Home ದಾವಣಗೆರೆ ಕ್ಯಾನ್ವಾದಲ್ಲಿ ಬೃಹತ್ ಉದ್ಯೋಗ ಕಡಿತ: ಶೇ. 22ರಷ್ಟು ಅಂದರೆ 1,200ಕ್ಕೂ ಅಧಿಕ ನೌಕರರ ವಜಾಗೊಳಿಸಿದ ಡಿಸೈನ್ ದೈತ್ಯ ಕಂಪನಿ!
ದಾವಣಗೆರೆಉದ್ಯೋಗ ವಾರ್ತೆನವದೆಹಲಿಬೆಂಗಳೂರು

ಕ್ಯಾನ್ವಾದಲ್ಲಿ ಬೃಹತ್ ಉದ್ಯೋಗ ಕಡಿತ: ಶೇ. 22ರಷ್ಟು ಅಂದರೆ 1,200ಕ್ಕೂ ಅಧಿಕ ನೌಕರರ ವಜಾಗೊಳಿಸಿದ ಡಿಸೈನ್ ದೈತ್ಯ ಕಂಪನಿ!

Share
ಕ್ಯಾನ್ವಾ
Share

ಸಿಡ್ನಿ (ಆಸ್ಟ್ರೇಲಿಯಾ): ವಿಶ್ವಪ್ರಸಿದ್ಧ ಡಿಸೈನ್ ತಂತ್ರಜ್ಞಾನ ಸಂಸ್ಥೆಯಾದ ‘ಕ್ಯಾನ್ವಾ’ (Canva) ತನ್ನ ಜಾಗತಿಕ ಕಾರ್ಯಪಡೆಯ ಶೇ. 22ರಷ್ಟು ನೌಕರರನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ಕಂಪನಿಯ 13 ವರ್ಷಗಳ ಇತಿಹಾಸದಲ್ಲೇ ಇದು ಅತ್ಯಂತ ಕಠಿಣ ಮತ್ತು ಕರಾಳ ಕ್ಷಣ ಎಂದು ಸಿಇಒ ಮೆಲನಿ ಪರ್ಕಿನ್ಸ್ ತಿಳಿಸಿದ್ದಾರೆ.

ಮಾರುಕಟ್ಟೆಯಲ್ಲಿ ಉಂಟಾಗಿರುವ ಬದಲಾವಣೆಗಳು ಮತ್ತು ನಿಧಾನಗೊಂಡ ಆರ್ಥಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ವಿಶ್ವದಾದ್ಯಂತ 37 ದೇಶಗಳಲ್ಲಿ ಹರಡಿರುವಕ್ಯಾನ್ವಾ ಕಂಪನಿಯು ಸುಮಾರು 5,700ಕ್ಕೂ ಅಧಿಕ ನೌಕರರನ್ನು ಹೊಂದಿದ್ದು, ಪ್ರಸ್ತುತ 1,271 ನೌಕರರನ್ನು ಕೆಲಸದಿಂದ ಬಿಡುಗಡೆ ಮಾಡಲಾಗುತ್ತಿದೆ. ಕೃತಕ ಬುದ್ಧಿಮತ್ತೆ (AI) ಉಪಕರಣಗಳ ಹೆಚ್ಚಳ ಹಾಗೂ ಮಾರುಕಟ್ಟೆಯ ಸ್ಪರ್ಧೆಗೆ ತಕ್ಕಂತೆ ಕಂಪನಿಯನ್ನು ಮುಂದಿನ ದಶಕಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಈ ಮರುರಚನೆ ಮಾಡಲಾಗುತ್ತಿದೆ ಎಂದು ಸಿಇಒ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಇನ್ನುಮುಂದೆ ಸಿಡ್ನಿಯನ್ನು ಕಂಪನಿಯ ಪ್ರಾಥಮಿಕ ನೆಲೆಯನ್ನಾಗಿ ಮಾಡಲು ನಿರ್ಧರಿಸಲಾಗಿದೆ.

ಉದ್ಯೋಗ ಕಡಿತದ ವಿವರ: ಒಟ್ಟು ಜಾಗತಿಕ ಕಾರ್ಯಪಡೆಯ ಶೇ. 22ರಷ್ಟು ಸಿಬ್ಬಂದಿ ಅಂದರೆ 1,271 ನೌಕರರು ಈ ಉದ್ಯೋಗ ಕಡಿತಕ್ಕೆ ಒಳಗಾಗಲಿದ್ದಾರೆ.

ನೌಕರರಿಗೆ ಪರಿಹಾರ ಪ್ಯಾಕೇಜ್: ಕೆಲಸ ಕಳೆದುಕೊಳ್ಳುವ ನೌಕರರಿಗೆ ಕನಿಷ್ಠ ಆರು ತಿಂಗಳ ವೇತನ, ಒಂದು ವರ್ಷದ ಲಿಂಕ್ಡ್ಇನ್ ಪ್ರೀಮಿಯಂ, ಆರೋಗ್ಯ ವಿಮೆ ಮುಂದುವರಿಕೆ ಮತ್ತು ಕಂಪನಿಯ ಲ್ಯಾಪ್‌ಟಾಪ್‌ಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲು ಅವಕಾಶ ನೀಡಲಾಗಿದೆ.

ಸಾಮಾಜಿಕ ಉದ್ಯಮಗಳಿಗೆ ಧನಸಹಾಯ: ನೌಕರರು ಸ್ವಂತ ಉದ್ಯಮ ಅಥವಾ ಸ್ಥಳೀಯ ಸಮುದಾಯದ ಯೋಜನೆಗಳನ್ನು ಆರಂಭಿಸಲು ‘ಕೆನವಾ ಕಲೆಕ್ಟಿವ್ ಫಂಡ್’ ಮೂಲಕ ತಲಾ $10,000 ಅನುದಾನ ನೀಡಲಾಗುವುದು ಎಂದು ಕಂಪನಿ ಘೋಷಿಸಿದೆ.

Share

Leave a comment

Leave a Reply

Your email address will not be published. Required fields are marked *