ದಾವಣಗೆರೆ: ಜಿಲ್ಲೆಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್. ಕಲ್ಪನಹಳ್ಳಿ ಗ್ರಾಮದ ಹೊರವಲಯದಲ್ಲಿ ಭೀಕರ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಗ್ರಾಮದ ಹೊರವಲಯದಲ್ಲಿರುವ ಶಿವಕುಮಾರ್ ಎಂಬುವವರಿಗೆ ಸೇರಿದ ಹಳೆಯ ಅಡಿಕೆ ಮಂಡಿ ಸುಲಿಯುವ ಗೋದಾಮಿನಲ್ಲಿ ಈ ಅವಘಡ ಸಂಭವಿಸಿದೆ.
ಮಧ್ಯಾಹ್ನ 2:20ಕ್ಕೆ ಸರಣಿ ಸ್ಫೋಟ:
ಈ ಹಳೆಯ ಗೋದಾಮಿನಲ್ಲಿ ಅನಿಲ್ ಎಂಬುವವರು ಗ್ಯಾಸ್ ಸಿಲಿಂಡರ್‌ಗಳನ್ನು ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ. ಇಂದು ಮಧ್ಯಾಹ್ನ ಸುಮಾರು 2 ಗಂಟೆ 20 ನಿಮಿಷದ ವೇಳೆಗೆ ಸಂಗ್ರಹಿಸಿಟ್ಟಿದ್ದ ಸಿಲಿಂಡರ್‌ಗಳು ಒಂದಕ್ಕೊಂದು ತಾಗಿ ದಿಢೀರ್ ಆಗಿ ಸ್ಫೋಟಗೊಂಡಿವೆ. ಸ್ಫೋಟದ ತೀವ್ರತೆಗೆ ಗೋದಾಮಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ನಿವಾಸಿಗಳು ಆತಂಕಗೊಂಡಿದ್ದರು. ಘಟನೆಯಲ್ಲಿ ಸಿಲಿಂಡರ್ ಸಂಗ್ರಹಿಸಿಟ್ಟಿದ್ದ ಅನಿಲ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು, ಅಗ್ನಿಶಾಮಕ ದಳ:
ವಿಷಯ ತಿಳಿಯುತ್ತಿದ್ದಂತೆಯೇ ದಾವಣಗೆರೆ ಗ್ರಾಮಾಂತರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ಜಂಟಿ ಕಾರ್ಯಾಚರಣೆ ನಡೆಸಿದರು. ಸತತ ಪ್ರಯತ್ನದ ಬಳಿಕ ಸದ್ಯ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತರಲಾಗಿದೆ. ಮುಂದೆ ಇಂತಹ ಯಾವುದೇ ಅಹಿತಕರ ಅಥವಾ ಅಪಾಯಕಾರಿ ಘಟನೆಗಳು ನಡೆಯಬಾರದು ಎಂದು ಮಾಲೀಕರಿಗೆ ಹಾಗೂ ಸಂಬಂಧಪಟ್ಟವರಿಗೆ ಸೂಕ್ತ ಎಚ್ಚರಿಕೆ ಮತ್ತು ಸೂಚನೆಗಳನ್ನು ನೀಡಲಾಗಿದೆ.
ಅಕ್ರಮ ಸಂಗ್ರಹ ಶಂಕೆ; ತನಿಖೆಗೆ ಇಳಿದ ಆಹಾರ ಇಲಾಖೆ: ಸ್ಫೋಟಗೊಂಡ ಸಿಲಿಂಡರ್‌ಗಳು ಯಾವ ಕಂಪನಿಗೆ ಸೇರಿದವು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಆದರೆ, ವಸತಿ ಪ್ರದೇಶದ ಬಳಿ ಇಷ್ಟೊಂದು ಪ್ರಮಾಣದಲ್ಲಿ ಗ್ಯಾಸ್ ಸಿಲಿಂಡರ್ ಸಂಗ್ರಹಿಸಿಡಲು ಅಧಿಕೃತ ದಾಖಲಾತಿಗಳು ಹಾಗೂ ಅನುಮತಿ ಪತ್ರಗಳನ್ನು ಪಡೆಯಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಗೋದಾಮಿನಲ್ಲಿ ಎಷ್ಟು ಸಿಲಿಂಡರ್‌ಗಳನ್ನು ಸಂಗ್ರಹಿಸಿಡಲಾಗಿತ್ತು ಎಂಬ ನಿಖರ ಮಾಹಿತಿ ಪಡೆಯಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದು, ಶೀಘ್ರದಲ್ಲೇ ಸಂಪೂರ್ಣ ವರದಿ ನೀಡುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್. ಟಿ. ಶೇಖರ್ ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ.
- arecanut godown fire
- cylinder blast today
- DAVANAGERE
- Davanagere cylinder explosion
- DAVANAGERE NEWS
- Davanagere rural police
- food and civil supplies department investigation
- gas cylinder blast
- H Kalpanahalli news
- Karnataka fire accident
- ಅಡಿಕೆ ಮಂಡಿ ಗೋದಾಮು
- ಆಹಾರ ಇಲಾಖೆ ತನಿಖೆ
- ಗ್ಯಾಸ್ ಸಿಲಿಂಡರ್ ಸ್ಫೋಟ
- ದಾವಣಗೆರೆ
- ದಾವಣಗೆರೆ ಗ್ರಾಮಾಂತರ ಪೊಲೀಸ್
- ದಾವಣಗೆರೆ ಸುದ್ದಿ
- ಬೆಂಕಿ ಅವಘಡ ದಾವಣಗೆರೆ
- ಸಿಲಿಂಡರ್ ಬ್ಲಾಸ್ಟ್
- ಹೆಚ್ ಕಲ್ಪನಹಳ್ಳಿ





Leave a comment