ದಾವಣಗೆರೆ: ನಗರದ ಹೊಂಡದ ಸರ್ಕಲ್ ಬಳಿಯ ಪುಷ್ಕರಣಿ ಆವರಣದಲ್ಲಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ದೈನಂದಿನ ಜೀವನದಲ್ಲಿ ಅಹೋರಾತ್ರಿ ಶ್ರಮಿಸುವ ಪೌರಕಾರ್ಮಿಕರ ಸೇವೆಯನ್ನು ಸ್ಮರಿಸಿ, ಅವರಿಗೆ ಗೌರವ ಸೂಚಕವಾಗಿ ವಿಶೇಷ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ದಾವಣಗೆರೆ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಚೇತನಾ ಶಿವಕುಮಾರ್ ನೇತೃತ್ವದಲ್ಲಿ ಅರ್ಥಪೂರ್ಣವಾಗಿ ರಕ್ಷಾಬಂಧನ ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ರಾಖಿ ಕಟ್ಟಿ, ಸಿಹಿ ಹಂಚುವ ಮೂಲಕ ಸಹೋದರತ್ವ ಹಾಗೂ ಕೃತಜ್ಞತೆಯನ್ನು ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಹೆಚ್. ಸಿ. ಜಯಮ್ಮ, ಪ್ರಮುಖರಾದ ಜಯಲಕ್ಷ್ಮಿ ಮಹೇಶ್, ಭಾಗ್ಯ ಪಿಸಾಳೆ, ರೇಖಾ ರಮೇಶ್, ಸುಶೀಲಮ್ಮ, ಅಕ್ಕಮ್ಮ, ವೀಣಾ, ವೀಣಾ ಜಗಳೂರು ಸೇರಿದಂತೆ ಅನೇಕ ಮಹಿಳಾ ಮುಖಂಡರು ಹಾಗೂ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಾದ ಕೃಷ್ಣಮೂರ್ತಿ, ಜಗದೀಶ್, ನಾಗವೇಣಿ, ವಿಕ್ರಂ, ಕುಮಾರ್, ಚೇತನ್ ಹಾಗೂ ಇತರರು ಉಪಸ್ಥಿತರಿದ್ದು, ಗೌರವ ಸ್ವೀಕರಿಸಿದರು.
- BJP Mahila Morcha
- Chethana Shivakumar
- Davangere local news
- Davangere News
- HC Jayamma
- Hondada Circle Pushkarani
- Pourakarmikas
- Rakhi Celebration Davangere
- Special Raksha Bandhan
- ಚೇತನ ಶಿವಕುಮಾರ್
- ದಾವಣಗೆರೆ ಸುದ್ದಿ
- ದಾವಣಗೆರೆ ಸ್ಥಳೀಯ ಸುದ್ದಿ
- ಪೌರಕಾರ್ಮಿಕರು
- ಬಿಜೆಪಿ ಮಹಿಳಾ ಮೋರ್ಚಾ
- ರಕ್ಷಾ ಬಂಧನ ಆಚರಣೆ
- ವಿಶೇಷ ರಕ್ಷಾ ಬಂಧನ
- ಹೆಚ್ ಸಿ ಜಯಮ್ಮ
- ಹೊಂಡದ ಸರ್ಕಲ್ ಪುಷ್ಕರಣಿ





Leave a comment