ನವದೆಹಲಿ: ದೆಹಲಿಯಲ್ಲಿ ಆದಾಯ ಕುಸಿದ ಕಾರಣ ಐಫೋನ್ ಕಂತುಗಳನ್ನು (EMIs) ಪಾವತಿಸಲು ಸಾಧ್ಯವಾಗದೆ 30 ವರ್ಷದ ನೃತ್ಯ ಶಿಕ್ಷಕನೊಬ್ಬ ಯಮುನಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ದೆಹಲಿಯ ಓಖ್ಲಾ ನಿವಾಸಿ ದೀಪಕ್ ಕುಮಾರ್ ಎಂಬುವವರೇ ಈ ದುರ್ಘಟನೆಗೆ ಒಳಗಾದವರು.
ಶುಕ್ರವಾರ ರಾತ್ರಿ 8:30ರ ಸುಮಾರಿಗೆ ಕಾಳಿಂದಿ ಕುಂಜ ಪ್ರದೇಶದ ಘಾಟ್‌ನಿಂದ ನದಿಗೆ ಹಾರಿದ. ಗಸ್ತು ತಿರುಗುತ್ತಿದ್ದ ಪೊಲೀಸರು ಇದನ್ನು ಗಮನಿಸಿ ತಕ್ಷಣವೇ ರಕ್ಷಣಾ ದಂಡುವಿನ ಸಹಾಯದಿಂದ ಆತನನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
ಮಹಾರಾಷ್ಟ್ರದಲ್ಲಿ ಇದೇ ರೀತಿಯ ಪ್ರಕರಣ ವರದಿಯಾದ ಬೆನ್ನಲ್ಲೇ ದೆಹಲಿಯಲ್ಲಿಯೂ ಈ ಘಟನೆ ನಡೆದಿರುವುದು ಆತಂಕ ಮೂಡಿಸಿದೆ. ಪೊಲೀಸರು ಆತನಿಗೆ ಕೌನ್ಸಿಲಿಂಗ್ ನೀಡಿ ಕುಟುಂಬಸ್ಥರೊಂದಿಗೆ ಕಳುಹಿಸಿಕೊಟ್ಟಿದ್ದಾರೆ.





Leave a comment