Home ಕ್ರೈಂ ನ್ಯೂಸ್ ಚಾಕು ಕಳುಹಿಸಿರುವ ಕಾಂಗ್ರೆಸ್ ಕೃತ್ಯವೇ ‘ದೀಪಾವಳಿ ಬಹುಮಾನ’, ಕಾಂಗ್ರೆಸ್‌ನ ದ್ವೇಷದ ರಾಜಕಾರಣಕ್ಕೆ ಬೆದರುವ ಜಾಯಮಾನ ನನ್ನದಲ್ಲ: ಛಲವಾದಿ ನಾರಾಯಣಸ್ವಾಮಿ ತಿರುಗೇಟು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಚಾಕು ಕಳುಹಿಸಿರುವ ಕಾಂಗ್ರೆಸ್ ಕೃತ್ಯವೇ ‘ದೀಪಾವಳಿ ಬಹುಮಾನ’, ಕಾಂಗ್ರೆಸ್‌ನ ದ್ವೇಷದ ರಾಜಕಾರಣಕ್ಕೆ ಬೆದರುವ ಜಾಯಮಾನ ನನ್ನದಲ್ಲ: ಛಲವಾದಿ ನಾರಾಯಣಸ್ವಾಮಿ ತಿರುಗೇಟು!

Share
ಛಲವಾದಿ ನಾರಾಯಣಸ್ವಾಮಿ
Share

ಬೆಂಗಳೂರು / ಮೈಸೂರು: ತಮ್ಮ ನಿವಾಸದ ಎದುರು ಪ್ರತಿಭಟನೆ ನಡೆಸುವ ನೆಪದಲ್ಲಿ ಬ್ಲಿಂಕಿಟ್ ಆ್ಯಪ್ ಮೂಲಕ ‘ಕ್ಯಾಶ್ ಆನ್ ಡೆಲಿವರಿ’ ರೂಪದಲ್ಲಿ ೨೦ಕ್ಕೂ ಹೆಚ್ಚು ಚಾಕು ಹಾಗೂ ಚೂರಿಗಳನ್ನು ಪಾರ್ಸಲ್ ಕಳುಹಿಸಿರುವ ಕಾಂಗ್ರೆಸ್ ಮತ್ತು ಎನ್‌ಎಸ್‌ಯುಐ ಕಾರ್ಯಕರ್ತರ ಕೀಳುಮಟ್ಟದ ದ್ವೇಷದ ರಾಜಕಾರಣಕ್ಕೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂತಹ ಹೇಡಿತನದ ಬೆದರಿಕೆಗಳಿಗೆ ತಾವು ಕಿಂಚಿತ್ತೂ ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮಗೆ ಧೈರ್ಯದಿಂದ ಬದುಕಲು ಮತ್ತು ಸತ್ಯವನ್ನು ಮಾತನಾಡಲು ಕಲಿಸಿಕೊಟ್ಟಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ದೀಪಾವಳಿ ಬಹುಮಾನ ಪ್ರದರ್ಶನ: ಕಿಡಿಗೇಡಿಗಳು ಕಳುಹಿಸಿರುವ ಈ ಚಾಕುಗಳನ್ನು ತಮ್ಮ ಮನೆಯ ಮುಂದೆಯೇ ಕಟ್ಟಿಹಾಕಿ, “ಇದು ದೀಪಾವಳಿ ಹಬ್ಬಕ್ಕೆ ಕಾಂಗ್ರೆಸ್ ನನಗೆ ಕಳುಹಿಸಿರುವ ಬಹುಮಾನ” ಎಂದು ಪ್ರದರ್ಶಿಸಿ ಅವರ ಹಿಂಸಾತ್ಮಕ ಸಂಸ್ಕೃತಿಯನ್ನು ರಾಜ್ಯದ ಜನತೆಗೆ ತಿಳಿಸುವುದಾಗಿ ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಒಡೆಯಲಿದೆ: ಈ ಹಿಂದೆ ತಾವು ನೀಡಿದ್ದ ‘ಕಾಂಗ್ರೆಸ್ ತುಂಡಾಗುತ್ತೆ’ ಎಂಬ ಹೇಳಿಕೆಯು ಸಂಪೂರ್ಣವಾಗಿ ರಾಜಕೀಯ ವಿಶ್ಲೇಷಣೆಯಾಗಿದ್ದು, ಇತಿಹಾಸದಲ್ಲಿ ದೇವರಾಜ ಅರಸು, ಬಂಗಾರಪ್ಪ, ಶರದ್ ಪವಾರ್ ಹಾಗೂ ಮಮತಾ ಬ್ಯಾನರ್ಜಿ ಅವರ ಕಾಲದಲ್ಲಿ ಕಾಂಗ್ರೆಸ್ ಇಬ್ಭಾಗವಾದಂತೆ ಸಿದ್ದರಾಮಯ್ಯನವರ ವಿಚಾರದಲ್ಲೂ ಅದು ಪುನರಾವರ್ತನೆಯಾಗಲಿದೆ ಎಂಬ ವಾಸ್ತವವನ್ನು ಮಾತ್ರ ಹೇಳಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ರಾಜಕೀಯ ಸಂಘರ್ಷ: ವಿಪಕ್ಷ ನಾಯಕರ ಮನೆಗೆ ಮಾರಕಾಸ್ತ್ರಗಳನ್ನು ಕಳುಹಿಸಿ ಬೆದರಿಕೆ ಹಾಕುತ್ತಿರುವ ಆಡಳಿತರೂಢ ಪಕ್ಷದ ನಡೆಗೆ ರಾಜ್ಯಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ.

ಇಂತಹ ಬೆದರಿಕೆಗಳಿಗೆ ತಲೆಬಾಗುವುದಿಲ್ಲ ಎಂದು ಎಚ್ಚರಿಸಿರುವ ಛಲವಾದಿ ನಾರಾಯಣಸ್ವಾಮಿ, ಪ್ರಜಾಪ್ರಭುತ್ವದಲ್ಲಿ ಇಂತಹ ಗೂಂಡಾವರ್ತನೆಗೆ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles