ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರವನ್ನು ಉರುಳಿಸಲು ಬಿಜೆಪಿ ‘ಆಪರೇಷನ್ ಕಮಲ’ಕ್ಕೆ ಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಶನಿವಾರ ಗಂಭೀರ ಆರೋಪ ಮಾಡಿದ್ದಾರೆ.
ಶ್ರೀನಗರದಲ್ಲಿ ನಡೆದ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ನ್ಯಾಷನಲ್ ಕಾನ್ಫರೆನ್ಸ್ (NC) ಶಾಸಕರೊಬ್ಬರನ್ನು ಸೆಳೆಯಲು ಬಿಜೆಪಿ ನಾಯಕರೊಬ್ಬರು ಮತ್ತು ಸುಪ್ರೀಂ ಕೋರ್ಟ್ ವಕೀಲರು ₹20 ರಿಂದ ₹30 ಕೋಟಿ ಹಣ, ಸಚಿವ ಸ್ಥಾನ ಮತ್ತು ರಾಜ್ಯದ ಸ್ಥಾನಮಾನ ಮರಳಿ ಕೊಡುವ ಆಮಿಷ ಒಡ್ಡಿದ್ದರು ಎಂದು ತಿಳಿಸಿದ್ದಾರೆ.
ಆದರೆ, ಬಿಜೆಪಿಯ ಈ ಪ್ರಯತ್ನ ಸಂಪೂರ್ಣ ವಿಫಲವಾಗಿದೆ. ನಮ್ಮ ಒಬ್ಬನೇ ಒಂದು ಶಾಸಕನನ್ನು ಖರೀದಿಸಲು ಅವರಿಂದ ಸಾಧ್ಯವಾಗಿಲ್ಲ. ಒಂದು ವೇಳೆ ಪ್ರತಿ ಶಾಸಕರಿಗೆ 100 ಕೋಟಿ ರೂಪಾಯಿ ನೀಡಿದರೂ ಬಿಜೆಪಿ ಯಶಸ್ವಿಯಾಗುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸದ್ಯ 90 ಸದಸ್ಯರ ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಒಟ್ಟು 53 ಶಾಸಕರ ಬೆಂಬಲದೊಂದಿಗೆ ಅಬ್ದುಲ್ಲಾ ಸರ್ಕಾರ ಸುಭದ್ರವಾಗಿದೆ.
ರಾಜ್ಯದ ಸ್ಥಾನಮಾನ ವಿಳಂಬಕ್ಕೆ ಆಕ್ರೋಶ:
ಇದೇ ವೇಳೆ ಜಮ್ಮು ಮತ್ತು ಕಾಶ್ಮೀರಕ್ಕೆ ಮರಳಿ ರಾಜ್ಯದ ಸ್ಥಾನಮಾನ ನೀಡಲು ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಓಮರ್ ಅಬ್ದುಲ್ಲಾ ವಾಗ್ದಾಳಿ ನಡೆಸಿದರು. “ನನ್ನ ತಾಳ್ಮೆಯನ್ನು ದೌರ್ಬಲ್ಯ ಎಂದು ಭಾವಿಸಬೇಡಿ. ‘ಸೂಕ್ತ ಸಮಯ’ ಎಂದರೆ ಯಾವುದು ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು” ಎಂದು ಒತ್ತಾಯಿಸಿದರು.
ಈ ಹಕ್ಕಿಗಾಗಿ ಜುಲೈ 20 ರಂದು ನವದೆಹಲಿಯಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಜಮ್ಮು-ಕಾಶ್ಮೀರದ ಎಲ್ಲಾ ರಾಜಕೀಯ ಪಕ್ಷಗಳಿಗೆ ಸಿಎಂ ಕರೆ ನೀಡಿದ್ದಾರೆ.
- BJP bribery charge
- Delhi protest July 20
- J&K statehood protest
- Jammu and Kashmir political crisis
- Jammu Kashmir Assembly
- Kashmir statehood demand
- National Conference MLA poaching
- Omar Abdullah
- Omar Abdullah Kannada News
- Omar Abdullah security
- Operation Lotus
- Operation Lotus JK
- Sunil Bhat Srinagar
- ಆಪರೇಷನ್ ಕಮಲ
- ಓಮರ್ ಅಬ್ದುಲ್ಲಾ
- ಕಾಶ್ಮೀರ ರಾಜ್ಯದ ಸ್ಥಾನಮಾನ
- ಜಮ್ಮು ಮತ್ತು ಕಾಶ್ಮೀರ
- ಜುಲೈ 20 ಪ್ರತಿಭಟನೆ
- ದೆಹಲಿ ಪ್ರತಿಭಟನೆ
- ನ್ಯಾಷನಲ್ ಕಾನ್ಫರೆನ್ಸ್
- ಬಿಜೆಪಿ ಆಪರೇಷನ್ ಕಮಲ





Leave a comment