Home ದಾವಣಗೆರೆ ನನ್ನನ್ನು ಊರಿನಿಂದ ಓಡಿಸಲು ಯಾರಿಂದಲೂ ಸಾಧ್ಯವಿಲ್ಲ, ವಿಜಯೇಂದ್ರ ಬಂದರೆ ಸಚಿವ ಎಸ್ಎಸ್ಎಂ ಮನೆ ಮುತ್ತಿಗೆಗೆ ನಾನೂ ಭಾಗಿ: ಮಾಜಿ ಸಂಸದ ಜಿ. ಎಂ. ಸಿದ್ದೇಶ್ವರ
ದಾವಣಗೆರೆನವದೆಹಲಿಬೆಂಗಳೂರು

ನನ್ನನ್ನು ಊರಿನಿಂದ ಓಡಿಸಲು ಯಾರಿಂದಲೂ ಸಾಧ್ಯವಿಲ್ಲ, ವಿಜಯೇಂದ್ರ ಬಂದರೆ ಸಚಿವ ಎಸ್ಎಸ್ಎಂ ಮನೆ ಮುತ್ತಿಗೆಗೆ ನಾನೂ ಭಾಗಿ: ಮಾಜಿ ಸಂಸದ ಜಿ. ಎಂ. ಸಿದ್ದೇಶ್ವರ

Share
ಜಿ. ಎಂ. ಸಿದ್ದೇಶ್ವರ
Share

ದಾವಣಗೆರೆ: ಹರಿಹರ ಶಾಸಕ ಬಿ. ಪಿ. ಹರೀಶ್ ವಿರುದ್ಧ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವಾಚ್ಯ ಶಬ್ದ ಬಳಸಿದ್ದು, ಅವರು ಕ್ಷಮೆ ಕೇಳದಿದ್ದರೆ ಸಚಿವರ ಮನೆಗೆ ಮುತ್ತಿಗೆ ಹಾಕುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ. ರಾಜ್ಯಾಧ್ಯಕ್ಷರು ಬಂದರೆ ತಾವು ಕೂಡ ಹೋರಾಟದಲ್ಲಿ ಭಾಗವಹಿಸುವುದಾಗಿ ಮಾಜಿ ಸಂಸದ ಜಿ. ಎಂ. ಸಿದ್ದೇಶ್ವರ ಸ್ಪಷ್ಟಪಡಿಸಿದ್ದಾರೆ.

ಜಿಎಂಐಟಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ದಾವಣಗೆರೆಯಲ್ಲಿ ನಾವು ಗುದ್ದಾಡಿಯೇ ಇಲ್ಲ. ಬಿಜೆಪಿ ಭದ್ರವಾಗಿದೆ. ಎಲ್ಲಾ ಪಕ್ಷಗಳಲ್ಲಿಯೂ ಇರುತ್ತದೆ. ನಮ್ಮಲ್ಲೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿವೆ. ಕಾಂಗ್ರೆಸ್ ನಲ್ಲಿ ಇಲ್ಲವಾ? ಎಲ್ಲಾ ಪಕ್ಷಗಳಲ್ಲಿಯೂ ಇದು ಸಾಮಾನ್ಯ. ಕಾರ್ಯಕರ್ತರು ಬೇಸರ ಆಗಿಲ್ಲ. ನಮ್ಮ ಹತ್ತಿರವೂ ಬರುತ್ತಾರೆ. ಅವರ ಹತ್ತಿರವೂ ಹೋಗುತ್ತಾರೆ. ನಾವೆಲ್ಲಾ ಚೆನ್ನಾಗಿದ್ದೇವೆ. ಎಲ್ಲಾ ಪಕ್ಷಗಳಲ್ಲಿಯೂ ಇದ್ದದ್ದೇ ಎಂದು ಹೇಳಿದರು.

ದಾವಣಗೆರೆಯಲ್ಲಿ ಬಿಜೆಪಿ ಭದ್ರವಾಗಿದ್ದು, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಪ್ರತಿಯೊಂದು ರಾಜಕೀಯ ಪಕ್ಷದಲ್ಲೂ ಸಹಜ. ಕಾಂಗ್ರೆಸ್‌ನಲ್ಲೂ ಭಿನ್ನಾಭಿಪ್ರಾಯಗಳಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಧಿಕಾರದ ನಿರಾಶೆ ಸಹಜ:

ಮಂತ್ರಿ ಸ್ಥಾನ ಸಿಗದಿದ್ದಾಗ ಅಥವಾ ಅಧಿಕಾರ ತಪ್ಪಿದಾಗ ನಾಯಕರಲ್ಲಿ ಬೇಸರ ಉಂಟಾಗುವುದು ಸಾಮಾನ್ಯ. ನವೆಂಬರ್‌ ವೇಳೆಗೆ ಪಕ್ಷದ ವಾತಾವರಣ ಸರಿಹೋಗಬಹುದು ಎಂಬ ಭರವಸೆಯನ್ನು ಸಿದ್ದೇಶ್ವರ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯಲ್ಲೇ ಮುಂದುವರಿಕೆ:

“ನಾನು ಮೂಲತಃ ರೈತ. ನನ್ನನ್ನು ಊರಿನಿಂದ ಓಡಿಸಲು ಯಾರಿಂದಲೂ ಸಾಧ್ಯವಿಲ್ಲ. ಉಸಿರಿರುವವರೆಗೆ ಬಿಜೆಪಿಯಲ್ಲೇ ಉಳಿದು ಪಕ್ಷಕ್ಕಾಗಿ ಶ್ರಮಿಸುತ್ತೇನೆ” ಎಂದು ಅವರು ಪುನರುಚ್ಚರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles