Home ದಾವಣಗೆರೆ ದಾವಣಗೆರೆ ಲೋಕ್ ಅದಾಲತ್ ನಲ್ಲಿ ಮತ್ತೆ ಒಂದಾದ ದಂಪತಿಗಳು: ಕಹಿ ಮರೆತು ಸಂಸಾರ ನಡೆಸಲು ಒಪ್ಪಿದ ಜೋಡಿಗಳು!
ದಾವಣಗೆರೆನವದೆಹಲಿಬೆಂಗಳೂರು

ದಾವಣಗೆರೆ ಲೋಕ್ ಅದಾಲತ್ ನಲ್ಲಿ ಮತ್ತೆ ಒಂದಾದ ದಂಪತಿಗಳು: ಕಹಿ ಮರೆತು ಸಂಸಾರ ನಡೆಸಲು ಒಪ್ಪಿದ ಜೋಡಿಗಳು!

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ಜಿಲ್ಲೆಯ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಒಟ್ಟು ಪ್ರಕರಣಗಳ ಪೈಕಿ ಶನಿವಾರ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಒಟ್ಟು 5792 ಪ್ರಕರಣಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲಾಗಿದೆ ಹಾಗೂ ರೂ. 13,18,76,346 ಗಳನ್ನು ಪರಿಹಾರ ಮೊತ್ತವಾಗಿ ಪಾವತಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ವೇಲಾ ಡಿ.ಕೆ ಅವರು ತಿಳಿಸಿದ್ದಾರೆ.

ನ್ಯಾಯಾಧೀಶರು ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಮೊದಲ ಲೋಕ್ ಅದಾಲತ್ ಇದಾಗಿದ್ದು, ಕೇವಲ ಒಂದು ತಿಂಗಳು ಹತ್ತು ದಿನಗಳ ಅವಧಿಯಲ್ಲಿ ನ್ಯಾಯಾಧೀಶರುಗಳ ಸಕಾರಾತ್ಮಕ ಶ್ರಮದಿಂದಾಗಿ ಈ ಯಶಸ್ಸು ಸಾಧ್ಯವಾಗಿದೆ.

ಕೌಟುಂಬಿಕ ನ್ಯಾಯಾಲಯದಲ್ಲಿದ್ದ ವಿವಾದಗಳಿಗೆ ಸಂಬಂಧಿಸಿದಂತೆ ಒಟ್ಟು 7 ದಂಪತಿಗಳು ರಾಜಿ ಮಾಡಿಕೊಂಡು ಒಟ್ಟಿಗೆ ಬಾಳಲು ಒಪ್ಪಿದ್ದಾರೆ. (ದಾವಣಗೆರೆ-6, ಹೊನ್ನಾಳಿ-1) ಹಿರಿಯ ನಾಗರಿಕರಿಗೆ ಸಂಬಂಧಿಸಿದ 37 ಪ್ರಕರಣಗಳು ಯಶಸ್ವಿಯಾಗಿ ಇತ್ಯರ್ಥಗೊಂಡಿವೆ. ದೀರ್ಘಕಾಲದ ಪ್ರಕರಣಗಳಲ್ಲಿ 10 ವರ್ಷ ಹಳೆಯದಾದ 2 ಪ್ರಕರಣ ಹಾಗೂ 7 ವರ್ಷ ಹಳೆಯದಾದ 1 ಪ್ರಕರಣಗಳು ಹಾಗೂ 5 ವರ್ಷ ಹಳೆಯದಾದ 14 ಪ್ರಕರಣಗಳು ಇತ್ಯರ್ಥಗೊಂಡಿವೆ.

ಜಿಲ್ಲೆಯಾದ್ಯಂತ ನ್ಯಾಯಾಲಯಗಳಲ್ಲಿ ಒಟ್ಟು 44,105 ಬಾಕಿ ಪ್ರಕರಣಗಳಿದ್ದು, 11,560 ಲೋಕ್ ಅದಾಲತ್ಗೆ ಗುರುತಿಸಲಾದ ಪ್ರಕರಣಗಳ ಸಂಖ್ಯೆ ಗಳಲ್ಲಿ ಸೌಹಾರ್ದಯುತವಾಗಿ ಇತ್ಯರ್ಥಗೊಂಡ ಪ್ರಕರಣಗಳ ಸಂಖ್ಯೆ 5,792 ಗಳಾಗಿದ್ದವು.

ನ್ಯಾಯಾಲಯದ ಮೆಟ್ಟಿಲೇರುವ ಮುನ್ನವೇ ಬಗೆಹರಿಸಬಹುದಾದ ಒಟ್ಟು 1,67,121 ವ್ಯಾಜ್ಯ ಪೂರ್ವ ಪ್ರಕರಣಗಳ ಪೈಕಿ 1,58,415 ಪ್ರಕರಣಗಳನ್ನು ಸಂಧಾನದ ಮೂಲಕ ಬಗೆಹರಿಸಲಾಗಿದೆ. ಇವುಗಳಲ್ಲಿ ಒಟ್ಟು ರೂ. 83,24,35,529.00 ಗಳ ಮೊತ್ತವನ್ನು ಪರಿಹಾರ ಮತ್ತು ರಾಜಿ/ಇತ್ಯರ್ಥದ ಮೂಲಕ ಪಾವತಿಸಲಾಗಿದೆ.

ಈ ಬಾರಿಯ ಲೋಕ್ ಅದಾಲತ್ನಲ್ಲಿ ಸಿವಿಲ್ ಪ್ರಕರಣಗಳು, ಕೌಟುಂಬಿಕ ಕಲಹಗಳು, ಬ್ಯಾಂಕ್ ವ್ಯವಹಾರಗಳು, ರಾಜಿ ಮಾಡಿಕೊಳ್ಳಬಹುದಾದ ಅಪರಾಧ ಪ್ರಕರಣಗಳು (Compoundable Cases), ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು , ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಪ್ರಕರಣಗಳು, ಜಾರಿ ಪ್ರಕರಣಗಳು ಹಾಗೂ ಭೂಸ್ವಾಧೀನ ಪ್ರಕರಣಗಳನ್ನು ಪರಿಗಣನೆಗೆ ತೆಗೆದುಕೊಂಡು ಇತ್ಯರ್ಥಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವೇಲಾ ಡಿ.ಕೆ ಅವರು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles