Home ದಾವಣಗೆರೆ RSS ಸಂಘಟನೆ ಅಸ್ತಿತ್ವ ಪ್ರಶ್ನಿಸುತ್ತಿಲ್ಲ, ಕಾನೂನುಬದ್ಧ ಉತ್ತರದಾಯಿತ್ವದ ಪ್ರಶ್ನೆ ನಮ್ಮದು: “ಚಿತ್ತಾಪುರ ನಿಮಗೆ ಪಾಠ ಕಲಿಸಿದೆ” ಅಲ್ವ ಬಿ.ಎಲ್. ಸಂತೋಷ್: ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

RSS ಸಂಘಟನೆ ಅಸ್ತಿತ್ವ ಪ್ರಶ್ನಿಸುತ್ತಿಲ್ಲ, ಕಾನೂನುಬದ್ಧ ಉತ್ತರದಾಯಿತ್ವದ ಪ್ರಶ್ನೆ ನಮ್ಮದು: “ಚಿತ್ತಾಪುರ ನಿಮಗೆ ಪಾಠ ಕಲಿಸಿದೆ” ಅಲ್ವ ಬಿ.ಎಲ್. ಸಂತೋಷ್: ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು!

Share
ಪ್ರಿಯಾಂಕ್ ಖರ್ಗೆ
Share

ಬೆಂಗಳೂರು / ಕಲಬುರಗಿ: ಆರ್‌ಎಸ್‌ಎಸ್‌ನ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಶಾಸನಬದ್ಧ ನೋಂದಣಿ, ಆರ್ಥಿಕ ಪಾರದರ್ಶಕತೆ ಹಾಗೂ ಸಾರ್ವಜನಿಕ ಮೆರವಣಿಗೆಗಳ ಆಡಳಿತಾತ್ಮಕ ನಿಯಮಗಳ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಶ್ ಮತ್ತು ರಾಜ್ಯದ ಪ್ರಮುಖ ನಾಯಕರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಕ್ಷೇತ್ರವಾದ ಚಿತ್ತಾಪುರದಲ್ಲಿ ನಡೆದ ಪಥಸಂಚಲನ ಹಾಗೂ ರಾಜಕೀಯ ಬೆಳವಣಿಗೆಗಳನ್ನು ಪ್ರಸ್ತಾಪಿಸಿದ ಪ್ರಿಯಾಂಕ್ ಖರ್ಗೆ, ಸಂಘಟನೆಯು ಕೇವಲ ಪೋಲಿಸರಿಗೆ ‘ಮಾಹಿತಿ’ ನೀಡಿ ಕಾರ್ಯಕ್ರಮ ನಡೆಸುವುದು ಕಾನೂನುಬದ್ಧವಲ್ಲ ಎಂಬುದನ್ನು ಚಿತ್ತಾಪುರ ಘಟನೆ ನಿರೂಪಿಸಿದೆ ಎಂದರು. ಎಕ್ಸ್ ಖಾತೆಯಲ್ಲಿ ಬಿ. ಎಲ್. ಸಂತೋಷ್ ಅವರಿಗೆ ಪ್ರಿಯಾಕ್ ಖರ್ಗೆ ಅವರು ತಿರುಗೇಟು ನೀಡಿದ್ದಾರೆ.

ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಪಥಸಂಚಲನದ ಮಾರ್ಗ, ಸಮಯ ಮತ್ತು ಸಾರ್ವಜನಿಕ ಸುರಕ್ಷತೆಗೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಆಡಳಿತಾತ್ಮಕ ಕ್ರಮವನ್ನು ಸಮರ್ಥಿಸಿಕೊಂಡರು.

ಇದರೊಂದಿಗೆ, ಶತಮಾನ ಪೂರೈಸುತ್ತಿರುವ ಸಂಘಟನೆಯು ಆದಾಯ ತೆರಿಗೆ ಸಲ್ಲಿಕೆ, ಹಣಕಾಸು ಪಾರದರ್ಶಕತೆ ಮತ್ತು ನೋಂದಣಿ ವ್ಯಾಪ್ತಿಗೆ ಏಕಾಗಿ ಒಳಪಡುತ್ತಿಲ್ಲ ಎಂದು ಖರ್ಗೆ ಪ್ರಶ್ನಿಸಿದರು.

“ನಾವು ಸಂಘಟನೆಯ ಅಸ್ತಿತ್ವವನ್ನು ಪ್ರಶ್ನಿಸುತ್ತಿಲ್ಲ, ಬದಲಾಗಿ ಅದರ ಕಾನೂನುಬದ್ಧ ಉತ್ತರದಾಯಿತ್ವವನ್ನು ಪ್ರಶ್ನಿಸುತ್ತಿದ್ದೇವೆ” ಎಂದು ಹೇಳಿದ ಅವರು, ಪ್ರಜಾಪ್ರಭುತ್ವದಡಿಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಂದು ಸಂಸ್ಥೆಯೂ ಕಾನೂನಿಗೆ ಬದ್ಧವಾಗಿರಬೇಕು ಎಂದು ಪ್ರತಿಪಾದಿಸಿದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles