Home ದಾವಣಗೆರೆ ಮುಂದಿನ ಜನ್ಮದಲ್ಲಿ ಕನ್ನಡಿಗನಾಗ್ತೀನಿ ಅಂದಿದ್ರು SPB: ಕನ್ನಡ ಮಣ್ಣಲ್ಲೇ ಲೀನವಾಗಲು ಬಯಸಿದ ಗಾನಕೋಗಿಲೆ ಎಸ್‌ ಜಾನಕಿ! ಯಾಕೆ ಗೊತ್ತಾ?
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

ಮುಂದಿನ ಜನ್ಮದಲ್ಲಿ ಕನ್ನಡಿಗನಾಗ್ತೀನಿ ಅಂದಿದ್ರು SPB: ಕನ್ನಡ ಮಣ್ಣಲ್ಲೇ ಲೀನವಾಗಲು ಬಯಸಿದ ಗಾನಕೋಗಿಲೆ ಎಸ್‌ ಜಾನಕಿ! ಯಾಕೆ ಗೊತ್ತಾ?

Share
ಕನ್ನಡ
Share

ಬೆಂಗಳೂರು: ಭಾರತೀಯ ಚಿತ್ರಲೋಕ ಕಂಡ ಗಾನ ಗಾರುಡಿಗ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರು “ನನಗೆ ಮುಂದಿನ ಜನ್ಮ ಅಂತೇನಾದರೂ ಇದ್ದರೆ ನಾನು ಕನ್ನಡಿಗನಾಗಿ ಹುಟ್ಟಬೇಕು” ಎಂದು ಹಲವು ವೇದಿಕೆಗಳಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಕನ್ನಡಿಗರು ತಮ್ಮ ಮೇಲೆ ತೋರಿದ ಅಪಾರ ಪ್ರೀತಿ, ವಿಶ್ವಾಸ ಮತ್ತು ಸಹೃದಯತೆಗೆ ಮನಸೋತು ಅವರು ಈ ಮಾತಾಡಿದ್ದರು. ಈಗ ಅದೇ ಹಾದಿಯಲ್ಲಿ ನಡೆದಿರುವ ಭಾರತೀಯ ಚಿತ್ರರಂಗದ ಮತ್ತೊಂದು ಗಾನ ಕೋಗಿಲೆ ಎಸ್. ಜಾನಕಮ್ಮ ಅವರು, ತಾವು ಕೊನೆಯುಸಿರೆಳೆದ ಮೇಲೆ ಕನ್ನಡ ನೆಲದಲ್ಲೇ ಮಣ್ಣಾಗಬೇಕೆಂಬ ಅಪರೂಪದ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಹೌದು, ಮೂಲತಃ ಆಂಧ್ರಪ್ರದೇಶದವರಾಗಿದ್ದರೂ ಎಸ್. ಜಾನಕಿ ಅವರಿಗೆ ಕರ್ನಾಟಕ ಮತ್ತು ಕನ್ನಡ ಭಾಷೆ ಎಂದರೆ ಪಂಚಪ್ರಾಣ. ಇದೀಗ ಅವರು ತಮ್ಮ ಅಂತ್ಯಕ್ರಿಯೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೇ ನೆರವೇರಬೇಕು ಎಂಬ ಇಚ್ಛೆಯನ್ನು ಹೊರಹಾಕಿದ್ದಾರೆ.

ಮೈಸೂರಿನಲ್ಲೇ ಜಾಗ ಗುರುತಿಸಿದ ಜಾನಕಮ್ಮ!

ಈ ಭಾವುಕ ವಿಚಾರವನ್ನು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಖಚಿತಪಡಿಸಿದ್ದಾರೆ. ಇತ್ತೀಚೆಗೆ ಎಸ್. ಜಾನಕಮ್ಮ ಅವರ ಕುಟುಂಬದವರೊಂದಿಗೆ ಮಾತನಾಡಿದ ಬಳಿಕ ಈ ವಿಷಯವನ್ನು ಹಂಚಿಕೊಂಡಿರುವ ಅವರು, “ಜಾನಕಮ್ಮ ಅವರ ಅಂತ್ಯಕ್ರಿಯೆ ಮೈಸೂರಿನಲ್ಲಿಯೇ ನೆರವೇರಬೇಕೆಂದು ಅವರ ಕುಟುಂಬಸ್ಥರು ಬಯಸಿದ್ದಾರೆ. ಅದಕ್ಕಾಗಿ ಸ್ವತಃ ಜಾನಕಮ್ಮ ಅವರೇ ಮೈಸೂರಿನಲ್ಲಿ ಜಾಗವೊಂದನ್ನು ಗುರುತಿಸಿ ತೋರಿಸಿದ್ದರು. ಅವರ ಆಸೆಯಂತೆಯೇ ಅದೇ ಜಾಗದಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ಕನ್ನಡಿಗರ ಮೇಲಿನ ಅಪಾರ ಪ್ರೀತಿ

ಎಸ್. ಜಾನಕಿ ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಜಪಾನಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಬರೋಬ್ಬರಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅದರಲ್ಲಿಯೂ ಕನ್ನಡ ಚಿತ್ರರಂಗ ಹಾಗೂ ಕನ್ನಡಿಗರೊಂದಿಗೆ ಅವರಿಗಿದ್ದ ಒಡನಾಟ ಅತ್ಯಂತ ವಿಶಿಷ್ಟವಾದದ್ದು. ತಾವು ಹುಟ್ಟಿ ಬೆಳೆದ ನಾಡಲ್ಲದಿದ್ದರೂ, ಬದುಕಿನುದ್ದಕ್ಕೂ ತಮಗೆ ತಾಯಿಯಂತೆ ಪ್ರೀತಿ ನೀಡಿದ ಕನ್ನಡ ನೆಲದಲ್ಲೇ ಲೀನವಾಗಬೇಕು ಎಂದು ಜಾನಕಮ್ಮ ಬಯಸಿರುವುದು, ಕನ್ನಡಿಗರ ಮೇಲಿನ ಅವರ ಪರಮೋಚ್ಚ ಗೌರವ ಹಾಗೂ ಅಕ್ಕರೆಯನ್ನು ಎತ್ತಿ ತೋರಿಸುತ್ತದೆ.

Share

Leave a comment

Leave a Reply

Your email address will not be published. Required fields are marked *

Related Articles