Home ದಾವಣಗೆರೆ ವರ್ಷಗಳ ಕಾಯುವಿಕೆಗೆ ಸಿಕ್ಕಿತು ಮುಕ್ತಿ: 16 ವರ್ಷಗಳಿಂದ ನಡೆಯಲಾಗದ ನಿವಾಸಿಗೆ ನಿಟ್ಟುವಳ್ಳಿ ಪ್ರವೀಣ್ ಕುಮಾರ್ ನೆರವು!
ದಾವಣಗೆರೆಕ್ರೀಡೆಬೆಂಗಳೂರು

ವರ್ಷಗಳ ಕಾಯುವಿಕೆಗೆ ಸಿಕ್ಕಿತು ಮುಕ್ತಿ: 16 ವರ್ಷಗಳಿಂದ ನಡೆಯಲಾಗದ ನಿವಾಸಿಗೆ ನಿಟ್ಟುವಳ್ಳಿ ಪ್ರವೀಣ್ ಕುಮಾರ್ ನೆರವು!

Share
ನಿವಾಸಿ
Share

ದಾವಣಗೆರೆ: ನಗರದ 29ನೇ ವಾರ್ಡ್ ನಿವಾಸಿ ಪರಮೇಶ್ ಅವರು ಕಳೆದ 16 ವರ್ಷಗಳಿಂದ ಸ್ಪೈನಲ್ ಕಾರ್ಡ್ ತೊಂದರೆಯಿಂದಾಗಿ ನಡೆಯಲು ಅಸಮರ್ಥರಾಗಿದ್ದು, ಅವರ ಪರಿಸ್ಥಿತಿಯನ್ನು ಮನಗಂಡ ಸಮಾಜಸೇವಕ ನಿಟ್ಟುವಳ್ಳಿ ಪ್ರವೀಣ್ ಕುಮಾರ್ ಅವರು ಅಗತ್ಯ ನೆರವು ಒದಗಿಸಲು ಮುಂದಾಗಿದ್ದಾರೆ.

ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಪರಿಣಾಮ, ಅಂಗವಿಕಲರ ಇಲಾಖೆಯ ವತಿಯಿಂದ ಪರಮೇಶ್ ಅವರಿಗೆ ಉಚಿತವಾಗಿ ವ್ಹೀಲ್‌ಚೇರ್ ಮಂಜೂರು ಮಾಡಿಸಲಾಯಿತು.

ಇದೇ ವೇಳೆ ಮಾತನಾಡಿದ ನಿಟ್ಟುವಳ್ಳಿ ಪ್ರವೀಣ್ ಕುಮಾರ್, ಅಂಗವಿಕಲರು ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಅವರನ್ನು ಅಸಮರ್ಥರು ಎಂಬ ದೃಷ್ಟಿಯಿಂದ ನೋಡುವುದು ತಪ್ಪು. ಸರ್ಕಾರ ಮತ್ತು ವಿವಿಧ ಸಂಸ್ಥೆಗಳು ಮಾಸಾಶನ, ಉಚಿತ ಸಹಾಯಕ ಸಾಧನಗಳು ಹಾಗೂ ಸ್ವಯಂ ಉದ್ಯೋಗಕ್ಕೆ ಅಗತ್ಯ ನೆರವು ನೀಡುತ್ತಿವೆ. ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಅಂಗವಿಕಲರು ಸ್ವಾಭಿಮಾನದಿಂದ ಬದುಕಲು ಸಮಾಜದ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಕರೆ ನೀಡಿದರು.

ಅಂಗವಿಕಲರ ಸ್ವಾವಲಂಬಿ ಬದುಕಿಗೆ ಸಮಾಜದ ಸಹಕಾರ ಮತ್ತು ಮಾನವೀಯತೆ ಅತ್ಯಗತ್ಯವಾಗಿದ್ದು, ಇಂತಹ ಸೇವಾ ಕಾರ್ಯಗಳು ಇತರರಿಗೂ ಪ್ರೇರಣೆಯಾಗಲಿ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ 29ನೇ ವಾರ್ಡ್ ಅಧ್ಯಕ್ಷರಾದ ಆನಗೋಡು  ನಾಗರಾಜ್. ಅರುಣ್ ಹೆಚ್. ಎಂ. ಪ್ರಥಮ್ ಎ. ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *