ದಾವಣಗೆರೆ: ಮಹಾನಗರಪಾಲಿಕೆ ವತಿಯಿಂದ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ನ.26 ರಂದು ನಗರದ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಮೌನೇಶ್ವರ ಫೀಡರ್ ವ್ಯಾಪ್ತಿಯ ಹೆಚ್.ಕೆ.ಆರ್. ಸರ್ಕಲ್ ನಿಟುವಳ್ಳಿ ಹೊಸಬಡಾವಣೆ, ಸಾಯಿ ಗಾಮೆರ್ಂಟ್, ಹಾಲೊಳ ಬಿಲ್ಡಿಂಗ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.