SUDDIKSHANA KANNADA NEWS/ DAVANAGERE/ DATE:10-01-2025
ಚೆನ್ನೈ: ಹಿಂದಿ ರಾಷ್ಟ್ರ ಭಾಷೆ ಅಲ್ಲ, ಅನುಕೂಲ ಭಾಷೆ ಎಂಬ ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಆರ್. ಅಶ್ವಿನ್ ಪರ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಬ್ಯಾಟ್ ಬೀಸಿದ್ದಾರೆ.
ಅಶ್ವಿನ್ ಹೇಳಿಕೆ ಬೆಂಬಲಿಸಿರುವ ಕೆ. ಅಣ್ಣಾಮಲೈ ಅವರು, ಹಿಂದಿ ರಾಷ್ಟ್ರ ಭಾಷೆ ಅಲ್ಲ, ನನ್ನ ಆತ್ಮೀಯ ಗೆಳೆಯ ಆರ್. ಅಶ್ವಿನ್ ಮಾತ್ರ ಹೇಳಬೇಕಿಲ್ಲ. ಎಲ್ಲರಿಗೂ ಗೊತ್ತಿರುವ ಸಂಗತಿ ಎಂದು ಹೇಳಿದ್ದಾರೆ.
ಚೆನ್ನೈನ ಖಾಸಗಿ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದು ಆರ್ ಅಶ್ವಿನ್ ಹೇಳಿದ್ದಾರೆ. ತಮಿಳುನಾಡಿನ ಬಿಜೆಪಿ ನಾಯಕ ಕೆ ಅಣ್ಣಾಮಲೈ ಅವರು ಆರ್. ಅಶ್ವಿನ್ ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ.
ಇತ್ತೀಚೆಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮಧ್ಯದಲ್ಲಿ ಆರ್. ಅಶ್ವಿನ್ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು. ಆರ್. ಅಶ್ವಿನ್ ಹಿಂದಿ ಭಾಷೆ ಬಗ್ಗೆ ಕೊಟ್ಟ ಹೇಳಿಕೆಯು ವಿವಾದದ ಬಿರುಗಾಳಿ ಎಬ್ಬಿಸಿತ್ತು. ಉತ್ತರ ಭಾರತದವರ ಕೋಪಕ್ಕೂ ಕಾರಣವಾಗಿತ್ತು.
ತಮಿಳುನಾಡಿನಲ್ಲಿ ಹಿಂದಿಗೆ ಪ್ರತಿರೋಧ ವ್ಯಕ್ತವಾಗುತ್ತಿರುವುದು ಇಂದು ನಿನ್ನೆಯದಲ್ಲ. 1930 ಮತ್ತು 1940 ರ ದಶಕದ ಹಿಂದಿನದು. ಶಾಲೆಗಳು ಮತ್ತು ಸರ್ಕಾರದಲ್ಲಿ ಕಡ್ಡಾಯ ಭಾಷೆಯಾಗಿ ಹೇರುವುದಕ್ಕೆ ಬಲವಾದ ವಿರೋಧವಿದೆ. ತಮಿಳು ಭಾಷಾ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಪ್ರತಿಪಾದಿಸಿದ ದ್ರಾವಿಡ ಚಳವಳಿಯು ಈ ವಿರೋಧದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿತ್ತು.