Home ದಾವಣಗೆರೆ ದಾವಣಗೆರೆ ಬೈ ಎಲೆಕ್ಷನ್ ಉಳಿದಿರುವುದು ಎರಡೇ ಸುತ್ತು: ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು 5930 ಮತಗಳ ಮುನ್ನಡೆ, ಕುತೂಹಲ ಮೂಡಿಸಿದೆ ಫಲಿತಾಂಶ!
ದಾವಣಗೆರೆಬೆಂಗಳೂರು

ದಾವಣಗೆರೆ ಬೈ ಎಲೆಕ್ಷನ್ ಉಳಿದಿರುವುದು ಎರಡೇ ಸುತ್ತು: ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು 5930 ಮತಗಳ ಮುನ್ನಡೆ, ಕುತೂಹಲ ಮೂಡಿಸಿದೆ ಫಲಿತಾಂಶ!

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ 19ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು 5930 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

18ನೇ ಸುತ್ತಿನಲ್ಲಿ ಸಮರ್ಥ್ ಶಾಮನೂರು ಅವರು 5763 ಮತಗಳ ಮುನ್ನಡೆ ಸಾಧಿಸಿದ್ದರು. ಆದರೆ 19ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡ ಬಳಿಕ 5930 ಮತಗಳಿಂದ ಲೀಡ್ ಪಡೆದಿದ್ದಾರೆ. ತೀವ್ರ ಪೈಪೋಟಿ ನೀಡುತ್ತಿರುವ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರು, ಉತ್ತಮ ಮತಗಳನ್ನು ಪಡೆಯುತ್ತಿದ್ದಾರೆ. ಎಸ್ ಡಿಪಿಐ ಅಪ್ಸರ್ ಕೊಡ್ಲಿಬೆಟ್ಟು ಸುಮಾರು 18 ಸಾವಿರ ಮತಗಳ ಸನಿಹದಲ್ಲಿ ಇದ್ದಾರೆ.

ಎಂಟನೇ ಸುತ್ತಿನ ಬಳಿಕ ಮುನ್ನಡೆ ಹೊಂದಿದ್ದ ಸಮರ್ಥ್ ಶಾಮನೂರು ಅವರು 19ನೇ ಸುತ್ತಿನವರೆಗೂ ಮುನ್ನಡೆ ಕಾಯ್ದುಕೊಂಡಿದ್ದು, ಆರಂಭದ ಏಳು ಸುತ್ತುಗಳಲ್ಲಿ ಭಾರೀ ಮುನ್ನಡೆ ಹೊಂದಿದ್ದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರು ಆ ನಂತರ ಹಿನ್ನೆಡೆ ಅನುಭವಿಸಲು ಶುರುವಾಯ್ತು. ಅಲ್ಲಿಂದ ಇಲ್ಲಿಯವರೆಗೆ ಕಾಂಗ್ರೆಸ್ ಮುನ್ನಡೆಯಲ್ಲಿದ್ದು, ರೋಚಕ ಘಟ್ಟದತ್ತ ಫಲಿತಾಂಶ ಹೊರಳಿದ್ದು, ಇನ್ನು ಎರಡು ಸುತ್ತು ಮತ ಎಣಿಕೆ ಇದ್ದು, ಕಾಂಗ್ರೆಸ್ ಗೆಲ್ಲುತ್ತದೆಯೋ ಕೊನೆ ಕ್ಷಣದಲ್ಲಿ ಬಿಜೆಪಿ ಎಲ್ಲಾ ಮತಗಳನ್ನು ಪಡೆದು ಗೆಲ್ಲುತ್ತದೆಯೋ ಎಂಬ ಕುತೂಹಲ ಮನೆ ಮಾಡಿದೆ.

Share

Leave a comment

Leave a Reply

Your email address will not be published. Required fields are marked *