Home ಕ್ರೈಂ ನ್ಯೂಸ್ Instagram ನಲ್ಲಿ ಹೊಸ ಇತಿಹಾಸ: 2.2 ಕೋಟಿ ದಾಟಿದ ‘ಕಾಕ್ರೋಚ್ ಜನತಾ ಪಾರ್ಟಿ’ ಫಾಲೋವರ್ಸ್, ಬಿಜೆಪಿ ಹಿಂದಿಕ್ಕಿದ ಸಿಜೆಪಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

Instagram ನಲ್ಲಿ ಹೊಸ ಇತಿಹಾಸ: 2.2 ಕೋಟಿ ದಾಟಿದ ‘ಕಾಕ್ರೋಚ್ ಜನತಾ ಪಾರ್ಟಿ’ ಫಾಲೋವರ್ಸ್, ಬಿಜೆಪಿ ಹಿಂದಿಕ್ಕಿದ ಸಿಜೆಪಿ!

Share
ಕಾಕ್ರೋಚ್ ಜನತಾ ಪಾರ್ಟಿ
Share

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಭಿನ್ನ ಮಾದರಿಯ ಡಿಜಿಟಲ್ ಚಳವಳಿ ‘ಕಾಕ್ರೋಚ್ ಜನತಾ ಪಾರ್ಟಿ‘ (CJP) ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 22.8 ಮಿಲಿಯನ್ (2.28 ಕೋಟಿ) ಫಾಲೋವರ್ಸ್ ಹೊಂದುವ ಮೂಲಕ ಹೊಸ ದಾಖಲೆ ಬರೆದಿದೆ. ಕೇವಲ ಒಂದು ವಾರದ ಅವಧಿಯಲ್ಲಿ ಆಡಳಿತಾರೂಢ ಬಿಜೆಪಿ (8.8 ಮಿಲಿಯನ್) ಪಕ್ಷದ ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್‌ಗಿಂತಲೂ ಹೆಚ್ಚಿನ ಫಾಲೋವರ್ಸ್ ಗಳಿಸುವ ಮೂಲಕ ಸಿಜೆಪಿ ದೇಶದ ಯುವ ಸಮೂಹದ ಗಮನ ಸೆಳೆದಿದೆ.

ಏನಿದು ಕಾಕ್ರೋಚ್ ಜನತಾ ಪಾರ್ಟಿ?

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರ “ರೌಡಿಗಳನ್ನು ಜಿರಳೆಗಳಿಗೆ (Cockroach) ಹೋಲಿಸಿದ” ಹೇಳಿಕೆಯ ವಿರುದ್ಧ ಆನ್‌ಲೈನ್ ಪ್ರತಿಭಟನೆಯಾಗಿ ಆರಂಭವಾದ ಈ ವ್ಯಂಗ್ಯಾತ್ಮಕ ಪೇಜ್, ಇಂದು ದೇಶದ ಅತಿ ದೊಡ್ಡ ಯುವ ಆಂದೋಲನವಾಗಿ ರೂಪಾಂತರಗೊಂಡಿದೆ. ಇದರ ಸಂಸ್ಥಾಪಕ ಅಭಿಜೀತ್ ದಿಪ್ಕೆ, “ಇದು ಕೇವಲ ಆರಂಭವಷ್ಟೇ, ಜಿರಳೆಗಳ ಆಟ ಇನ್ನು ಮುಂದೆ ಶುರುವಾಗಲಿದೆ” ಎಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ವ್ಯಂಗ್ಯಚಿತ್ರದಿಂದ ಯುವ ಧ್ವನಿಯಾಗಿ ಬದಲಾದ CJP:

ಆರಂಭದಲ್ಲಿ ಕೇವಲ ಮೀಮ್ಸ್ ಹಾಗೂ ವ್ಯಂಗ್ಯಕ್ಕೆ ಸೀಮಿತವಾಗಿದ್ದ ಈ ಪೇಜ್, ಸದ್ಯ ದೇಶದ ಯುವಕರು ಎದುರಿಸುತ್ತಿರುವ ಪೇಪರ್ ಲೀಕ್ (ಪ್ರಶ್ನೆ ಪತ್ರಿಕೆ ಸೋರಿಕೆ), ನಿರುದ್ಯೋಗ ಮತ್ತು ವ್ಯವಸ್ಥೆಯಲ್ಲಿನ ಹೊಣೆಗಾರಿಕೆಯ ಕೊರತೆಯ ವಿರುದ್ಧ ಧ್ವನಿ ಎತ್ತಲು ಆರಂಭಿಸಿದೆ. “ನಮ್ಮ ಹೋರಾಟ ಭಾರತದ ಸಂವಿಧಾನದ ಚೌಕಟ್ಟಿನಲ್ಲಿದೆ. ಮಹಾತ್ಮಾ ಗಾಂಧಿ, ಅಂಬೇಡ್ಕರ್, ನೆಹರು, ಭಗತ್ ಸಿಂಗ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ತತ್ವಗಳಿಂದ ಪ್ರೇರಿತರಾಗಿ ನಾವು ಜಾತ್ಯತೀತತೆ, ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ” ಎಂದು ಸಿಜೆಪಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ತಡೆಗಳ ನಡುವೆಯೂ ಮುನ್ನುಗ್ಗುತ್ತಿರುವ ಚಳವಳಿ:

ಇತ್ತೀಚೆಗಷ್ಟೇ ಸಿಜೆಪಿಯ ಅಧಿಕೃತ ವೆಬ್‌ಸೈಟ್ ಹಾಗೂ ‘X’ (ಟ್ವಿಟರ್) ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದ್ದು, ಇನ್‌ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಲು ಪ್ರಯತ್ನಿಸಲಾಗಿತ್ತು ಎಂದು ಅಭಿಜೀತ್ ದಿಪ್ಕೆ ಆರೋಪಿಸಿದ್ದಾರೆ. ಆದಾಗ್ಯೂ, ಸರ್ಕಾರಿ ವ್ಯವಸ್ಥೆಯ ಯಾವುದೇ ಒತ್ತಡಗಳಿಗೂ ಮಣಿಯದೆ ಯುವ ಸಬಲೀಕರಣಕ್ಕಾಗಿ ತಟಸ್ಥ ಹೋರಾಟ ಮುಂದುವರಿಸುವುದಾಗಿ ಪಾರ್ಟಿ ಸ್ಪಷ್ಟಪಡಿಸಿದೆ. ಪಾಕಿಸ್ತಾನದಿಂದ ಫಾಲೋವರ್ಸ್ ಬರುತ್ತಿದ್ದಾರೆ ಎಂಬ ಆರೋಪಕ್ಕೆ ತಿರುಗೇಟು ನೀಡಿರುವ ಸಂಸ್ಥಾಪಕರು, ನಮ್ಮ ಪೇಜ್‌ನ ಶೇ. 94 ರಷ್ಟು ಪ್ರೇಕ್ಷಕರು ಭಾರತೀಯರೇ ಆಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *