Home ಕ್ರೈಂ ನ್ಯೂಸ್ ಕಾಂಗ್ರೆಸ್ ಅಧ್ಯಕ್ಷರ ಭೇಟಿ ವೇಳೆ ಅಯೋಧ್ಯೆಯಲ್ಲಿ ಶ್ರಾವಣ ಮಾಸದ ಮೀನು ಭೋಜನ: ಭುಗಿಲೆದ್ದ ಆಕ್ರೋಶ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಕಾಂಗ್ರೆಸ್ ಅಧ್ಯಕ್ಷರ ಭೇಟಿ ವೇಳೆ ಅಯೋಧ್ಯೆಯಲ್ಲಿ ಶ್ರಾವಣ ಮಾಸದ ಮೀನು ಭೋಜನ: ಭುಗಿಲೆದ್ದ ಆಕ್ರೋಶ!

Share
ಅಯೋಧ್ಯೆ
Share

ಅಯೋಧ್ಯೆ: ಪವಿತ್ರ ಶ್ರಾವಣ ಮಾಸದಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಯೋಧ್ಯೆ ಭೇಟಿ ವೇಳೆ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ಮೀನು ಭೋಜನದವಿವಾದ ತೀವ್ರಗೊಂಡಿದೆ.

ಹನುಮಂತ ಗಢಿ ಮತ್ತು ರಾಮಮಂದಿರದ ಸಮೀಪವಿರುವ ತರುಣ್ ಪ್ರದೇಶದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮೀನು ಅಡುಗೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸ್ಥಳೀಯ ಸಂತರ ಆಕ್ರೋಶಕ್ಕೆ ಕಾರಣವಾಗಿದೆ.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಯಕ್ರಮದ ಆಯೋಜಕ ರಾಮ್ ನಿಹಾಲ್ ನಿಶಾದ್, ಸಂವಿಧಾನಿಕವಾಗಿ ಪ್ರತಿಯೊಬ್ಬರಿಗೂ ತಮ್ಮಿಷ್ಟದ ಆಹಾರ ಸೇವಿಸುವ ಹಕ್ಕಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇದು ತಮ್ಮ ನಿಶಾದ್ ಸಮುದಾಯದ ಸಾಂಪ್ರದಾಯಿಕ ಪದ್ಧತಿಯಾಗಿದ್ದು, ಶ್ರಾವಣವೋ ಅಥವಾ ಬೇರೆ ತಿಂಗಳೋ ಎಂಬುದರ ಆಧಾರದ ಮೇಲೆ ಆಹಾರದ ಆಯ್ಕೆಯನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಇನ್ನು ಅಯೋಧ್ಯೆಗೆ ಭೇಟಿ ನೀಡಿದ ಯುಪಿ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರಾಯ್ ರಾಮಲಲ್ಲಾ ಹಾಗೂ ಹನುಮಂತ ಗಢಿ ದರ್ಶನ ಪಡೆದು ಹನುಮಾನ್ ಚಾಲೀಸಾ ಪಠಿಸಿದರು. ನಂತರ ಬಿಜೆಪಿ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ ಅವರು, ರಾಮಮಂದಿರದ ದೇಣಿಗೆ ಹಾಗೂ ಚಂದಾ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.

Share

Leave a comment

Leave a Reply

Your email address will not be published. Required fields are marked *

Related Articles