ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere: ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ದಾವಣಗೆರೆಯ ಯುಸುಫ್ ಫಸ್ಟ್: 31ನೇ ವಾರ್ಡ್ ನ ಜನರಿಂದ ಐ. ಬಿ. ಯುಸುಫ್‌ಗೆ ಅದ್ದೂರಿ ಸನ್ಮಾನ

On: October 24, 2023 2:51 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:24-10-2023

ದಾವಣಗೆರೆ (Davanagere): ನಂದಿ ಟ್ರಸ್ಟ್, ಚಿಕ್ಕಮಗಳೂರು ಅಂಡರ್ ಐಬಿಬಿಎಫ್ ಸಂಯುಕ್ತಾಶ್ರಯದಲ್ಲಿ ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ನಗರದ ಎಸ್.ಓ.ಜಿ. ಕಾಲೋನಿಯ ಇನಾಯತ್ ಅಹಮ್ಮದ್ ಅವರ ಪುತ್ರ ಕ್ರೀಡಾಪಟು ಯುಸುಫ್ ಐ.ಬಿ. ಇವರು 75 ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

READ ALSO THIS STORY:

Davanagere: ಸಂಸದ ಸಿದ್ದೇಶ್ವರ ವಿರುದ್ಧ ಸಿಡಿದೆದ್ದ ರೇಣುಕಾಚಾರ್ಯ: ಆ ಮಾತು ಹೇಳಬಾರದಿತ್ತು ಎಂದಿದ್ಯಾಕೆ ಎಂಪಿಆರ್….?

ಕ್ರೀಡಾಪಟು ಯುಸುಫ್ ಸಾಧನೆ ಗುರುತಿಸಿ 31ನೇ ವಾರ್ಡ್ ನ ಪ್ರಮುಖರು ಸನ್ಮಾನಿಸಿ ಗೌರವಿಸಿದರು. ಈ ವೇಳೆ ಮಾತನಾಡಿದ ಮಹಾನಗರ ಪಾಲಿಕೆ ಸದಸ್ಯ ಪಾಮೇನಹಳ್ಳಿ ನಾಗರಾಜ್, ನಮ್ಮ ವಾರ್ಡ್ ನ ಯುವಕರು ಈ ರೀತಿಯಾಗಿ ಸಾಧನೆ ಮಾಡಿರುವುದು ತುಂಬಾ ಹೆಮ್ಮೆಯ ಸಂಗತಿ. ಯುವಕರು ಯಾವುದೇ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಎಲ್ಲಾ ರೀತಿಯ ಸಹಕಾರ ನೀಡಿ, ಮುಂದಿನ ದಿನಗಳಲ್ಲಿ ಯುವಕರು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಉತ್ತಮವಾದ ಸಾಧನೆ ಮಾಡಿದರೆ ನಾನು ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.

ಹದಡಿ ವೆಂಕಟೇಶ್ ಮಾತನಾಡಿ, ನಮ್ಮ ಎರಡೂ ವಾರ್ಡ್ ಗಳಲ್ಲಿಯೂ ಪ್ರತಿಯೊಂದು ಕಾರ್ಯಕ್ರಮ  ಯಶಸ್ವಿಗೊಳ್ಳುತ್ತಿರುವುದು ಸಂತೋಷದ ವಿಷಯ. ನಮ್ಮಲ್ಲಿ ಯಾವುದೇ ಜಾತಿ-ಧರ್ಮ, ಬೇಧ-ಭಾವವಿಲ್ಲದೆ ಎಲ್ಲರೂ
ಮುಂದೆ ಬರುತ್ತಿದ್ದಾರೆ. ಅದೇ ರೀತಿ ಬಡ ಕುಟುಂಬದಲ್ಲಿ ಜನಿಸಿದ ಯುಸುಫ್ ಅವರ ತಂದೆ ಕೋಳಿ ಅಂಗಡಿ ವ್ಯಾಪಾರಿ. ಅವರು ತುಂಬಾ ಶ್ರಮಜೀವಿ, ಇಂಥವರ ಮಗನಿಗೆ ನಮ್ಮೆಲ್ಲರ ಪ್ರೋತ್ಸಾಹ ಬಹಳ ಮುಖ್ಯ. ಶ್ರೀಮಂತರು ಇಂತಹ ಕ್ರೀಡೆಯಲ್ಲಿ ಮುಂದೆ ಬರುತ್ತಾರೆ. ಅವರಿಗೆ ಹಣಕಾಸಿನ ಕೊರತೆ ಇರುವುದಿಲ್ಲ. ಆದರೆ ಇಂತವರಿಗೆ ಹಣಕಾಸಿನ ಕೊರತೆ ಇರುವುದರಿಂದ ಜಿಲ್ಲಾಡಳಿತ ಗುರುತಿಸಿ ಎಲ್ಲಾ ಸಹಕಾರ ನೀಡಿದರೆ ಬಡ ಕುಟುಂಬಕ್ಕೆ ಸಹಕಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ಯುಸುಫ್ ರಾಷ್ಟ್ರಮಟ್ಟದಲ್ಲಿ ಸ್ಪರ್ಧೆ ಮಾಡಿ ಉತ್ತಮ ಸಾಧನೆ ಮಾಡಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಮಾರುತಿ, ಆಸಿಫ್ ಅಲಿ, ಡಿ.ಜಿ. ನನ್ನೂಸಾಬ್, ಸುಭಾನ್‌ಸಾಬ್, ಖಾದರ್‌ಸಾಬ್, ಚಮನ್‌ಸಾಬ್, ಸಿರಾಜ್ ಪಟೇಲ್, ಶಿವಣ್ಣ ರಾಮನಗರ, ಸಂಗೀತ, ಮಂಜುಳಾ, ಜ್ಯೋತಿ, ಬುಡೇನ್ ಸಾಬ್, ಫೀರೋಜ್, ವಾಸೀಮ್, ಗಿರೀಶ್, ಅವಲಕ್ಕಿ ಬಸವರಾಜ್, ರುದ್ರೇಶ್, ರವಿ, ಮಲ್ಲಿಕ್‌ಸ್ವಾಮಿ, ಗುರುಶಾಂತಪ್ಪ, ಕಾಂತರಾಜ್, ಅನಿಲ್, ರಘು, ಸಂತು ಚಾಕಲೇಟ್, ಅಂಜಿನಿ ಹಾಗೂ 31-41ನೇ ವಾರ್ಡ್ ನ ನಾಗರೀಕರು ಉಪಸ್ಥಿತರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment