ಬೆಂಗಳೂರು: ಕರ್ನಾಟಕದ ಕಾಲೇಜುಗಳಲ್ಲಿ 7,000 ವಿದ್ಯಾರ್ಥಿಗಳಿಗೆ HIV ಸೋಂಕು ತಗಲಿದೆ ಹಾಗೂ ಕಾಲೇಜುಗಳಲ್ಲಿ HIV ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು ಮತ್ತು ದಾರಿ ತಪ್ಪಿಸುವಂತದ್ದು ಎಂದು ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವಿಕೆ ಸೊಸೈಟಿ (KSAPS) ಸ್ಪಷ್ಟಪಡಿಸಿದೆ.
ಈ ಕುರಿತು ಸಾರ್ವಜನಿಕರಲ್ಲಿ ಉಂಟಾಗಿರುವ ಆತಂಕಕ್ಕೆ ತೆರೆ ಎಳೆದಿರುವ KSAPS ಯೋಜನಾ ನಿರ್ದೇಶಕಿ ಪದ್ಮಾ ಬಸವಂತಪ್ಪ (IAS), ಇಲಾಖೆಯ ಬಳಿ ವಿದ್ಯಾರ್ಥಿಗಳು, ಗೃಹಿಣಿಯರು ಎಂದು ಪ್ರತ್ಯೇಕ ವರ್ಗೀಕರಿಸಿ ಎಚ್‌ಐವಿ ಅಂಕಿ-ಅಂಶಗಳನ್ನು ನಿರ್ವಹಿಸುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿ 7,000 ಸಂಖ್ಯೆಯ ಡೇಟಾ ಇಲಾಖೆಯ ಬಳಿ ಇಲ್ಲ ಎಂದು ತಿಳಿಸಿದ್ದಾರೆ.
ಸುಳ್ಳು ಹಬ್ಬಿಸಬೇಡಿ: KSAPS ನೀಡಿದ ಪ್ರಮುಖ ಸ್ಪಷ್ಟನೆಗಳು
39,000 ಒಟ್ಟು ಪ್ರಕರಣಗಳು: 2004 ರಿಂದ ಇಲ್ಲಿಯವರೆಗೆ 18 ರಿಂದ 35 ವರ್ಷ ವಯಸ್ಸಿನ ಒಟ್ಟು 39,000 ಜನರಲ್ಲಿ HIV ಪತ್ತೆಯಾಗಿದೆ. ಇದನ್ನು ಕೆಲವು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು “7,000 ಕಾಲೇಜು ವಿದ್ಯಾರ್ಥಿಗಳು” ಎಂದು ತಪ್ಪು ವ್ಯಾಖ್ಯಾನ ಮಾಡಿವೆ.
ಪರೀಕ್ಷೆ ಕಡ್ಡಾಯವಲ್ಲ: HIV ಮತ್ತು AIDS (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ 2017ರ ಪ್ರಕಾರ, ಯಾವುದೇ ವ್ಯಕ್ತಿಗೆ ಸಮ್ಮತಿಯಿಲ್ಲದೆ ಕಡ್ಡಾಯವಾಗಿ ಎಚ್‌ಐವಿ ಪರೀಕ್ಷೆ ಮಾಡುವಂತಿಲ್ಲ. ಕಾಲೇಜುಗಳಲ್ಲಿ ಕೇವಲ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆಯೇ ಹೊರತು ಪರೀಕ್ಷೆ ಕಡ್ಡಾಯ ಮಾಡಿಲ್ಲ.
ಸುಳ್ಳು ಸುದ್ದಿ ಹರಡಿದರೆ ಕಾನೂನು ಕ್ರಮ: ಆಧಾರರಹಿತ ಸುದ್ದಿಗಳನ್ನು ಹಂಚಿಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಮತ್ತು ಪೋಷಕರಲ್ಲಿ ಭೀತಿ ಹುಟ್ಟಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.
ರಾಜ್ಯದಲ್ಲಿ 56,000 ಜನರಿಗೆ HIV ಇರುವುದು ಗೊತ್ತೇ ಇಲ್ಲ!
ರಾಜ್ಯದಲ್ಲಿ ಪ್ರಸ್ತುತ ಸುಮಾರು 56,000 ಜನರಿಗೆ ತಮಗೆ HIV ಸೋಂಕು ತಗಲಿರುವ ವಿಷಯವೇ ತಿಳಿದಿಲ್ಲ ಎಂದು ಅಂದಾಜಿಸಲಾಗಿದೆ. ಕೇವಲ 12% ಜನರು ಮಾತ್ರ ಸ್ವಯಂಪ್ರೇರಿತರಾಗಿ ಪರೀಕ್ಷಾ ಕೇಂದ್ರಗಳಿಗೆ ಬರುತ್ತಿದ್ದಾರೆ.
ಕರ್ನಾಟಕದಲ್ಲಿ ಪ್ರತಿವರ್ಷ ಸುಮಾರು 11,000 ದಿಂದ 12,000 ಹೊಸ ಎಚ್‌ಐವಿ ಪ್ರಕರಣಗಳು ಪತ್ತೆಯಾಗುತ್ತಿವೆ. ಡೆಟಿಂಗ್ ಆ್ಯಪ್‌ಗಳ ಮೂಲಕ ಅನಾಮಧೇಯ ಸಂಪರ್ಕ ಹೆಚ್ಚುತ್ತಿರುವುದರಿಂದ ಕಾಂಟ್ಯಾಕ್ಟ್ ಟ್ರೇಸಿಂಗ್ ಸವಾಲಾಗಿದೆ ಎಂದು ಇಲಾಖೆ ತಿಳಿಸಿದೆ.
‘ಬ್ರೇಕ್ ಫ್ರೀ’ ಆ್ಯಪ್ ಬಳಸಿ ಸ್ವಯಂ ತಪಾಸಣೆ ಮಾಡಿಕೊಳ್ಳಿ
ಎಚ್‌ಐವಿ ಮುನ್ನೆಚ್ಚರಿಕೆ ಹಾಗೂ ಆರಂಭಿಕ ಪತ್ತೆಗಾಗಿ KSAPS ‘Break Free’ ಎಂಬ ಮೊಬೈಲ್ ಅಪ್ಲಿಕೇಶನ್ ಪ್ರಚಾರ ಮಾಡುತ್ತಿದೆ.
ಈ ಆ್ಯಪ್‌ನಲ್ಲಿ 7 ಸರಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಗೌಪ್ಯವಾಗಿ ಸ್ವಯಂ-ಅಪಾಯದ ಮೌಲ್ಯಮಾಪನ (Risk Assessment) ಮಾಡಿಕೊಳ್ಳಬಹುದು.
ಇಲ್ಲಿ ಯಾವುದೇ ವೈಯಕ್ತಿಕ ಮಾಹಿತಿ ಸಂಗ್ರಹಿಸುವುದಿಲ್ಲ.
ರಿಸ್ಕ್ ಹಂತದಲ್ಲಿರುವವರು ಹತ್ತಿರದ ಸಮಗ್ರ ಕೌನ್ಸೆಲಿಂಗ್ ಮತ್ತು ಪರೀಕ್ಷಾ ಕೇಂದ್ರಗಳಿಗೆ (ICTC) ಭೇಟಿ ನೀಡಿ ಉಚಿತ ತಪಾಸಣೆ ಮಾಡಿಸಿಕೊಳ್ಳಬಹುದು.
ಗಮನಿಸಿ: ಪ್ರಸ್ತುತ ರಾಜ್ಯದಲ್ಲಿ 23,000 ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದ್ದು, ಶೇಕಡಾ 96 ರಷ್ಟು ಜನರಲ್ಲಿ ವೈರಲ್ ಸಪ್ರೆಶನ್ (ವೈರಸ್ ಹರಡುವಿಕೆ ನಿಯಂತ್ರಣ) ಸಾಧಿಸಲಾಗಿದೆ. ಸಾರ್ವಜನಿಕರು KSAPS ಅಥವಾ NACO ಅಧಿಕೃತ ಮಾಹಿತಿಯನ್ನು ಮಾತ್ರ ನಂಬಬೇಕಾಗಿ ವಿನಂತಿ.
- 7000 students HIV claim
- 7000 ವಿದ್ಯಾರ್ಥಿಗಳಿಗೆ ಎಚ್‌ಐವಿ
- Break Free app HIV
- Break Free India QR code
- HIV testing in Karnataka colleges
- HIV testing mandatory claim
- Karnataka AIDS Prevention Society
- Karnataka health news
- Karnataka HIV news
- KSAPS clarification
- Padma Basavanthappa IAS
- ಎಚ್‌ಐವಿ ಪರೀಕ್ಷೆ ಕಡ್ಡಾಯವೇ
- ಕರ್ನಾಟಕ ಆರೋಗ್ಯ ಸುದ್ದಿ
- ಕರ್ನಾಟಕ ಎಚ್‌ಐವಿ ಸುದ್ದಿ
- ಕರ್ನಾಟಕ ಏಡ್ಸ್ ತಡೆಗಟ್ಟುವಿಕೆ ಸೊಸೈಟಿ
- ಕಾಲೇಜುಗಳಲ್ಲಿ ಎಚ್‌ಐವಿ ಪರೀಕ್ಷೆ
- ಕೆಎಸ್ಎಪಿಎಸ್ ಸ್ಪಷ್ಟನೆ
- ಪದ್ಮಾ ಬಸವಂತಪ್ಪ
- ಬ್ರೇಕ್ ಫ್ರೀ ಆ್ಯಪ್





Leave a comment