Home ದಾವಣಗೆರೆ ಮಾಗಿ ಕುಟುಂಬ ಹಾಗೂ ಅಕ್ಕಿ ವರ್ತಕರಿಂದ ಶ್ರೀ ಮಂಜುನಾಥ ಸ್ವಾಮಿ ಅನ್ನದಾಸೋಹಕ್ಕೆ 1,000ಕ್ಕೂ ಹೆಚ್ಚು ಅಕ್ಕಿ ಪ್ಯಾಕೆಟ್ ಸಮರ್ಪಣೆ: ಧರ್ಮಸ್ಥಳಕ್ಕೆ ತೆರಳಿದ ಅಕ್ಕಿ ವಾಹನಗಳು, 250ಕ್ಕೂ ಹೆಚ್ಚು ಮಂದಿ
ದಾವಣಗೆರೆಬೆಂಗಳೂರು

ಮಾಗಿ ಕುಟುಂಬ ಹಾಗೂ ಅಕ್ಕಿ ವರ್ತಕರಿಂದ ಶ್ರೀ ಮಂಜುನಾಥ ಸ್ವಾಮಿ ಅನ್ನದಾಸೋಹಕ್ಕೆ 1,000ಕ್ಕೂ ಹೆಚ್ಚು ಅಕ್ಕಿ ಪ್ಯಾಕೆಟ್ ಸಮರ್ಪಣೆ: ಧರ್ಮಸ್ಥಳಕ್ಕೆ ತೆರಳಿದ ಅಕ್ಕಿ ವಾಹನಗಳು, 250ಕ್ಕೂ ಹೆಚ್ಚು ಮಂದಿ

Share
ಧರ್ಮಸ್ಥಳ
Share

ದಾವಣಗೆರೆ: ನಗರದ ದಿ|| ಶ್ರೀಮತಿ ಬಸಮ್ಮ ಹಾಗೂ ಶ್ರೀ ವೀರಬಸಪ್ಪ ಮಾಗಿ ಕುಟುಂಬ ಮತ್ತು ಅವರ ಬಂಧು-ಮಿತ್ರರ ವತಿಯಿಂದ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಗೆ ಅನ್ನದಾಸೋಹಕ್ಕಾಗಿ ಭಕ್ತಿಯಿಂದ ಅಕ್ಕಿ ಸಮರ್ಪಣೆ ಮಾಡಲು ದಾವಣಗೆರೆಯಿಂದ ತೆರಳಲಾಯಿತು.

ಧರ್ಮಸ್ಥಳ

ಮಾಗಿ ಕುಟುಂಬದಿಂದ 461 ಪ್ಯಾಕೆಟ್ ಅಕ್ಕಿಯನ್ನು ಮಕ್ಕಳಾದ ಕೈಲಾಶ್‌ಬಾಬು ಮಾಗಿ ಹಾಗೂ ಶ್ರೀಮತಿ ರೂಪಾ, ಚೌಕಿಪೇಟೆ ಅಕ್ಕಿ ವರ್ತಕರ ಸಂಘದ ಅಧ್ಯಕ್ಷರಾದ ಎಂ.ವಿ. ಜಯಪ್ರಕಾಶ್ ಮಾಗಿ, ಶ್ರೀಮತಿ ದಾನೇಶ್ವರಿ ದಂಪತಿ ನೀಡಿದ್ದರೆ, ಅವರ ಮಿತ್ರವೃಂದದ ವತಿಯಿಂದ 580 ಪ್ಯಾಕೆಟ್ ಅಕ್ಕಿಯನ್ನು ಸಂಗ್ರಹಿಸಿ ನೀಡಲಾಗಿದೆ.

ಇಂದು ಬೆಳಿಗ್ಗೆ 8 ಗಂಟೆಗೆ ಹಳೇಪೇಟೆಯ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ, ಧರ್ಮಸ್ಥಳಕ್ಕೆ ಧಾರ್ಮಿಕ ಯಾತ್ರೆ ಆರಂಭಿಸಲಾಯಿತು. ದೂಡಾ ಮಾಜಿ ಅಧ್ಯಕ್ಷ ದೇವರಮನೆ ಶಿವಕುಮಾರ್ ಅವರು ಈ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಕ್ಕಿ ವರ್ತಕ ಎಸ್.ಜಿ. ಉಳುವಯ್ಯ, ದೇವರಮನೆ ಶಿವರಾಜ್, ಕೈಲಾಶ್ ಬಾಬು ಮಾಗಿ, ವಿನಾಯಕ ರೈಸ್ ಮಿಲ್ ನ ವಿ. ಸಿದ್ದೇಶ್, ಆರ್.ಎಂ. ಪಂಚಾಕ್ಷರಿ, ರಾಜೇಶ್, ಎಂ. ವೈ. ಆನಂದ್, ಹಾವೇರಿ ಸತೀಶ್, ಹಾವೇರಿ ಪ್ರಶಾಂತ್, ಹಾವೇರಿ ಪ್ರಬಣ್ಣ, ಸಂಗಪ್ಪ ಮಾಗನಹಳ್ಳಿ, ಬಿ.ಪಿ.ಎಂ. ಜಗದೀಶ್, ಜೈ ರಾಜ್ ಮೇಟಿ, ಕೆ. ವಿ‌ ಗುರು, ಅಣಬೇರು ಮಂಜುನಾಥ್, ಕುಮಾರ್ ಪಾಲ್ ಜೈನ್. ಸಿ. ಎಮ್.ಬಿ. ಶಿವಕುಮಾರ್ ಕಮಲ್, ಗಿರೀಶ್, ಜರಿಕಟ್ಟಿ ಚಂದ್ರು, ಬ್ಯಾಡಗಿ ವಿನಾಯಕ, ಮಾಳಿಗೆ ಸಿದ್ದೇಶಪ್ಪ, ಪರಶುರಾಮ್ ಪಿ. ಎಸ್., ಜಯಪ್ರಕಾಶ್ ಮಾಗಿ ಕುಟುಂಬದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles