SUDDIKSHANA KANNADA NEWS/ DAVANAGERE/ DATE:29-12-2024
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಹೈಕೋರ್ಟ್ ದರ್ಶನ್ ತೂಗುದೀಪ ಅವರಿಗೆ ಜಾಮೀನು ನೀಡಿತ್ತು.
ಆದ್ರೆ, ಈಗ ಗೃಹ ಇಲಾಖೆಯು ಸುಪ್ರೀಂಕೋರ್ಟ್ ಗೆ ಜಾಮೀನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಗ್ರೀನ್ ಸಿಗ್ನಲ್ ನೀಡಿದೆ. ಬೆಂಗಳೂರು ಕಮೀಷನರ್ ಅವರು ಈ ಬಗ್ಗೆ ಈ ಹಿಂದೆಯೂ ಸೂಚನೆ ನೀಡಿದ್ದರು. ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ, ದರ್ಶನ್ ತೂಗುದೀಪ ಸೇರಿದಂತೆ ಎಲ್ಲರಿಗೂ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಕರ್ನಾಟಕ ಪೊಲೀಸರು ಸಜ್ಜಾಗಿದ್ದು, ಸುಪ್ರೀಂಕೋರ್ಟ್ ಪ್ರಕರಣ ಕೈಗೆತ್ತಿಕೊಂಡು ಜಾಮೀನು ರದ್ದುಪಡಿಸಿದರೆ ಮತ್ತೆ ದಾಸ ಜೈಲಿಗೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಲಿದೆ.
ಜೊತೆಗೆ ಲಿಫ್ಟಿಕ್ ರಾಣಿ ಪವಿತ್ರಾ ಗೌಡ ಕೂಡ ಮತ್ತೆ ಕಂಬಿ ಹಿಂದೆ ಹೋಗಬೇಕಾಗುತ್ತದೆ.
ಸುಪ್ರೀಂಕೋರ್ಟ್ ನಲ್ಲಿ ಸಮರ್ಥ ವಾದ ಮಂಡಿಸಲು ವಕೀಲರ ನೇಮಕಕ್ಕೆ ದರ್ಶನ್ ತೂಗುದೀಪ ಅವರು ಚಿಂತನೆ ನಡೆಸಿದ್ದು, ಹೈಕೋರ್ಟ್ ಜಾಮೀನು ಪ್ರಶ್ನಿಸಿ ಸಲ್ಲಿಸಲಿರುವ ಮೇಲ್ಮನವಿಯಲ್ಲಿ ಯಾವೆಲ್ಲಾ ಅಂಶಗಳು ಇರಲಿವೆ ಎಂಬ ಕುರಿತಂತೆ ದಾಸನಿಗೆ ಢವಢವ ಶುರುವಾಗಿದೆ. ಇನ್ನೊಂದು ವಾರದಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.