Home ಉದ್ಯೋಗ ವಾರ್ತೆ ದಾವಣಗೆರೆ ಪದವಿ ಪೂರ್ವ ವಸತಿ ಕಾಲೇಜು ಅತಿಥಿ ಉಪನ್ಯಾಸಕರ ಹುದ್ದೆಗಳು ಖಾಲಿ: M.A, M.Sc, MCA ಅಭ್ಯರ್ಥಿಗಳಿಗೆ ಸುವರ್ಣಾವಕಾಶ
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

ದಾವಣಗೆರೆ ಪದವಿ ಪೂರ್ವ ವಸತಿ ಕಾಲೇಜು ಅತಿಥಿ ಉಪನ್ಯಾಸಕರ ಹುದ್ದೆಗಳು ಖಾಲಿ: M.A, M.Sc, MCA ಅಭ್ಯರ್ಥಿಗಳಿಗೆ ಸುವರ್ಣಾವಕಾಶ

Share
ದಾವಣಗೆರೆ
Share

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ನ್ಯಾಮತಿ (ಅರಬಗಟ್ಟ) ಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ಶ್ರೀಮತಿ ಇಂದಿರಾ ಗಾಂಧಿ ಪದವಿ ಪೂರ್ವ ವಸತಿ ಕಾಲೇಜಿನಲ್ಲಿ (ST-519) ಖಾಲಿ ಇರುವ ವಿವಿಧ ವಿಷಯಗಳ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ತಮ್ಮ ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ 8 ರೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗಿದೆ.

ವಿಷಯವಾರು ಹುದ್ದೆಗಳು ಮತ್ತು ವಿದ್ಯಾರ್ಹತೆ:

  • ಕನ್ನಡ ಉಪನ್ಯಾಸಕರು (1): M.A., B.Ed.

  • ಆಂಗ್ಲ (ಇಂಗ್ಲಿಷ್) ಉಪನ್ಯಾಸಕರು (1): M.A., B.Ed.

  • ಗಣಿತ ಉಪನ್ಯಾಸಕರು (1): M.Sc., B.Ed.

  • ಭೌತಶಾಸ್ತ್ರ ಉಪನ್ಯಾಸಕರು (1): M.Sc., B.Ed.

  • ರಸಾಯನಶಾಸ್ತ್ರ ಉಪನ್ಯಾಸಕರು (1): M.Sc., B.Ed.

  • ಜೀವಶಾಸ್ತ್ರ ಉಪನ್ಯಾಸಕರು (1): M.Sc., B.Ed.

  • ಗಣಕಯಂತ್ರ (ಕಂಪ್ಯೂಟರ್ ಸೈನ್ಸ್) ಉಪನ್ಯಾಸಕರು (1): M.C.A. / M.Tech / M.Sc. (Computer Science)

ಸಂಪರ್ಕ ಹಾಗೂ ಹೆಚ್ಚಿನ ವಿವರಗಳಿಗೆ:

ಅರ್ಜಿ ಸಲ್ಲಿಕೆ ಮತ್ತು ನೇಮಕಾತಿ ಕುರಿತ ಹೆಚ್ಚಿನ ಮಾಹಿತಿಗಾಗಿ ಶ್ರೀಮತಿ ಇಂದಿರಾ ಗಾಂಧಿ ಪದವಿ ಪೂರ್ವ ವಸತಿ ಶಾಲೆ, ಅರಬಗಟ್ಟ, ನ್ಯಾಮತಿ, ಹೊನ್ನಾಳಿ ತಾಲೂಕು ಇಲ್ಲಿನ ಪ್ರಾಂಶುಪಾಲರನ್ನು ನೇರವಾಗಿ ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *