Home ದಾವಣಗೆರೆ ಆರ್‌ಎಸ್‌ಎಸ್‌ಗೆ ನೋಂದಣಿ ಅಗತ್ಯವಿಲ್ಲ ಏಕೆ? ಪ್ರಿಯಾಂಕ್ ಖರ್ಗೆಗೆ ಕೌಂಟರ್ ಕೊಟ್ಟ ಮೋಹನ್ ಭಾಗವತ್ ನೀಡಿದ ಸ್ಪಷ್ಟನೆ ಇಲ್ಲಿದೆ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಆರ್‌ಎಸ್‌ಎಸ್‌ಗೆ ನೋಂದಣಿ ಅಗತ್ಯವಿಲ್ಲ ಏಕೆ? ಪ್ರಿಯಾಂಕ್ ಖರ್ಗೆಗೆ ಕೌಂಟರ್ ಕೊಟ್ಟ ಮೋಹನ್ ಭಾಗವತ್ ನೀಡಿದ ಸ್ಪಷ್ಟನೆ ಇಲ್ಲಿದೆ!

Share
ಮೋಹನ್ ಭಾಗವತ್
Share

ಬೆಂಗಳೂರು/ಹೊಸದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾನೂನುಬದ್ಧ ಸ್ಥಿತಿ, ನೋಂದಣಿ, ಧನಸಹಾಯದ ಮೂಲಗಳು ಮತ್ತು ವೆಚ್ಚಗಳ ವಿವರಗಳನ್ನು ಬಹಿರಂಗಪಡಿಸುವಂತೆ ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದಾರೆ. ಆದರೆ, ಈ ಬೇಡಿಕೆಯನ್ನು ಮೋಹನ್ ಭಾಗವತ್ ಅವರು ‘ರಾಜಕೀಯ ಗಿಮಿಕ್’ ಎಂದು ತಳ್ಳಿಹಾಕಿದ್ದಾರೆ.

ಖರ್ಗೆ ಪತ್ರದಲ್ಲೇನಿದೆ?

ಮೋಹನ್ ಭಾಗವತ್ ಅವರಿಗೆ ಎರಡು ಪುಟಗಳ ಪತ್ರ ಬರೆದಿರುವ ಪ್ರಿಯಾಂಕ್ ಖರ್ಗೆ, “ಕರ್ನಾಟಕದಲ್ಲಿ ಆರ್‌ಎಸ್‌ಎಸ್ 60,000ಕ್ಕೂ ಹೆಚ್ಚು ಶಾಖೆಗಳು ಮತ್ತು ಸಂಯೋಜಿತ ಚಟುವಟಿಕೆಗಳೊಂದಿಗೆ ಬಲವಾದ ಅಸ್ತಿತ್ವವನ್ನು ಹೊಂದಿದೆ. ಇಷ್ಟು ದೊಡ್ಡ ಸಂಸ್ಥೆ ಕಾನೂನಿನ ಪರಿಶೀಲನೆಯಿಂದ ಹೊರಗುಳಿಯಲು ಸಾಧ್ಯವಿಲ್ಲ. ಸಂವಿಧಾನಾತ್ಮಕ ಪ್ರಜಾಪ್ರಭುತ್ವದಲ್ಲಿ ಯಾವುದೇ ಸಂಸ್ಥೆ ಕಾನೂನಿಗಿಂತ ಮಿಗಿಲಲ್ಲ” ಎಂದು ಪ್ರತಿಪಾದಿಸಿದ್ದಾರೆ.

ಕರ್ನಾಟಕದಲ್ಲಿ ಆರ್‌ಎಸ್‌ಎಸ್ 4,127 ದೈನಂದಿನ ಶಾಖೆಗಳು, 1,389 ವಾರಕ್ಕೊಮ್ಮೆ ನಡೆಯುವ ಮಿಲನ್ ಮತ್ತು 500ಕ್ಕೂ ಹೆಚ್ಚು ಪಥಸಂಚಲನಗಳನ್ನು ನಡೆಸುತ್ತಿದೆ ಎಂದು ಉಲ್ಲೇಖಿಸಿರುವ ಅವರು, ಸಂಸ್ಥೆಯ ಪದಾಧಿಕಾರಿಗಳ ವಿವರ, ದೇಣಿಗೆ ಮೂಲಗಳು, ಆಸ್ತಿ ಮತ್ತು ವೆಚ್ಚಗಳು ಹಾಗೂ ಸಂಸ್ಥೆಯು ತೆರಿಗೆ ಪಾವತಿಸುತ್ತಿದೆಯೇ ಎಂಬ ಬಗ್ಗೆ ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮೋಹನ್ ಭಾಗವತ್ ತಿರುಗೇಟು:

ಖರ್ಗೆ ಅವರ ಬೇಡಿಕೆಗೆ ಕೇರಳದ ಕಾರ್ಯಕ್ರಮವೊಂದರಲ್ಲಿ ಪ್ರತಿಕ್ರಿಯಿಸಿರುವ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, “ಇದೆಲ್ಲವೂ ಕೇವಲ ರಾಜಕೀಯ ತಂತ್ರಗಳು. ಆರ್‌ಎಸ್‌ಎಸ್‌ಗೆ ಯಾವುದೇ ಸರ್ಕಾರಿ ಅನುದಾನ ಸಿಗದ ಕಾರಣ ಅದಕ್ಕೆ ನೋಂದಣಿಯ ಅಗತ್ಯವಿಲ್ಲ. ಕಳೆದ 100 ವರ್ಷಗಳಿಂದ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಇದುವರೆಗೆ ಯಾರೂ ನೋಂದಣಿಗೆ ಒತ್ತಾಯಿಸಿಲ್ಲ. ಹಿಂದೂ ಧರ್ಮವೇ ನೋಂದಣಿಯಾಗಿಲ್ಲ, ದೇಶದಲ್ಲಿ ಇಂತಹ ಹಲವು ಸಂಸ್ಥೆಗಳು ನೋಂದಣಿ ಇಲ್ಲದೆ ಮುಕ್ತವಾಗಿ ಕಾರ್ಯನಿರ್ವಹಿಸುತ್ತಿವೆ” ಎಂದು ಹೇಳಿದ್ದಾರೆ.

ಸಾರ್ವಜನಿಕರಲ್ಲಿ ಗೊಂದಲ ಮೂಡಿಸಲು ಇಂತಹ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದ ಅವರು, 1960 ರ ದಶಕದಲ್ಲೇ ಆರ್‌ಎಸ್‌ಎಸ್ ತನ್ನ ಲಿಖಿತ ಸಂವಿಧಾನವನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಸರ್ಕಾರ ಅದನ್ನು ನೋಂದಣಿಗೆ ಒತ್ತಾಯಿಸದೆ ಅಂಗೀಕರಿಸಿತ್ತು ಎಂದು ನೆನಪಿಸಿದ್ದಾರೆ. ಆದಾಯ ತೆರಿಗೆ ಇಲಾಖೆ ಮತ್ತು ನ್ಯಾಯಾಲಯಗಳು ಆರ್‌ಎಸ್‌ಎಸ್ ಅನ್ನು ವ್ಯಕ್ತಿಗಳ ಸಂಘ ಎಂದು ಪರಿಗಣಿಸಿದ್ದು, ತೆರಿಗೆ ವಿನಾಯಿತಿ ನೀಡಿವೆ ಎಂದು ವರದಿಯಾಗಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles