ದಾವಣಗೆರೆ: ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿರುವುದನ್ನು ದಾವಣಗೆರೆ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಯೂಬ್ ಪೈಲ್ವಾನ್ ಸ್ವಾಗತಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಜಬ್ಬಾರ್ ಅವರು, ಪಕ್ಷವು ಅಧಿಕೃತ ಅಭ್ಯರ್ಥಿಯನ್ನು ಘೋಷಿಸಿದ ನಂತರವೂ ಅವರ ಪರವಾಗಿ ಕೆಲಸ ಮಾಡದೆ ತಟಸ್ಥರಾಗಿದ್ದರು. ಅಲ್ಪಸಂಖ್ಯಾತ ಘಟಕದ ಪ್ರಮುಖ ಹುದ್ದೆಯಲ್ಲಿದ್ದರೂ ಪ್ರಚಾರಕ್ಕೆ ಬಾರದಿರುವುದು ಮತ್ತು “ತಮಗೆ ಆಹ್ವಾನವಿಲ್ಲ” ಎಂಬ ನೆಪವೊಡ್ಡಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.
ಪ್ರಮುಖ ಆರೋಪಗಳು:
ಪಕ್ಷ ವಿರೋಧಿ ಚಟುವಟಿಕೆ:
ಚುನಾವಣಾ ಪ್ರಚಾರದಿಂದ ದೂರ ಉಳಿದದ್ದು ಮತ್ತು ಪದಾಧಿಕಾರಿಗಳ ಸಭೆಗೆ ಗೈರಾದದ್ದು.
ಗೊಂದಲ ಸೃಷ್ಟಿ:
ಅಲ್ಪಸಂಖ್ಯಾತ ಸಮುದಾಯದ ಹೆಸರಿನಲ್ಲಿ ಸಭೆ ಕರೆದು ಟಿಕೆಟ್ ವಿಚಾರವಾಗಿ ಗೊಂದಲ ಮೂಡಿಸಿದ್ದು.
ನಾಯಕತ್ವದ ನಿರ್ಲಕ್ಷ್ಯ:
ಜಿಲ್ಲೆಯ ಪ್ರಭಾವಿ ನಾಯಕರಾದ ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಅವರೊಂದಿಗೆ ಚರ್ಚಿಸದೆ ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡಿದ್ದು. ಶಾಮನೂರು ಕುಟುಂಬವು ಜಬ್ಬಾರ್ ಅವರಿಗೆ ಮೂರು ಬಾರಿ ಜಿಲ್ಲಾಧ್ಯಕ್ಷ ಸ್ಥಾನ ಹಾಗೂ ಎಂಎಲ್ ಸಿ ಸ್ಥಾನವನ್ನು ನೀಡುವ ಮೂಲಕ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿದೆ. ಆದರೂ ಪಕ್ಷದ ಶಿಸ್ತು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಹೈಕಮಾಂಡ್ ತೆಗೆದುಕೊಂಡಿರುವ ಈ ಕಠಿಣ ನಿರ್ಧಾರ ಪಕ್ಷದ ಹಿತದೃಷ್ಟಿಯಿಂದ ಸರಿ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ಅಬ್ದುಲ್ ಜಬ್ಬಾರ್ ಅವರ ಹಿಂಬಾಲಕರಾದ ಸಿರಾಜ್ ಅಹ್ಮದ್, ಘನಿತಾಹೀರ್, ಎಂ.ಟಿ.ಸುಭಾಶ್ಚಂದ್ರ ಅವರು ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿದರೆ? ಕೇವಲ ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡಿದರೆ ವಿನಃ ಪಕ್ಷದ ಪರವಾಗಿ ಕೆಲಸ ಮಾಡಲಿಲ್ಲ. ಇದನ್ನು ಗಮನಿಸಿದ ಕಾಂಗ್ರೆಸ್ ಹೈಕಮಾಂಡ್ ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿದೆ. ಅಲ್ಲದೇ ಚುನಾವಣೆ ಘೋಷಣೆಗೂ ಮುನ್ನ ಎಸ್ ಐ ಆರ್ (ಮತದಾರರ ಪಟ್ಟಿ) ವಿರೋಧಿಸಲು ಪಕ್ಷಾತೀತವಾಗಿ ಅಲ್ಪಸಂಖ್ಯಾತರ ಸಭೆಯನ್ನು ಕರೆದಿದ್ದು ಅದರಲ್ಲಿ ನಾನು ಸಹ ಭಾಗವಹಿಸಿದ್ದೆ. ಆದರೆ ಈ ಸಭೆಯಲ್ಲಿ ಮುಖ್ಯ ವಿಷಯದ ಚರ್ಚೆ ಬಿಟ್ಟು ನಮ್ಮ ವಿರೋಧ ಪಕ್ಷಗಳ ನಾಯಕರು ತಮ್ಮ ಪಕ್ಷಕ್ಕೆ ಸಂಬಂಧಪಡದಿದ್ದರೂ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕೆಂದು ಚರ್ಚಿಸಿದರು. ಕರೆದಿರುವ ಸಭೆಗೂ ಚರ್ಚಿಸಿದ ವಿಷಯಕ್ಕೂ ಸಂಬಂಧನೇ ಇರಲಿಲ್ಲ. ಆ ಸಭೆಯಿಂದ ಪ್ರಾರಂಭವಾದ ಈ ಟಿಕೆಟ್ ಗೊಂದಲದ ವಾತಾವರಣ ಅಬ್ದುಲ್ ಜಬ್ಬಾರ್ ಹಿಂಬಾಲಕರು ಸೃಷ್ಟಿಸಿದರು ಎಂದು ದೂರಿದರು.
ಅಲ್ಪಸಂಖ್ಯಾತರಿಗೆ ಟಿಕೆಟ್ ಬೇಕು ಎನ್ನುವ ಬಗ್ಗೆ ಆಕಾಂಕ್ಷಿ ಆಗಿದ್ದ ಜಬ್ಬಾರ್ ಅವರು ದಾವಣಗೆರೆ ಜಿಲ್ಲೆಯ ಮುಖಂಡರಾದ ಎಸ್.ಎಸ್.ಮಲ್ಲಿಕಾರ್ಜುನ್ ಬಳಿಯಾಗಲೀ, ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಬಳಿಯಾಗಲೀ ಒಮ್ಮೆಯಾದರೂ ಚರ್ಚಿಸಲಿಲ್ಲ
ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಮುಸ್ಲಿಂ ಮುಖಂಡರು ಹಾಜರಿದ್ದರು.
- Abdul Jabbar Expelled
- Anti-party activities
- Ayub Pailwan
- Davanagere Congress News
- Davanagere Muslim Leaders.
- Davanagere South Byelection
- Karnataka Politics
- MLC Abdul Jabbar
- Shamanur Shivashankarappa
- SS Mallikarjun
- ಅಬ್ದುಲ್ ಜಬ್ಬಾರ್ ಉಚ್ಚಾಟನೆ
- ಅಯೂಬ್ ಪೈಲ್ವಾನ್
- ಅಲ್ಪಸಂಖ್ಯಾತ ನಾಯಕರ ಸಭೆ
- ಕರ್ನಾಟಕ ರಾಜಕೀಯ
- ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ
- ದಾವಣಗೆರೆ ಕಾಂಗ್ರೆಸ್ ಸುದ್ದಿ
- ದಾವಣಗೆರೆ ಜಿಲ್ಲಾ ಕಾಂಗ್ರೆಸ್
- ದಾವಣಗೆರೆ ದಕ್ಷಿಣ ಉಪಚುನಾವಣೆ
- ಪಕ್ಷ ವಿರೋಧಿ ಚಟುವಟಿಕೆ
- ಶಾಮನೂರು ಶಿವಶಂಕರಪ್ಪ






Leave a comment