SUDDIKSHANA KANNADA NEWS/ DAVANAGERE/ DATE:26-01-2025
ದಾವಣಗೆರೆ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 76 ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಈ ವೇಳೆ ಪ್ರದರ್ಶಿಸಿದ ನೃತ್ಯ ಜನರ ಮನಸೂರೆಗೊಂಡಿತು.
ಆಕರ್ಷಕ ಪಥ ಸಂಚಲನ: 29 ತಂಡಗಳು ತಮ್ಮ ಶಿಸ್ತಿನ ಮತ್ತು ಆಕರ್ಷಕ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದವು, ಪೊಲೀಸ್ ಅಧಿಕಾರಿ ಸೋಮಶೇಖರಪ್ಪ.ಹೆಚ್.ಬಿ ಅವರು ಪಥಸಂಚಲನದ ನೇತೃತ್ವ ವಹಿಸಿದ್ದರು.
ಮಹೇಶ್ ಪಾಟೀಲ್ ಆರ್.ಎಸ್.ಐ. ನೇತೃತ್ವದ ಡಿಎಆರ್ ತಂಡ, ನಾಗರಿಕ ಪೊಲೀಸ್ ತಂಡ ಇಮ್ತಿಯಾಜ್, ಗೃಹರಕ್ಷಕ ದಳದಿಂದ ಯಲ್ಲಪ್ಪ, ಅಗ್ನಿಶಾಮಕ ದಳ ಪ್ರೇಮಾನಂದ್, ಎನ್.ಸಿ.ಸಿ ಡಿ.ಆರ್.ಎಂ. ವಿಜ್ಞಾನ ಕಾಲೇಜು ಶರ್ನಿಲ್.ಡಿ.ಕೆ., ಎನ್.ಸಿ.ಸಿ ಎಆರ್ಜಿ ಕಾಲೇಜಿನ ಚಿನ್ಮಯ್, ಎನ್.ಸಿ.ಸಿ ಎವಿಕೆ ಮಹಿಳಾ ಕಾಲೇಜ್ನಿಂದ ಅಶ್ವಿನಿ ಬಾಯಿ.ಯು, ಎನ್.ಸಿ.ಸಿ ಜಿ.ಎಂ.ಐ.ಟಿ. ಕಾಲೇಜ್ನಿಂದ ಹರ್ಷಿತ್ ಮಲ್ಲಿಕಾರ್ಜುನ್, ಎನ್.ಸಿ.ಸಿ ಡಿಆರ್ ಆರ್ ಪಾಲಿಟೆಕ್ನಿಕ್ ಕಾಲೇಜ್ನಿಂದ ಮಹಮದ್ ರಿಹಾನ್ ರಾಝ, ಎನ್.ಸಿ.ಸಿ ಪಿಎಸ್ಎಸ್ಇಎಂಆರ್ ತೋಳಹುಣಸೆ ಶಾಲೆಯಿಂದ ಭಾವನ.ಜಿ, ಎನ್.ಸಿ.ಸಿ ಸೆಂಟ್ ಪಾಲ್ಸ್ ಸ್ಕೂಲ್ ಚಂದನಶ್ರೀ, ಭಾರತ್ ಸೇವಾದಳ ಜಿಲ್ಲಾ ತಂಡ ಬಿಂದು ಎಂ, ಪೊಲೀಸ್ ಪಬ್ಲಿಕ್ ಶಾಲೆಯಿಂದ ಸುಜಯ್ ಹೆಚ್ ಗೌಡ, ಪಿಎಸ್ಎಸ್ಇಎಂಆರ್ ಶಾಲೆಯಿಂದ ಮಧುಸೂಧನ ಮಾಲಿ ಪಾಟೀಲ್, ರಾಷ್ಟ್ರೋತ್ಥಾನ ಸ್ಕೂಲ್ ತನ್ಮಯ್ ದೀಕ್ಷಿತ್, ಜೈನ್ ಪಬ್ಲಿಕ್ ಸ್ಕೂಲ್ ಸಾಯಿ ನೈನ, ಬಿ.ಹೆಚ್ ಪಿ.ಎಸ್ ಶಾಲೆಯಿಂದ ಅನುಶ್ರೀ, ಎಸ್ಎಸ್ಎನ್ಪಿಎಸ್ ಶಾಲೆಯಿಂದ ವೇದ.ಹೆಚ್.ಎನ್, ಸೇಂಟ್ ಪಾಲ್ ಸೆಂಟ್ರಲ್ ಸ್ಕೂಲ್ ನಿಂದ ಶ್ರೀಲೇಖ, ಜವಾಹರ್ ನವೋದಯ ವಿದ್ಯಾಲಯ ಶಾಲೆಯಿಂದ
ಯುವರಾಜ್, ಪುಪ್ಪಾ ಮಹಾಲಿಂಗಪ್ಪ ಶಾಲೆಯಿಂದ ಧ್ರುವ ಎಸ್ ಗೌಡ, ಕೇಂದ್ರಿಯ ವಿದ್ಯಾಲಯದಿಂದ ದಿಲೀಪ್, ಸರ್ಟಿಫೈಡ್ ಸ್ಕೂಲ್ನಿಂದ ಅಜಯ್, ಮೌನೇಶ್ವರಿ ಕಿವುಡ ಮತ್ತು ಮೂಗರ ಶಾಲೆಯಿಂದ ತಿಪ್ಪೇಸ್ವಾಮಿ, ಸಿದ್ಧಗಂಗಾ ಹೈಯರ್ ಪ್ರೈಮರಿ ಸ್ಕೂಲ್ನಿಂದ ರಶ್ಮಿ, ಭಾರತ ಸ್ಕೌಟ್ಸ್ & ಗೈಡ್ಸ್ ಡಿಸ್ಟ್ರಿಕ್ ಟ್ರೂಪ್ನಿಂದ ಪ್ರೇರಣಾ, ಸೇಂಟ್ ಜಾನ್ಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಿಂದ ಗೀತಾಂಜಲಿ, ಡಿಎಆರ್ನ ಬ್ಯಾಂಡ್ ಮಾಸ್ಟರ್ ಹೊನ್ನೂರಪ್ಪ ವಾದ್ಯ ತಂಡದಿಂದ ರಾಷ್ಟ್ರಗೀತೆ ಸಹಿತ, ಶುಶ್ರಾವ್ಯ ವಾದ್ಯ ಪ್ರಸ್ತುತಪಡಿಸಿದರು.
ಶಿಸ್ತಿನ ಪಥಸಂಚಲನ – ಪ್ರಶಸ್ತಿ: ಯುನಿಫಾರಂ ವಿಭಾಗದಲ್ಲಿ ಡಿಎಆರ್ ಪ್ರಥಮ, ಅಗ್ನಿಶಾಮಕ ದಳ ದ್ವಿತೀಯ, ಕಾಲೇಜು ವಿಭಾಗ ಎನ್ಸಿಸಿ ಡಿ.ಆರ್.ಎಂ. ವಿಜ್ಞಾನ ಕಾಲೇಜು ಪ್ರಥಮ, ಎ.ಆರ್.ಜಿ ಕಾಲೇಜು ದ್ವಿತೀಯ, ಜಿ.ಎಂ.ಐ.ಟಿ ಕಾಲೇಜು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ವಿಶೇಷ ವಿಭಾಗದಲ್ಲಿ: ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ತಂಡ ಪ್ರಥಮ, ಸರ್ಟಿಫೈಡ್ ಸ್ಕೂಲ್ ದ್ವಿತೀಯ, ಮೌನೇಶ್ವರಿ ಕಿವುಡ ಮತ್ತು ಮೂಗರ ಶಾಲೆ ತೃತೀಯ, ಪ್ರೌಢಶಾಲಾ ವಿಭಾಗದಲ್ಲಿ: ಸೇಂಟ್ ಜಾನ್ಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಪ್ರಥಮ, ರಾಷ್ಟ್ರೋತ್ಥಾನ ಸ್ಕೂಲ್ ದ್ವಿತೀಯ, ಪಿಎಸ್ಎಸ್ಇಎಂಆರ್ ಶಾಲೆ ತೃತೀಯ, ಪ್ರಾಥಮಿಕ ವಿಭಾಗದಲ್ಲಿ: ಪೊಲೀಸ್ ಪಬ್ಲಿಕ್ ಶಾಲೆ ಪ್ರಥಮ, ಜೈನ್ ಪಬ್ಲಿಕ್ ಶಾಲೆ ದ್ವಿತೀಯ, ಎಸ್ಎಸ್ಎನ್ಪಿಎಸ್ ಶಾಲೆ ತೃತೀಯ ಸ್ಥಾನ ಲಭಿಸಿತ್ತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಲ್ ಇಕ್ರಾ ಶಾಲೆ, ಡಿ.ಆರ್.ಆರ್ ಶಾಲೆಗಳು, ಸೆಂಟ್ ಜಾನ್ಸ್ ಪ್ರೌಢಶಾಲೆಯ ಮಕ್ಕಳು ದೇಶಪ್ರೇಮ, ತ್ಯಾಗ, ಬಲಿದಾನದ ಸಾರವನ್ನು ಹೊಂದಿದಂತಹ ನೃತ್ಯರೂಪಕಗಳನ್ನು ಪ್ರದರ್ಶಿಸಿದ್ದು
ನೋಡುಗರ ಕಣ್ಮನ ಸೆಳೆಯುವಂತಿತ್ತು. ಡಿ.ಆರ್.ಆರ್ ಶಾಲೆಗಳ ತಂಡ ಪ್ರಥಮ ಸ್ಥಾನ, ಅಲ್ ಇಕ್ರಾ ಶಾಲೆಯ ಮಕ್ಕಳು ದ್ವಿತೀಯ ಸ್ಥಾನ, ಸೆಂಟ್ ಜಾನ್ಸ್ ಪ್ರೌಢಶಾಲೆಯ ಮಕ್ಕಳು ತೃತೀಯ ಸ್ಥಾನ ಪಡೆದರು.
ಸನ್ಮಾನ ಸ್ವೀಕರಿಸಿದವರು: ಅಪಘಾತದಲ್ಲಿ ಮರಣ ಹೊಂದಿದ ದಿ.ಶ್ರೀ.ಸುಚಿತ್ ಕುಮಾರ್ ಯು.ಎನ್, ಇವರ ಅಂಗಾಂಗಗಳನ್ನು ದಾನ ಮಾಡಿದ ಅವರ ತಾಯಿಯಾದ ಶ್ರೀಮತಿ,ವಾಣಿಶ್ರೀರವರಿಗೆ ಪ್ರಶಂಸಾ ಪತ್ರ ನೀಡಲಾಯಿತು.
ಲಿಂಗನಗೌಡ ನೆಗಳೂರು, ಸಿಪಿಐ, ಸಂತೆಬೆನ್ನೂರು ವೃತ್ತ ಇವರು ಆಗಸ್ಟ್ 2024ರಲ್ಲಿ ಉತ್ತಮ’ ಕರ್ತವ್ಯಕ್ಕಾಗಿ ಮುಖ್ಯಮಂತ್ರಿಗಳ ಪದಕ ಪಡೆದಿರುತ್ತಾರೆ. ತೇಜಾವತಿ, ಪಿ.ಐ. ನಿಸ್ತಂತು ವಿಭಾಗ, ದಾವಣಗೆರೆ ಇವರು ಆಗಸ್ಟ್ 2024ರಲ್ಲಿ ಉತ್ತಮ ಕರ್ತವ್ಯಕ್ಕಾಗಿ ಮುಖ್ಯಮಂತ್ರಿಗಳ ಪದಕ ಪಡೆದಿರುತ್ತಾರೆ. ಮಂಜುನಾಥ ಕಲ್ಲೇದೇವರು, ಪಿಎಸ್ಐ, ಎಫ್.ಪಿ.ಬಿ ಘಟಕ ಅಗಸ್ಟ್ 2024ರಲ್ಲಿ ಉತ್ತಮ ಕರ್ತವ್ಯಕ್ಕಾಗಿ ರಾಷ್ಟ್ರಪತಿಗಳ ಪೆÇಲೀಸ್ ಪದಕ, .ಹೆಚ್.ದಾದಾಪೀರ್, ಎ.ಆರ್.ಎಸ್.ಐ.ಡಿ.ಎ.ಆರ್ ಆಗಸ್ಟ್ 2024ರಲ್ಲಿ ಪವರ್ ಲಿಪ್ಪಿಂಗ್, ಉತ್ತಮ ಕರ್ತವ್ಯಕ್ಕಾಗಿ ರಾಷ್ಟ್ರಪತಿಗಳ ಪೆÇಲೀಸ್ ಪದಕ, 23-9-2023 ರಿಂದ 31-12-2023ರವರೆಗೆ ಕನ್ಯಾಕುಮಾರಿಯಿಂದ ದೆಹಲಿಯವರೆಗೆ ಪಾದಯಾತ್ರೆ ಮೂಲಕ ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಯ ಕುರಿತು ಜನಜಾಗೃತಿ ಮಾಡಿ ಕೇಂದ್ರ ಸರ್ಕಾರದ ಆರುಷಿ ಯೋಜನೆಯ ಅನುμÁ್ಠನಕ್ಕೆ ಶ್ರಮಿಸಿದ ಹೊನ್ನಾಳಿ ತಾಲ್ಲೂಕಿನ ಸಿ.ಎಮ್.ಜಕ್ಕಾಳಿ, 2024ನೇ ಸಾಲಿನ ಗಣರಾಜ್ಯೋತ್ಸವ ಪೆರೇಡ್ ದಾವಣಗೆರೆ ಜಿಲ್ಲೆಯಿಂದ ದೆಹಲಿ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಕರ್ನಾಟಕ ಮತ್ತು ಗೋವಾ ತಂಡವನ್ನು ಮೂರು ವಿದ್ಯಾರ್ಥಿಗಳು ಪ್ರತಿ ನಿಧಿಸಿದ ಎನ್.ಸಿ.ಸಿ. ಕೆಡೆಟ್ ಗಗನ್ ದೀಪ್ ಬಿ.ಎಸ್ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ), ಶ್ರೇಯನ್ ಸಿ (ತರಳಬಾಳ ಪ.ಪೂ.ಕಾಲೇಜು, ದಾವಣಗೆರೆ), ಗೌತಮಿ ಆರ್. (ಸಂತ ಪೌಲರ ಸ್ಕೂಲ್, ದಾವಣಗೆರೆ) 9 ವ್ಯಕ್ತಿಗಳಿಗೆ ಸನ್ಮಾನ ನೀಡಿ ಗೌರವಿಸಲಾಯಿತು.