SUDDIKSHANA KANNADA NEWS/ DAVANAGERE/ DATE:24-10-2023
ದಾವಣಗೆರೆ (Davanagere): ವಿಶ್ವ ಹಿಂದೂ ಪರಿಷದ್ ಮತ್ತು ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಆಶ್ರಯದಲ್ಲಿ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ ಬೃಹತ್ ಶೋಭಯಾತ್ರೆ ಸಡಗರ, ಸಂಭ್ರಮದಿಂದ ನೆರವೇರಿತು.
Read Also This Story:
ದಸರಾದಲ್ಲಿ ಚಿನ್ನ (Gold) ಖರೀದಿಗೆ ಗ್ರಾಹಕರು ಒಲವು ತೋರುವುದೇಕೆ..? ಹೂಡಿಕೆ ಮಾಡಲು ಇರುವ ಉತ್ತಮ ಮಾರ್ಗ ಯಾವುದು? ಡಿಜಿಟಲ್ ಗೋಲ್ಡ್ ಎಂದರೇನು…?
ದಾವಣಗೆರೆ ನಗರದ ಶ್ರೀ ವೆಂಕಟೇಶ್ವರ ದೇವಸ್ಥಾನದಿಂದ ಶುರುವಾದ ಶೋಭಯಾತ್ರೆಗೆ ಬಿಜೆಪಿ ನಾಯಕರು ಹಾಗೂ ವಿಹೆಚ್ ಪಿ ಪ್ರಮುಖರು ಚಾಲನೆ ನೀಡಿದರು. ಶ್ರೀ ಜಡೇಸಿದ್ದೇಶ್ವರ ಶಿವಯೋಗೀಶ್ವರ ಮಠದ ಶ್ರೀ ಶಿವಾನಂದ ಮಹಾಸ್ವಾಮೀಜಿ ಅವರು ಶೋಭಯಾತ್ರೆ ಉದ್ಘಾಟನೆ ನೆರವೇರಿಸಿ ಶುಭ ಕೋರಿದರು. ಈ ವೇಳೆ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ. ಹೆಚ್. ಶಿವಯೋಗಿಸ್ವಾಮಿ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಾಜಿ ಶಾಸಕರು ಎಂ. ಪಿ. ರೇಣುಕಾಚಾರ್ಯ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಧನುಷ್ ಮತ್ತಿತರರು ಹಾಜರಿದ್ದರು.
ಬಂಬೂಬಜಾರ್, ಚೌಕಿ ಪೇಟೆ. ದುರ್ಗಾಂಬಿಕಾ ದೇವಸ್ಥಾನ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಬೃಹತ್ ಶೋಭಾಯಾತ್ರೆ ವಿಜೃಂಭಣೆ ಯಿಂದ ಸಾವಿರಾರು ಜನರು ಸಂಭ್ರಮದಿಂದ ಪಾಲ್ಗೊಂಡರು. ನಗರದ ಶ್ರೀ ವೆಂಕಟೇಶ್ವರ ವೃತ್ತದಲ್ಲಿ ಯಾತ್ರೆಗೆ ಪ್ರಮುಖ ಗಣ್ಯರು, ಮಾಜಿ ಶಾಸಕರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಭಾರತ ಮಾತೆ, ಶ್ರೀ ಚಾಮುಂಡೇಶ್ವರಿ , ಶ್ರೀ ದುರ್ಗಾಂಬಿಕಾ ದೇವಿ, ವಿವೇಕಾನಂದ, ಛತ್ರಪತಿ ಶಿವಾಜಿ ಮಹಾರಾಜ್ ಸೇರಿಂದೆತ ಮಹಾನ್ ಸಂತರ ಸ್ತಬ್ಧ ಚಿತ್ರಗಳು, ನಂದಿಕೋಲು, ಡೊಳ್ಳು ಮೆರವಣಿಗೆಗೆ ರಂಗು ತಂದಿತು.
ಇನ್ನು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಬರುತ್ತಿದ್ದಂತೆ ಕಾರ್ಯಕರ್ತರು ಹುಚ್ಚೆದ್ದು ಕುಣಿದರು. ರೇಣುಕಾಚಾರ್ಯರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿ ಬಿದ್ದರು. ಈ ವೇಳೆ ಬಿಜೆಪಿಯಿಂದ ಉಚ್ಚಾಟನೆಗೊಳಗಾಗಿರುವ ಮಾಜಿ ಶಾಸಕ ಗುರುಸಿದ್ದನಗೌಡರ ಪುತ್ರನ ಜೊತೆ ರೇಣುಕಾಚಾರ್ಯ ಖುಷಿ ಖುಷಿಯಾಗಿ ಮಾತನಾಡಿದರು. ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ಶಿವಯೋಗಿ ಸ್ವಾಮಿ ಜೊತೆ ಖುಷಿಖುಷಿಯಾಗಿಯೇ ಇದ್ದ ರೇಣುಕಾಚಾರ್ಯ, ಸಿದ್ದೇಶ್ವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಜಿಲ್ಲಾ ಬಿಜೆಪಿ ಮೌನ ವಹಿಸಿರುವುದು ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗುವಂತೆ ಮಾಡಿದೆ.
ಇನ್ನು ಸಂಸದ ಜಿ. ಎಂ. ಸಿದ್ದೇಶ್ವರ ಅವರು ಶೋಭಯಾತ್ರೆಯಲ್ಲಿ ಪಾಲ್ಗೊಳ್ಳಲ್ಲದೇ ಇರುವುದನ್ನು ನೋಡಿದರೆ ದಾವಣಗೆರೆ ಜಿಲ್ಲಾ ಬಿಜೆಪಿ ಘಟಕದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಈ ಮೂಲಕ ಸಾಬೀತಾಗಿದೆ.