SUDDIKSHANA KANNADA NEWS/ DAVANAGERE/ DATE:10-01-2025
ಬೆಂಗಳೂರು ವೈಟ್ ಫೀಲ್ಡ್: 22 ವರ್ಷದ ಯುವತಿಗೆ ಆಪರೇಷನ್ ನಡೆಸಿ ಕೇವಲ ಎರಡೇ ದಿನದಲ್ಲಿ ದೈನಂದಿನ ಸ್ಥಿತಿಗೆ ಬರುವಂತೆ ಮಾಡುವ ಮೂಲಕ ಮೆಡಿಕವರ್ ಆಸ್ಪತ್ರೆಯ ಹೃದಯ ತಜ್ಞರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸುಮಾರು ದಿನಗಳಿಂದ ಎಡಗಾಲಿನಲ್ಲಿ ಊತ ಕಂಡುಬಂದಿದ್ದ ಕಾರಣ ನಡೆಯಲಾಗದೇ, ಹಾಸಿಗೆಯಲ್ಲೆ ಬಳಲುತ್ತಾ ಇದ್ದ ರೋಗಿಗೆ ಅಪರೇಷನ್ ಮಾಡಿ ಎರಡೇ ದಿನದಲ್ಲಿ ಎದ್ದು ಓಡಾಡುವಂತೆ ಮಾಡಿದ್ದಾರೆ ವೈಟ್ ಫಿಲ್ಡ್ ನಲ್ಲಿರುವ ಮೆಡಿಕವರ್ ಆಸ್ಪತ್ರೆಯ ಹೃದಯ ತಜ್ಞ ಡಾ. ರಾಮ್ ನರೇಶ್ ಸೌದ್ರಿ
22ವರ್ಷದ ಯುವತಿಗೆ ಕಾಲಿನಲ್ಲಿ ಊತ ಶುರುವಾಗಿತ್ತು. ನೋವಿನಲ್ಲಿಯೇ ಬೆಡ್ ಯಿಂದ ಮೇಲೆೇಳಲು ಕಷ್ಟವಾಗುತ್ತಾ ಇತ್ತು. ಸುಮಾರು 12 ದಿನಗಳಿಗೂ ಹೆಚ್ಚು ಕಾಲ ಹಾಸಿಗೆಯಿಂದ ಮೇಲೇಳಲು ಕಷ್ಟ ಪಡುತ್ತಾ ಇದ್ದರು.
ಅಷ್ಟೇ ಅಲ್ಲದೇ ನೋವಿನಿಂದ ಉಸಿರಾಟದ ತೊಂದ್ರೆ ಕೂಡ ಶುರುವಾಗಿತ್ತು. ಅವರು ಕೂಡದೇ ಮೆಡಿಕವರ್ ಆಸ್ಪತ್ರೆಗೆ ಬಂದು ಡಾ. ರಾಮ್ ನರೇಶ್ ಸೌದ್ರಿಯವರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದರು.
ಅವರನ್ನು ಪರೀಕ್ಷೆ ಮಾಡಿದ ಬಳಿಕ ಪಡೆದ ಬಳಿಕ ಅವರ ಎಡ ಗಾಲಿನ ಕಾಲಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಹೃದಯದಿಂದ ಶ್ವಾಸಕೋಶದ ಪಲ್ಮನರಿವರೆಗೆ ಬ್ಲಾಕೇಜ್ ಆಗಿರೋದು ತಿಳಿದುಬಂದಿದೆ. ಅಲ್ಲದೇ ಎಡಗಾಲಿನ ರಕ್ತನಾಳ ಸಂಪೂರ್ಣ ಹೆಪ್ಪುಗಟ್ಟಿದ್ದು, ರಕ್ತ ಸಂಚಲನಕ್ಕೆ ಜಾಗ ಇಲ್ಲದೇ ಜಾಮ್ ಆಗಿತ್ತು. ಹಾಗಾಗಿ ಶ್ವಾಸಕೋಶದಲ್ಲಿ ರಕ್ತ ಸಂಚಲನ ಫುಲ್ ಬಂದ್ ಆಗಿತ್ತು. ರಕ್ತ ಕರಗಿಸೋಕೆ ಇಂಜೆಕ್ಚನ್ ನೀಡಿದ್ರೂ ರೋಗಿಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಬಳಿಕ ಅವರಿಗೆಸಿಟಿ ವಿನೋಗ್ರಾಮ್ ನಡೆಸಲಾಯ್ತು, ಅದರಲ್ಲಿ ಅವರಿಗೆ ಥ್ರಂಬೋಸಿಸ್ ಖಾಯಿಲೆ ಇರೋದು ತಿಳಿದು ಬಂದಿದೆ. ಅದಕ್ಕಾಗಿ ಪಲ್ಮನರಿ ಎಂಬೋಲೆಕ್ಟಮಿ ಹಾಗೂ ವೀಸನ್ ಥ್ರಂಬೆಕ್ಟಮಿ ಅಪರೇಷನ್ ಮಾಡಿಸುವ ಅಗತ್ಯತೆಯನ್ನು ಹೃದಯ ತಜ್ಞ ಡಾ ರಾಮ್ ನರೇಶ್ ಸೌದ್ರಿ ಅವರು ರೋಗಿಗೆ ತಿಳಿಸಿದ್ದಾರೆ.
ರೋಗಿಯ ಸಮಸ್ಯೆಗೆ ಕಾರಣವೇನೆಂದು ಹುಡುಕುತ್ತಾ ಇದ್ದ ವೈದ್ಯರಿಗೆ ತಿಳಿದು ಬಂದಿದ್ದು, ಅವರು ಹಾರ್ಮೋನಲ್ ಚಿಕಿತ್ಸೆ ಪಡೆಯುತ್ತಾ ಇದ್ದರು ಅನ್ನೋದು. ಅದರ ಪರಿಣಾಮವಾಗಿ ರೋಗಿಯೂ ಇಷ್ಟೊಂದು ಸಮಸ್ಯೆ ಎದುರಿಸ್ತಾ ಇರೋದು. ಹಾಗಾಗೀ ಅವರಿಗೆ ಆಪರೇಷನ್ ನಡೆಸಲಾಯ್ತು.
ಮೊದಲಿಗೆ ಶ್ವಾಸಕೋಶದಲ್ಲಿ ಉಂಟಾಗಿರುವ ರಕ್ತದ ಕ್ಲಾಟನ್ನು ತೆಗೆದು ಬಳಿಕ ಐವಿಸಿ ಫಿಲ್ಟರ್ ಹಾಕಿ ಎಡಗಾಲಿನಲ್ಲಿನ ರಕ್ತನಾಳದಲ್ಲಿ ಹೆಪ್ಪುಗಟ್ಟಿರುವ ರಕ್ತವನ್ನು ತೆಗೆದು ಹಾಕಲಾಯ್ತು. ಬಳಿಕ ಅವರನ್ನು ಐಸಿಯುನಿಂದ ವಾರ್ಡ್ಗೆ ಒಂದೇ ದಿನದಲ್ಲಿ ಶಿಫ್ಟ್ ಮಾಡಲಾಗಿದೆ . ಮರುದಿನವೇ ಅವರು ಎಂದಿನಂತೆ ನಡೆಯುವಂತಾಗಿದ್ದಾರೆ.
ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಇಲ್ಲದೇ ಎಂದಿನಂತೆ ಯುವತಿಯೂ ತಮ್ಮ ದೈನಂದಿನ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೃದಯ ತಜ್ಞ ಡಾ. ರಾಮ್ ನರೇಶ್ ಸೌದ್ರಿ ಅವರು ಮಾಹಿತಿ ನೀಡಿದ್ದಾರೆ.