ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್ ಎಂಬಲ್ಲಿ ಮತ್ತೊಬ್ಬ ವೈದ್ಯರ ಮೇಲೆ ಹಲ್ಲೆ ನಡೆಸಲಾಗಿದೆ. ಅನಧಿಕೃತ ಹಾಗೂ ಏಕವಚನದ ಮಾತು ಪ್ರಶ್ನಿಸಿದ್ದಕ್ಕೆ ಆರ್ಥೋಪೆಡಿಕ್ ವೈದ್ಯ ಡಾ. ಯೋಗೇಂದ್ರ ಜೈಸ್ವಾಲ್ ಮೇಲೆ ರೋಗಿಯ ಮಗನಿಂದ ಹಲ್ಲೆ ನಡೆದಿದೆ.
ಮಹಾರಾಷ್ಟ್ರದ ಕಲ್ಯಾಣ್ (Kalyan) ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರ ಮಗ ಆರ್ಥೋಪೆಡಿಕ್ ವೈದ್ಯ ಡಾ. ಯೋಗೇಂದ್ರ ಜೈಸ್ವಾಲ್ ಅವರ ಮೇಲೆ ಹಲ್ಲೆ ನಡೆಸಿರುವ ಘಟನೆ ವೈದ್ಯರನ್ನು ಕೆರಳಿಸಿದೆ.
ರೋಗಿ ಜಯಂತ್ ದೇಶಮುಖ್ ಅವರ ಪಕ್ಕೆಲುಬಿನ ಮುರಿತಕ್ಕೆ ಚಿಕಿತ್ಸೆ ನೀಡುತ್ತಿದ್ದ ವೇಳೆ, ರೋಗಿಯ ಮಗ ವೈದ್ಯರೊಂದಿಗೆ ಅತ್ಯಂತ ಕೇವಲವಾಗಿ ಮತ್ತು ಏಕವಚನದಲ್ಲಿ ಮಾತನಾಡಿದ್ದಾನೆ.
ವೈದ್ಯರು ಇದನ್ನು ಪ್ರಶ್ನಿಸಿದಾಗ, “ನೀನು ಯಾವ ದೊಡ್ಡ ಡಾಕ್ಟರ್ ಕಣೋ?” ಎಂದು ಹೀಯಾಳಿಸಿ, ಆಸ್ಪತ್ರೆಯ ಹೊರಗೆ ಬೈದಾಡಿ, ನಂತರ ಒಳಗೆ ಬಂದು ಹಲ್ಲೆ ನಡೆಸಿದ್ದಾನೆ. ಈಗಾಗಲೇ ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇತ್ತೀಚೆಗೆ ಶಿವಸೇನೆ ಕಾರ್ಪೊರೇಟರ್ ರಮೇಶ್ ಎಂಬಾತ ಡಾಕ್ಟರ್ ಮೇಲೆ ಹಲ್ಲೆ ನಡೆಸಿದ ಘಟನೆ ಮಾಸುವ ಮುನ್ನವೇ ಮತ್ತೊಂದು ಹಲ್ಲೆ ನಡೆದಿರುವುದು ವೈದ್ಯಕೀಯ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವೈದ್ಯರು ಆಸ್ಪತ್ರೆಗಳಲ್ಲಿ ಕಠಿಣ ಭದ್ರತೆಗೆ ಆಗ್ರಹಿಸುತ್ತಿದ್ದಾರೆ.





Leave a comment