Home ಕ್ರೈಂ ನ್ಯೂಸ್ ಆಗ್ರಾ ರೈಲಿನಲ್ಲಿ ಮಹಿಳೆಯ ದೇಹದ ತುಂಡುಗಳಿರುವ ಸೂಟ್‌ಕೇಸ್ ಪತ್ತೆ: ಚೆನ್ನೈನ ಬಾಡಿಗೆ ಮನೆಯಲ್ಲಿ ಬಿರಿಯಾನಿ ಮಾಡಿಕೊಂಡು ತಿಂದ್ರಾ ಹಂತಕರು?
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಆಗ್ರಾ ರೈಲಿನಲ್ಲಿ ಮಹಿಳೆಯ ದೇಹದ ತುಂಡುಗಳಿರುವ ಸೂಟ್‌ಕೇಸ್ ಪತ್ತೆ: ಚೆನ್ನೈನ ಬಾಡಿಗೆ ಮನೆಯಲ್ಲಿ ಬಿರಿಯಾನಿ ಮಾಡಿಕೊಂಡು ತಿಂದ್ರಾ ಹಂತಕರು?

Share
ಆಗ್ರಾ
Share

ಆಗ್ರಾ: ಆಗ್ರಾದಲ್ಲಿ ತಮಿಳುನಾಡು ಎಕ್ಸ್‌ಪ್ರೆಸ್ ರೈಲಿನ ಸೂಟ್‌ಕೇಸ್ ಒಂದರಲ್ಲಿ ಮಹಿಳೆಯ ಕೊಳೆತ ದೇಹದ ತುಂಡುಗಳು ಪತ್ತೆಯಾದ ಭೀಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಇನ್ನು ಮನೆಯಲ್ಲಿ ಬಿರಿಯಾನಿ ಪತ್ತೆಯಾಗಿದ್ದು, ಈಕೆಯ ದೇಹದ ತುಂಡುಗಳನ್ನು ಬಳಸಿ ಅಡುಗೆ ಮಾಡಿರಬಹುದು ಎಂಬ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ. 

ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು, ಚೆನ್ನೈನ ಗುಡುವಂಚೇರಿ ಪ್ರದೇಶದಲ್ಲಿರುವ ಆರೋಪಿಗಳು ವಾಸವಿದ್ದ ಬಾಡಿಗೆ ಮನೆಗೆ ತಲುಪಿದ್ದಾರೆ. ಮೃತರನ್ನು ಒಡಿಶಾದ ಜಗತ್‌ಸಿಂಗ್‌ಪುರದ ಹಯಾತುನ್ ನಿಶಾ (38) ಎಂದು ಗುರುತಿಸಲಾಗಿದೆ.

ಚೆನ್ನೈನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈ ಮಹಿಳೆಯನ್ನು ಕೊಲೆ ಮಾಡಿ, ದೇಹದ ಕೆಲವು ಭಾಗಗಳನ್ನು ದೊಡ್ಡ ಪಾತ್ರೆಯಲ್ಲಿ (ಬಿರಿಯಾನಿ ಪಾತ್ರೆ) ಇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಅಸ್ಸಾಂ ಮೂಲದ ಮಣಿಕ್ ಉದಿನ್ ಲಸ್ಕರ್ ಮತ್ತು ಒಡಿಶಾದ ಭಾಗ ಬಾತಿ ಮಾಜ್ಹಿ ಎಂಬುವವರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಸಿಸಿಟಿವಿ ಹಾಗೂ ರೈಲ್ವೆ ದಾಖಲೆಗಳ ಮೂಲಕ ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ. ಆದರೆ ಯಾಕೆ ಕೊಲೆ ಮಾಡಲಾಗಿದೆ ಎಂಬ ಕುರಿತಂತೆ ತನಿಖೆ ಚುರುಕುಗೊಂಡಿದೆ.

Share

Leave a comment

Leave a Reply

Your email address will not be published. Required fields are marked *