SUDDIKSHANA KANNADA NEWS/ DAVANAGERE/ DATE:11-01-2025
ತಿರುಮಲ: ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಆರು ಮಂದಿ ಸಾವನ್ನಪ್ಪಿದ ಬಳಿಕ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಭದ್ರತಾ ಲೋಪದ ಬಗ್ಗೆ ಸಿಎಂ ಚಂದ್ರಬಾಬು ನಾಯ್ಜು, ಡಿಸಿಎಂ ಪವನ್ ಕಲ್ಯಾಣ್ ಸೇರಿದಂತೆ ರಾಜಕೀಯ ನಾಯಕರು ಆರೋಪ ಮಾಡಿದ್ದರು. ಆದ್ರೆ, ಘಟನೆ ಕುರಿತಂತೆ ಪೊಲೀಸ್ ಇಲಾಖೆಯಿಂದ ಸ್ಪಷ್ಟನೆ ಬಂದಿದೆ.
ಪೊಲೀಸರು ‘ಅನಿರೀಕ್ಷಿತ’ ಜನಸಂದಣಿ, ತಡವಾದ ನಿರ್ಧಾರಗಳು ಕಾಲ್ತುಳಿತಕ್ಕೆ ಕಾರಣವಾಗಿದೆ. ಕುಪ್ಪಂ ಮತ್ತು ವೈಕುಂಠ ಏಕಾದಶಿ ಕರ್ತವ್ಯಕ್ಕೆ ಪ್ರತ್ಯೇಕ ತಂಡಗಳನ್ನು ನಿಯೋಜಿಸಲಾಗಿದೆ ಎಂದು ತಿರುಪತಿ ಪೊಲೀಸರು ತಿಳಿಸಿದ್ದು, ಭದ್ರತಾ ಲೋಪ ನಿರಾಕರಿಸಿದ್ದಾರೆ.
ಜನಸಂದಣಿಯಲ್ಲಿ ಅನಿರೀಕ್ಷಿತವಾಗಿ ಕಾಲ್ತುಳಿತ ಉಂಟಾಗಿದೆ. ಬೈರಾಗಿಪಟ್ಟೇಡಾದ ಟೋಕನ್ ವಿತರಣಾ ಕೇಂದ್ರದಲ್ಲಿ ನೂಕುನುಗ್ಗಲು ಉಂಟಾಗಿತ್ತು. ವೈಕುಂಠ ಏಕಾದಶಿಯ ಕರ್ತವ್ಯಕ್ಕಾಗಿ ಪೊಲೀಸ್ ಪಡೆಗಳನ್ನು ಕುಪ್ಪಂಗೆ ವರ್ಗಾಯಿಸಲಾಗಿದೆ
ಎಂಬ ಹೇಳಿಕೆಯನ್ನು ಆಂಧ್ರಪ್ರದೇಶದ ತಿರುಪತಿ ಪೊಲೀಸರು ತಳ್ಳಿಹಾಕಿದ್ದಾರೆ.
ತಿರುಮಲದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅನಂತಪುರ ರೇಂಜ್ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೋಲೀಸ್, ಶೆಮುಶಿ ಬಾಜಪೈ, ಪೊಲೀಸ್ ಇಲಾಖೆಯ ಮೇಲೆ ಮಾಡಿರುವ ಆರೋಪಗಳು ಸಂಪೂರ್ಣ ನಿರಾಧಾರ, ಆಧಾರ ರಹಿತ ಎಂದು ಸ್ಪಷ್ಟನೆ ನೀಡಿದರು.
ಕುಪ್ಪಂ ಮತ್ತು ವೈಕುಂಠ ಏಕಾದಶಿ ಎರಡಕ್ಕೂ ಪ್ರತ್ಯೇಕ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಪ್ರತಿ ಸ್ಥಳದಲ್ಲಿ ಸೂಕ್ತ ಭದ್ರತೆಯನ್ನು ಖಾತ್ರಿಪಡಿಸಲಾಗಿದೆ ಎಂದು ಅವರು ಖಚಿತಪಡಿಸಿದರು.
ಕಾಲ್ತುಳಿತದ ಸಂದರ್ಭದಲ್ಲಿ, ಬಾಜ್‌ಪೇಯ್ ಅವರು ಈ ದುರಂತವು ಬಹುಮಟ್ಟಿಗೆ ಜನಸಂದಣಿಯಲ್ಲಿನ ಅನಿರೀಕ್ಷಿತ ಉಲ್ಬಣದಿಂದ ಉಂಟಾಯಿತು ಎಂದು ಸೂಚಿಸಿದರು, ಕರ್ತವ್ಯ ನಿರತ ಸಿಬ್ಬಂದಿಗಳು ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲರಾದರು. ಹಾಗಾಗಿ ಜನಸಂದಣಿ ಹೆಚ್ಚಾಗಿ ಘಟನೆ ನಡೆದಿದೆ ಎಂದು ಹೇಳಿದರು.
“ತಿರುಪತಿಯ ಟೋಕನ್ ವಿತರಣಾ ಕೇಂದ್ರಗಳಲ್ಲಿ 1,500 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ವೈಕುಂಠ ಏಕಾದಶಿ ಭದ್ರತೆಗಾಗಿ ಒಟ್ಟು 2,424 ಅಧಿಕಾರಿಗಳು ತಿರುಮಲ ದೇವಸ್ಥಾನಗಳಲ್ಲಿ ಬೀಡುಬಿಟ್ಟಿದ್ದಾರೆ” ಎಂದು ಬಾಜಪೈ ಹೇಳಿದರು.
ತನಿಖೆಗೆ ನೆರವಾಗಲು ಯಾವುದೇ ವಿಡಿಯೋಗಳು ಅಥವಾ ಮಾಹಿತಿಯನ್ನು ಸಾರ್ವಜನಿಕರು ಸಹಕರಿಸಬೇಕು, ಹಂಚಿಕೊಳ್ಳಬೇಕು ಎಂದು ಪೊಲೀಸ್ ಇಲಾಖೆ ಕೋರಿದೆ. ಮುಂದಿನ ಘಟನೆಗಳನ್ನು ತಡೆಗಟ್ಟಲು ಎಲ್ಲಾ ಅಗತ್ಯ ಕ್ರಮಗಳು ಜಾರಿಯಲ್ಲಿವೆ. ಭವಿಷ್ಯದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸುಧಾರಣೆಗಳನ್ನು ಪ್ರಯತ್ನಿಸಲಾಗುವುದು ಎಂದು ಬಾಜ್ಪೈ ಭರವಸೆ ನೀಡಿದರು.