ದಾವಣಗೆರೆ: ದಾವಣಗೆರೆಯಲ್ಲಿ ಹಿಂದೂ ಯುವತಿಯರು ಮತ್ತು ಮಹಿಳೆಯರನ್ನು ಟಾರ್ಗೆಟ್ ಮಾಡಿ ವಿಡಿಯೋ ಚಿತ್ರೀಕರಿಸಿ ಬೆದರಿಕೆ ಹಾಕಿ ಹಣ ವಸೂಲಿ ಮಾಡಿರುವ ನಿಟುವಳ್ಳಿಯ ದುರ್ಗಾಂಬಿಕಾ ಹೈಸ್ಕೂಲ್ ಸಮೀಪದ ಪವರ್ ಫಿಟ್ನೆಸ್ ಜಿಮ್ ಮಾಲೀಕ ಮತ್ತು ಟ್ರೈನರ್ ಇಸ್ಮಾಯಿಲ್ ನನ್ನು ಕೂಡಲೇ ಸಮಾಜದಿಂದ ಮುಸ್ಲಿಂ ಸಮುದಾಯದ ನಾಯಕರು ಹೊರಹಾಕಬೇಕು. ಇಸ್ಮಾಯಿಲ್ ನಂಥವನಿಂದ ಸಮಾಜದ ಸ್ವಾಸ್ಥ್ಯ, ಕೋಮು ಸಾಮರಸ್ಯ ಕದಡುವ ಭೀತಿ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ಎನ್. ನಾಗಪ್ಪ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪವರ್ ಫಿಟ್ನೆಸ್ ಜಿಮ್ ಬಳಿ ಪ್ರತಿಭಟನೆ ನಡೆಸಿ ಬೀಗ ಹಾಕಲಾಗಿದೆ. ಶ್ರೀರಾಮಸೇನೆ ಮತ್ತು ಹಿಂದೂ ಜಾಗರಣ ವೇದಿಕೆ ಜಂಟಿ ಕಾರ್ಯಾಚರಣೆ ನಡೆಸಿ ಜಿಮ್ ಜಿಹಾದ್ ಬೆಳಕಿಗೆ ತಂದಿವೆ. ದೂರು ಕೊಡದೇ ಬಂಧಿಸಲು ಸಾಧ್ಯವಿಲ್ಲ ಎಂಬುದಾಗಿ ಪೊಲೀಸರು ಹೇಳುತ್ತಾರೆ. ವಾಸ್ತವವಾಗಿ ಹಿಂದೂ ಮಹಿಳೆಯರು ಮತ್ತು ಯುವತಿಯರು ದೂರು ನೀಡಲು ಹಿಂಜರಿಯುತ್ತಾರೆ. ಇದಕ್ಕೆ ನಾನಾ ಕಾರಣಗಳಿವೆ. ಪೊಲೀಸರು ಸುಮೋಟೋ ಕೇಸ್ ದಾಖಲಿಸಿ ಇಸ್ಮಾಯಿಲ್ ನಂಥವರಿಗೆ ಕಾನೂನು ಪ್ರಕಾರ ತಕ್ಕ ಶಿಕ್ಷೆಯಾಗುವಂತೆ ಮಾಡಬೇಕು ಎಂದು ತಿಳಿಸಿದರು.
ಮುಖ್ಯಾಂಶಗಳು ಹೀಗಿವೆ:
ಪ್ರಕರಣದ ವಿವರ: ದಾವಣಗೆರೆಯ ನಿಟುವಳ್ಳಿಯ ದುರ್ಗಾಂಬಿಕಾ ಹೈಸ್ಕೂಲ್ ಸಮೀಪವಿರುವ ‘ಪವರ್ ಫಿಟ್ನೆಸ್ ಜಿಮ್’ ಮಾಲೀಕ ಮತ್ತು ಟ್ರೈನರ್ ಇಸ್ಮಾಯಿಲ್ ಎಂಬಾತ ಹಿಂದೂ ಯುವತಿಯರು ಹಾಗೂ ಮಹಿಳೆಯರ ವಿಡಿಯೋ ಚಿತ್ರೀಕರಿಸಿ, ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಬಿಜೆಪಿ ಆಗ್ರಹ: ಇಸ್ಮಾಯಿಲ್‌ನನ್ನು ಮುಸ್ಲಿಂ ಸಮುದಾಯದ ಮುಖಂಡರು ಸಮಾಜದಿಂದ ಹೊರಹಾಕಬೇಕು ಹಾಗೂ ಆತನಿಂದ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗುವ ಭೀತಿ ಇದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ಎನ್. ನಾಗಪ್ಪ ಒತ್ತಾಯಿಸಿದ್ದಾರೆ.
ಪ್ರತಿಭಟನೆ ಮತ್ತು ಕಾರ್ಯಾಚರಣೆ: ಶ್ರೀರಾಮಸೇನೆ ಮತ್ತು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಜಿಮ್ ಎದುರು ಪ್ರತಿಭಟನೆ ನಡೆಸಿ ಅದಕ್ಕೆ ಬೀಗ ಹಾಕಿದ್ದಾರೆ.
ಪೊಲೀಸ್ ಕಾನೂನು ಕ್ರಮಕ್ಕೆ ಆಗ್ರಹ: ಸಂತ್ರಸ್ತರು ದೂರು ನೀಡಲು ಹಿಂಜರಿಯುತ್ತಿರುವುದರಿಂದ, ಪೊಲೀಸರೇ ಸ್ವಯಂಪ್ರೇರಿತವಾಗಿ (ಸುಮೋಟೋ) ಪ್ರಕರಣ ದಾಖಲಿಸಿಕೊಂಡು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಸರ್ಕಾರದ ವಿರುದ್ಧ ಆಕ್ರೋಶ: ಕಾನೂನು ಸುವ್ಯವಸ್ಥೆ ಮತ್ತು ಗೃಹ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಕ್ಷಣೆ ಕೊಡಬೇಕಾದ ಪೊಲೀಸರು ಈ ಬಗ್ಗೆ ಗಮನ ಹರಿಸಲೇಬೇಕು. ಸರ್ಕಾರದ ಕಪಿಮುಷ್ಠಿಯಲ್ಲಿ ಪೊಲೀಸರು ಕೆಲಸ ನಿರ್ವಹಿಸಿದರೆ ಹೇಗೆ? ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗಬೇಕು. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕತ್ತೆ ಕಾಯುತ್ತಿದ್ದಾರಾ? ನೈತಿಕ ಪೊಲೀಸ್ ಗಿರಿಗೆ ಅವಕಾಶ ಇಲ್ಲ ಎಂದು ಹೇಳುತ್ತಾರೆ. ಪೊಲೀಸ್ ಗಿರಿ ಸರಿಯಾಗಿ ಮಾಡಿದರೆ ನೈತಿಕ ಪೊಲೀಸ್ ಗಿರಿ ಅವಶ್ಯಕತೆಯೇ ಬೀಳುವುದಿಲ್ಲ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಅನಂತ ನಾಯ್ಕ್, ಕೊಳೇನಹಳ್ಳಿ ಸತೀಶ್, ಧನಂಜಯ ಕಡ್ಲೇಬಾಳು, ವಿಶ್ವಾಸ್ ಹೆಚ್. ಪಿ. ಮತ್ತಿತರರು ಹಾಜರಿದ್ದರು.
- BJP leader Rajasekhar Nagappa
- Davanagere crime news
- Davanagere gym scandal
- Gym jihad allegations
- Hindu women blackmail case
- Ismail gym trainer blackmail
- Power fitness gym Davanagere
- Sri Ram Sene protest
- ಇಸ್ಮಾಯಿಲ್ ಜಿಮ್ ಟ್ರೈನರ್
- ಜಿಮ್ ಜಿಹಾದ್ ದಾವಣಗೆರೆ
- ದಾವಣಗೆರೆ ಜಿಮ್ ಪ್ರಕರಣ
- ದಾವಣಗೆರೆ ಸುದ್ದಿ
- ಪವರ್ ಫಿಟ್ನೆಸ್ ಜಿಮ್ ಬ್ಲ್ಯಾಕ್ಮೇಲ್
- ರಾಜಶೇಖರ್ ನಾಗಪ್ಪ ಬಿಜೆಪಿ
- ಶ್ರೀರಾಮಸೇನೆ ಪ್ರತಿಭಟನೆ
- ಹಿಂದೂ ಮಹಿಳೆಯರ ವಿಡಿಯೋ ಲೀಕ್ ಆರೋಪ





Leave a comment