Home ದಾವಣಗೆರೆ ನಾಳೆ ದಾವಣಗೆರೆ ಮತ್ತು ಜಗಳೂರಿನ ಈ ಪ್ರದೇಶಗಳಲ್ಲಿ ಇಡೀ ದಿನ ಕರೆಂಟ್ ಇರಲ್ಲ! ಬೆಸ್ಕಾಂ ಪ್ರಕಟಣೆ
ದಾವಣಗೆರೆಬೆಂಗಳೂರು

ನಾಳೆ ದಾವಣಗೆರೆ ಮತ್ತು ಜಗಳೂರಿನ ಈ ಪ್ರದೇಶಗಳಲ್ಲಿ ಇಡೀ ದಿನ ಕರೆಂಟ್ ಇರಲ್ಲ! ಬೆಸ್ಕಾಂ ಪ್ರಕಟಣೆ

Share
ದಾವಣಗೆರೆ
Share

ದಾವಣಗೆರೆ: ಜಿಲ್ಲೆಯ ಸಾರ್ವಜನಿಕರ ಗಮನಕ್ಕೆ, ಹೆಸ್ಕಾಂ/ಬೆಸ್ಕಾಂ ವತಿಯಿಂದ ತುರ್ತು ಕಾಮಗಾರಿ ಹಾಗೂ ಜಂಗಲ್ ಕಟಿಂಗ್ ಹಮ್ಮಿಕೊಂಡಿರುವುದರಿಂದ ಜೂನ್ 18 ರಂದು ದಾವಣಗೆರೆ ನಗರದ ಕೆಲವು ಪ್ರಮುಖ ಪ್ರದೇಶಗಳು ಹಾಗೂ ಜಗಳೂರು ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ನಗರ ಭಾಗದಲ್ಲಿ ವಿದ್ಯುತ್ ಕಡಿತದ ವಿವರ (ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ):

66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದ ಎಸ್.ವಿ.ಟಿ ಎಫ್01 (SVT F01) ಫೀಡರ್ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಇರುವುದರಿಂದ ಮಾಮಾಸ್ ಜಾಯಿಂಟ್ ರಸ್ತೆ, ಎಮ್.ಸಿ.ಸಿ. ಬಿ ಬ್ಲಾಕ್, ಡೆಂಟಲ್ ಕಾಲೇಜ್ ರಸ್ತೆ, ಆಂಜನೇಯ ಬಡಾವಣೆ 1ನೇ ಕ್ರಾಸ್‌ನಿಂದ 4ನೇ ಕ್ರಾಸ್‌ವರೆಗೆ, ಯು.ಬಿ.ಡಿ.ಟಿ. ಕಾಲೇಜ್, ಡಿ.ಆರ್.ಆರ್. ಪಾಲಿಟೆಕ್ನಿಕ್, ಅನುಭವ ಮಂಟಪ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂನ್ 18 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕರೆಂಟ್ ಇರುವುದಿಲ್ಲ.

ಗ್ರಾಮೀಣ/ಜಗಳೂರು ಭಾಗದ ವಿವರ (ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ):

66/11ಕೆವಿ ಪಲ್ಲಾಗಟ್ಟೆ, ಜಗಳೂರು ಮತ್ತು ಹೆಚ್.ಎಂ ಹೊಳೆ ವಿದ್ಯುತ್ ವಿತರಣಾ ಕೇಂದ್ರಗಳಿಗೆ ಸಂಬಂಧಿಸಿದ ಎನ್‍ಜೆವೈ & ಐ.ಪಿ ಮಾರ್ಗಗಳಲ್ಲಿ ಜಂಗಲ್ ಕಟಿಂಗ್ ಮತ್ತು ಫೀಡರ್ ನಿರ್ವಹಣೆ ಕೆಲಸ ಇರುವುದರಿಂದ ಮಾಕುಂಟೆ ರಸ್ತೆ, ತುಪ್ಪದಹಳ್ಳಿ, ತೋರಣಘಟ್ಟ, ಲಿಂಗನಹಳ್ಳಿ, ಹೊಸದುರ್ಗ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂನ್ 18 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕಾಗಿ ಬೆಸ್ಕಾಂ ಪ್ರಕಟಣೆಯಲ್ಲಿ ಕೋರಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles