ಬೆಂಗಳೂರು: ಕನ್ನಡ ಬಿಗ್ ಬಾಸ್ ಶೋನಿಂದ ಮಹತ್ವದ ಸುದ್ದಿಯೊಂದು ಹೊರಬಿದ್ದಿದ್ದು, ಹಿರಿಯ ನಟ ಹಾಗೂ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಅನಾರೋಗ್ಯ ಹಾಗೂ ತೀವ್ರ ಕಾಲು ನೋವಿನ ಕಾರಣದಿಂದ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಕಲರ್ಸ್ ಕನ್ನಡ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಅನಾರೋಗ್ಯ ಕಾರಣದಿಂದ ಬಿಗ್ ಬಾಸ್ ಪಯಣ ನಿಲ್ಲಿಸಿದ ಓಂ ಪ್ರಕಾಶ್ ರಾವ್ ಎಂದು ಪ್ರಕಟಿಸಿದೆ.
ಆಗಿದ್ದೇನು?
ಹಳೆಯ ಗಾಯ ಉಲ್ಬಣ: ಓಂ ಪ್ರಕಾಶ್ ರಾವ್ ಅವರು ಈ ಹಿಂದೆ ರಸ್ತೆ ಅಪಘಾತಕ್ಕೊಳಗಾಗಿ ಕಾಲಿಗೆ ಬಲವಾದ ಏಟು ತಿಂದಿದ್ದರು. ಬಿಗ್ ಬಾಸ್ ಮನೆಯಲ್ಲಿ ನಡೆದ ಕಠಿಣ ಟಾಸ್ಕ್‌ಗಳು ಹಾಗೂ ನಿರಂತರ ಓಡಾಟದಿಂದಾಗಿ ಅವರ ಕಾಲಿನಲ್ಲಿ ತೀವ್ರ ಊತ ಮತ್ತು ನೋವು ಕಾಣಿಸಿಕೊಂಡಿದೆ.
ಮಾನಸಿಕ ಒತ್ತಡ: ಮನೆಯೊಳಗಿನ ಕಠಿಣ ವಾತಾವರಣ, ನಿರಂತರ ಆಟದ ಒತ್ತಡ ಹಾಗೂ ವಯೋಸಹಜ ಆಯಾಸವೂ ಅವರ ಅನಾರೋಗ್ಯಕ್ಕೆ ಕಾರಣ ಎನ್ನಲಾಗಿದೆ.
ತಕ್ಷಣದ ಚಿಕಿತ್ಸೆ: ನೋವಿನಿಂದ ಬಳಲುತ್ತಿದ್ದ ಅವರನ್ನು ಬಿಗ್ ಬಾಸ್ ನಿರ್ವಹಣಾ ತಂಡ ಕೂಡಲೇ ಬಿಡದಿಯ ಕಾಡುಮನೆ ಎಸ್ಟೇಟ್ ಬಳಿ ಇರುವ ಆರಾಧ್ಯ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದೆ.
ಮತ್ತೆ ಕಮ್‌ಬ್ಯಾಕ್ ಮಾಡ್ತಾರಾ?
ಓಂ ಪ್ರಕಾಶ್ ರಾವ್ ಅವರಿಗೆ ಪ್ರಸ್ತುತ ವೈದ್ಯರ ನಿಗಾದಲ್ಲಿ ಪ್ರಥಮ ಚಿಕಿತ್ಸೆ ಮತ್ತು ಸಂಪೂರ್ಣ ವೈದ್ಯಕೀಯ ತಪಾಸಣೆ ನೀಡಲಾಗುತ್ತಿದೆ. ವೈದ್ಯರ ಸಲಹೆ ಹಾಗೂ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ನಂತರ, ಅವರು ಮತ್ತೆ ಬಿಗ್ ಬಾಸ್ ಮನೆಗೆ ಕಮ್‌ಬ್ಯಾಕ್ ಮಾಡುವ ಸಾಧ್ಯತೆಯಿದೆ ಎಂದು ವಾಹಿನಿ ಹಾಗೂ ಆಯೋಜಕರ ಮೂಲಗಳಿಂದ ತಿಳಿದುಬಂದಿದೆ.





Leave a comment