ದಾವಣಗೆರೆ: ದಂಪತಿಗಳ ಕಣ್ಣಿಗೆ ಕಾರದಪುಡಿ ಎರಚಿ ಚಿನ್ನದ ಸರ ದೋಚಿದ್ದ ಅಂತರ ಜಿಲ್ಲಾ ಇಬ್ಬರು ದರೋಡೆಕೋರರನ್ನು ಬಂಧಿಸುವಲ್ಲಿ ಜಗಳೂರು ತಾಲೂಕಿನ ಬಿಳಿಚೋಡು ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆಯ ವಿವರ:
ಕಳೆದ ಏಪ್ರಿಲ್ 27ರಂದು ಸಾಯಂಕಾಲ ಜಗಳೂರು ತಾಲ್ಲೂಕಿನ ರಂಗಯ್ಯನದುರ್ಗ ಅರಣ್ಯ ಪ್ರದೇಶದ ಪಲ್ಲಾಗಟ್ಟೆ-ಮಲೇಮಾಚಿಕೆರೆ ರಸ್ತೆಯಲ್ಲಿ ಯರ್ಲಕಟ್ಟೆ ಗ್ರಾಮದ ರೇವಣ್ಣ ಎಂಬುವವರು ತಮ್ಮ ಪತ್ನಿಯೊಂದಿಗೆ ಮೋಟಾರ್ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಹೊಂಚು ಹಾಕಿ ಕುಳಿತಿದ್ದ ಇಬ್ಬರು ದುಷ್ಕರ್ಮಿಗಳು, ದಂಪತಿಗಳ ಕಣ್ಣಿಗೆ ಕಾರದಪುಡಿ ಎರಚಿದ್ದಾರೆ. ಬಳಿಕ ರೇವಣ್ಣ ಅವರ ಪತ್ನಿ ಕೊರಳಲ್ಲಿದ್ದ ಸುಮಾರು 10 ಗ್ರಾಂ ತೂಕದ ಬಂಗಾರದ ಎಳೆಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತು ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆರೋಪಿಗಳ ಬಂಧನ – ನಗದು ಜಪ್ತಿ:
ಪ್ರಕರಣದ ಪತ್ತೆಗಾಗಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಉಪಾಧೀಕ್ಷಕರಾದ ಬಿ.ಎಸ್. ಬಸವರಾಜ್ ಮಾರ್ಗದರ್ಶನದಲ್ಲಿ, ಬಿಳಿಚೋಡು ಪಿಐ ಸೈಯದ್ ದಾದಾ ನೂರ್ ಅಹ್ಮದ್ ಹಾಗೂ ಸಿಬ್ಬಂದಿಗಳ ತಂಡ ತನಿಖೆ ಕೈಗೊಂಡಿತ್ತು. ಸದ್ಯ ಪೊಲೀಸರು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ನಿವಾಸಿಗಳಾದ ಮನೋಜ್ @ ಮನು ಎಂ (28) ಮತ್ತು ರಮೇಶ (48) ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಕಳವು ಮಾಡಿದ ಸ್ವತ್ತಿಗೆ ಸಂಬಂಧಿಸಿದ 50 ಸಾವಿರ ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ತಂಡಕ್ಕೆ ಶ್ಲಾಘನೆ:
ಅಂತರ ಜಿಲ್ಲಾ ಕಳ್ಳರನ್ನು ಕ್ಷಿಪ್ರವಾಗಿ ಬಂಧಿಸಿದ ಬಿಳಿಚೋಡು ಪೊಲೀಸ್ ನಿರೀಕ್ಷಕ ಸೈಯದ್ ದಾದಾ ನೂರ್ ಅಹ್ಮದ್, ಸಿಬ್ಬಂದಿಗಳಾದ ಕೃಷ್ಣಮೂರ್ತಿ ಆರ್.ಎ., ಬಸವರಾಜ್ ಜಿ.ಜೆ., ಭೋವಿ ಹನುಮಂತಪ್ಪ, ಪ್ರವೀಣ್ ಕುಮಾರ ಕುರಿ ಹಾಗೂ ರಾಜು ಕೊಡದರ ಅವರ ಕಾರ್ಯಕ್ಷಮತೆಯನ್ನು ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ (SP) ಶೇಖರ್ ಹೆಚ್.ಟಿ. ಐಪಿಎಸ್ ಅವರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.
- Bilichodu police station
- Chilli powder robbery case
- Davanagere crime news
- DAVANAGERE POLICE
- Davanagere SP Shekhar HT
- Gold chain theft case
- Inter district thieves arrested
- Jagalur chain snatching
- Jagalur news
- Karnataka crime updates
- ಅಂತರ ಜಿಲ್ಲಾ ಕಳ್ಳರ ಬಂಧನ
- ಕಾರದಪುಡಿ ಎರಚಿ ಕಳ್ಳತನ
- ಚಿನ್ನದ ಸರ ಕಳ್ಳತನ
- ಜಗಳೂರು ಕ್ರೈಮ್
- ಜಗಳೂರು ಸರಗಳ್ಳತನ
- ದಾವಣಗೆರೆ ಕ್ರೈಮ್ ನ್ಯೂಸ್
- ದಾವಣಗೆರೆ ಸುದ್ದಿ
- ಬಿಳಿಚೋಡು ಪೊಲೀಸ್ ಠಾಣೆ
- ಶೇಖರ್ ಹೆಚ್ ಟಿ ಐಪಿಎಸ್





Leave a comment