Home ದಾವಣಗೆರೆ ಇಂದಿನ ಚಿನ್ನದ ದರ (ಮೇ 25, 2026): ಬೆಂಗಳೂರು, ದಾವಣಗೆರೆಯಲ್ಲಿ ಬಂಗಾರದ ಬೆಲೆ ಏರಿಕೆ! ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ಇಂದಿನ ಚಿನ್ನದ ದರ (ಮೇ 25, 2026): ಬೆಂಗಳೂರು, ದಾವಣಗೆರೆಯಲ್ಲಿ ಬಂಗಾರದ ಬೆಲೆ ಏರಿಕೆ! ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

Share
ದಾವಣಗೆರೆ
Share

ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಹಾಗೂ ಅಮೆರಿಕ ಡಾಲರ್ ಮೌಲ್ಯದಲ್ಲಿನ ಇಳಿಕೆಯ ಪರಿಣಾಮವಾಗಿ ಇಂದು (ಮೇ 25) ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಭಾರತೀಯ ಮಾರುಕಟ್ಟೆಯಾದ MCX ನಲ್ಲಿ ಇಂದಿನ ವಹಿವಾಟು ಆರಂಭದಲ್ಲೇ ಚಿನ್ನದ ದರ ಶೇಕಡಾ 0.45 ರಷ್ಟು ಹೆಚ್ಚಳವಾಗಿದ್ದು, ಪ್ರತಿ 10 ಗ್ರಾಂಗೆ ಸುಮಾರು 1.6 ಲಕ್ಷ ರೂಪಾಯಿ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗಳ ಹಿನ್ನೆಲೆ ಹಾಗೂ ಕಚ್ಚಾ ತೈಲ ಬೆಲೆಯಲ್ಲಿನ ಇಳಿಕೆಯಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನದ ಕಡೆಗೆ ಮುಖ ಮಾಡುತ್ತಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದಿನ ದರ (10 ಗ್ರಾಂಗೆ): ರಾಜಧಾನಿ ಬೆಂಗಳೂರು ಸೇರಿದಂತೆ ದಾವಣಗೆರೆ, ಮೈಸೂರು ಹಾಗೂ ಮಂಗಳೂರಿನಲ್ಲಿ ಇಂದಿನ ಚಿನ್ನದ ದರಗಳು ಈ ಕೆಳಗಿನಂತಿದೆ:

24 ಕ್ಯಾರೆಟ್ (ಅಪರಂಜಿ ಚಿನ್ನ): ₹1,59,380

22 ಕ್ಯಾರೆಟ್ (ಆಭರಣ ಚಿನ್ನ): ₹1,46,10018 ಕ್ಯಾರೆಟ್ ಚಿನ್ನ: ₹1,19,540

ದೇಶದ ಇತರೆ ಪ್ರಮುಖ ನಗರಗಳ ಇಂದಿನ ದರ ವಿವರ:

ದೆಹಲಿ: 24K – ₹1,59,530 | 22K – ₹1,46,250

ಮುಂಬೈ: 24K – ₹1,59,380 | 22K – ₹1,46,100

ಚೆನ್ನೈ: 24K – ₹1,61,240 | 22K – ₹1,47,800

ಕಳೆದ ಮೇ 23 ರಂದು ಮಾರುಕಟ್ಟೆಯಲ್ಲಿ ಉಂಟಾಗಿದ್ದ ಏರಿಳಿತದಿಂದಾಗಿ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡು ಬಂದಿತ್ತಾದರೂ, ವಾರದ ಮೊದಲ ದಿನವಾದ ಇಂದು ಮತ್ತೆ ಚೇತರಿಕೆ ಕಂಡುಕೊಂಡಿದೆ.

Share

Leave a comment

Leave a Reply

Your email address will not be published. Required fields are marked *