Home ದಾವಣಗೆರೆ Davanagere Anganwadi Recruitment 2026: ದಾವಣಗೆರೆಯಲ್ಲಿ 87 ಅಂಗನವಾಡಿ ಹುದ್ದೆಗಳ ಭರ್ತಿ; ಅರ್ಜಿ ಸಲ್ಲಿಸುವುದು ಹೇಗೆ?
ದಾವಣಗೆರೆಉದ್ಯೋಗ ವಾರ್ತೆಬೆಂಗಳೂರು

Davanagere Anganwadi Recruitment 2026: ದಾವಣಗೆರೆಯಲ್ಲಿ 87 ಅಂಗನವಾಡಿ ಹುದ್ದೆಗಳ ಭರ್ತಿ; ಅರ್ಜಿ ಸಲ್ಲಿಸುವುದು ಹೇಗೆ?

Share
ದಾವಣಗೆರೆ
Share

ದಾವಣಗೆರೆ: ಜಿಲ್ಲೆಯ ಮಹಿಳಾ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಜಿಲ್ಲಾ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಒಟ್ಟು 87 ಗೌರವ ಸೇವೆಯ ಹುದ್ದೆಗಳ ಭರ್ತಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಧಿಕೃತ ಪ್ರಕಟಣೆ ಹೊರಡಿಸಿದೆ.

ಹುದ್ದೆಗಳ ವಿವರ ಮತ್ತು ತಾಲ್ಲೂಕುವಾರು ಹಂಚಿಕೆ:

ದಾವಣಗೆರೆ ಜಿಲ್ಲೆಯಾದ್ಯಂತ ಒಟ್ಟು 42 ಅಂಗನವಾಡಿ ಕಂ ಕ್ರೆಶ್ ಕಾರ್ಯಕರ್ತೆ (Creche Worker) ಹಾಗೂ 45 ಸಹಾಯಕಿಯರ (Helper) ಹುದ್ದೆಗಳು ಖಾಲಿ ಇದ್ದು, ತಾಲ್ಲೂಕುವಾರು ವಿವರ ಈ ಕೆಳಗಿನಂತಿದೆ:

ದಾವಣಗೆರೆ: ಕಾರ್ಯಕರ್ತೆ – 11, ಸಹಾಯಕಿ – 14

ಚನ್ನಗಿರಿ: ಕಾರ್ಯಕರ್ತೆ – 10, ಸಹಾಯಕಿ – 10

ಜಗಳೂರು: ಕಾರ್ಯಕರ್ತೆ – 06, ಸಹಾಯಕಿ – 06

ಹೊನ್ನಾಳಿ: ಕಾರ್ಯಕರ್ತೆ – 06, ಸಹಾಯಕಿ – 06

ಹರಿಹರ: ಕಾರ್ಯಕರ್ತೆ – 05, ಸಹಾಯಕಿ – 05

ನ್ಯಾಮತಿ: ಕಾರ್ಯಕರ್ತೆ – 04, ಸಹಾಯಕಿ – 04

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ಮತ್ತು ಅರ್ಹ ಮಹಿಳಾ ಅಭ್ಯರ್ಥಿಗಳು ದಾವಣಗೆರೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕು. ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ, ಮುಚ್ಚಿದ ಲಕೋಟೆಯಲ್ಲಿ (Seal Cover) ಉಪನಿರ್ದೇಶಕರ ಕಚೇರಿಯಲ್ಲಿ ಇಡಲಾಗಿರುವ ಟೆಂಡರ್ ಬಾಕ್ಸ್‌ನಲ್ಲಿ ಖುದ್ದಾಗಿ ತಲುಪಿಸಬೇಕಾಗಿ ಕೋರಲಾಗಿದೆ.

ಪ್ರಮುಖ ದಿನಾಂಕ ಮತ್ತು ಸಂಪರ್ಕ ಸಂಖ್ಯೆ:

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 28

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08192-264056

ಗಮನಿಸಿ:

ಈ ನೇಮಕಾತಿ ಕುರಿತು ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸ್ಪಷ್ಟೀಕರಣಕ್ಕಾಗಿ ಅಭ್ಯರ್ಥಿಗಳು ಕಚೇರಿ ವೇಳೆಯಲ್ಲಿ ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *