಬಳಿ ಮಾತಿಗೆ ಮಾತು ಬೆಳೆದು, ಕಾರಿನಲ್ಲಿ ಕರೆದೊಯ್ದು ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿ ಇರಿಸಿಕೊಂಡು ಇಡೀ ದಿನ ಊರಾದ್ಯಂತ ತಿರುಗಾಡಿ, ರಾತ್ರಿ ವೇಳೆ ನಿರ್ಜನ ಪ್ರದೇಶದಲ್ಲಿ ಶವ ಎಸೆದು ಪರಾರಿಯಾಗಿದ್ದನು.

ಕಾರಿನ ಡಿಕ್ಕಿಯಲ್ಲಿ ಶವ ಸಾಗಾಟ: ಕೊಲೆ ಮಾಡಿದ ಬಳಿಕ ಶವವನ್ನು ತನ್ನ ಮಾರುತಿ ವ್ಯಾಗನ್ಆರ್ ಕಾರಿನ ಡಿಕ್ಕಿಯಲ್ಲಿ ಮುಚ್ಚಿಟ್ಟು, ಇಡೀ ದಿನ ಕಾರಿನಲ್ಲೇ ತೆಗೆದುಕೊಂಡು ಓಡಾಡಿದ್ದಾನೆ.

ಸಾಕ್ಷ್ಯ ನಾಶಕ್ಕೆ ಯತ್ನ: ಹತ್ಯೆಯ ದಿನವೇ ಯುವತಿಯ ಮೊಬೈಲ್ ಫೋನ್ ಒಡೆದುಹಾಕಿ, ಎಟಿಎಂ ಕಾರ್ಡ್ ಅನ್ನು ರಸ್ತೆಯಲ್ಲಿ ಎಸೆಯುವ ಮೂಲಕ ಸಾಕ್ಷ್ಯ ನಾಶಪಡಿಸಲು ಆರೋಪಿ ಯತ್ನಿಸಿದ್ದಾನೆ.

ಪೊಲೀಸರಿಂದ ಕೃತ್ಯದ ತನಿಖೆ: ಮೃತರ ಕುಟುಂಬದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103(1) ಮತ್ತು 238ರಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕಾರನ್ನು ವಶಕ್ಕೆ ಪಡೆದು ವಿಧಿವಿಜ್ಞಾನ ಪರೀಕ್ಷೆ ನಡೆಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles