Home ಕ್ರೈಂ ನ್ಯೂಸ್ ನೇಪಾಳದಲ್ಲಿ ಜಲಪ್ರಳಯ: 4 ಗಂಟೆಗಳ ಕಾಲ ಗಂಡಾಂತರ ಎದುರಿಸಿ ಬದುಕಿಬಂದ 97 ವರ್ಷದ ‘ವೀರ ನಾರಿ’!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ನೇಪಾಳದಲ್ಲಿ ಜಲಪ್ರಳಯ: 4 ಗಂಟೆಗಳ ಕಾಲ ಗಂಡಾಂತರ ಎದುರಿಸಿ ಬದುಕಿಬಂದ 97 ವರ್ಷದ ‘ವೀರ ನಾರಿ’!

Share
ನೇಪಾಳ
Share

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಜಲಪ್ರಳಯ ಮತ್ತು ಸರಣಿ ಭೂಕುಸಿತದ ನಡುವೆ ಭರವಸೆಯ ಬೆಳಕೊಂದ ಮೂಡಿದೆ. ಪ್ರವಾಹದಲ್ಲಿ ಸಿಲುಕಿ ಕಟ್ಟಡದ ಅವಶೇಷಗಳಡಿಯಲ್ಲಿ ಹೂತುಹೋಗಿದ್ದ 97 ವರ್ಷದ ಗುಣ ಮಾಯಾ ಬೊಹಾರಾ (Guna Maya Bohara) ಎಂಬ ವೃದ್ಧೆಯನ್ನು ನೇಪಾಳ ಸೇನೆ ಮತ್ತು ಪೋಲಿಸರು ಅತ್ಯಂತ ಸಾಹಸಿಕವಾಗಿ ರಕ್ಷಿಸಿದ್ದಾರೆ.

ಯೋಧೆಯಂತೆ ಹೊರಬಂದ ವೃದ್ಧೆ:

ಪ್ರವಾಹದ ಭೀಕರತೆಗೆ ಅವರು ತಂಗಿದ್ದ ವೃದ್ಧಾಶ್ರಮದ ಕಟ್ಟಡ ಸಂಪೂರ್ಣ ನೆಲಸಮವಾಗಿತ್ತು. ನಾಲ್ಕು ಗಂಟೆಗಳ ಕಾಲ ನಡೆದ ಸುದೀರ್ಘ ಹಾಗೂ ಕಠಿಣ ರಕ್ಷಣಾ ಕಾರ್ಯಾಚರಣೆಯ ಬಳಿಕ ಜೆಸಿಬಿ (Excavator) ಯಂತ್ರದ ಬಕೆಟ್‌ ಮೂಲಕ ಅವರನ್ನು ಸುರಕ್ಷಿತವಾಗಿ ಹೊರತರಲಾಯಿತು. ದೇಹವಿಡೀ ಕೆಸರಿನಿಂದ ಆವೃತವಾಗಿದ್ದರೂ, ಅವರು ತೋರಿಸಿದ ಧೈರ್ಯ ಮತ್ತು ಸಹನಶೀಲತೆ ಎಲ್ಲರ ಗಮನ ಸೆಳೆದಿದೆ. ಅವರ ರಕ್ಷಣೆಯ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೇಪಾಳದ ಈ ಪ್ರಕೃತಿ ವಿಕೋಪದ ನಡುವೆ ಅವರು ರಕ್ಷಣೆಯ ಮತ್ತು ಧೈರ್ಯದ ‘ಮಾನವೀಯ ಸಂಕೇತ’ವಾಗಿ ಹೊರಹೊಮ್ಮಿದ್ದಾರೆ.

ವೃದ್ಧೆಯ ಮೊಮ್ಮಗ ದೀಪಕ್ ಬೊಹಾರಾ ಮಾತನಾಡಿ, “ಕಾಠ್ಮಂಡುವಿನಿಂದ ರಕ್ಷಣೆಗೆ ಧಾವಿಸಿದಾಗ ಅಜ್ಜಿ ಜೀವಂತವಾಗಿದ್ದಾರೆ ಎಂಬ ಭರವಸೆಯೇ ಇರಲಿಲ್ಲ. ಆದರೆ ಅವರನ್ನು ರಕ್ಷಿಸಿ ಕರೆತರುವಾಗ, ಯುದ್ಧ ಗೆದ್ದು ಬಂದ ಬಲಿಷ್ಠ ಯೋಧೆಯಂತೆ (Warrior) ಕಾಣುತ್ತಿದ್ದರು” ಎಂದು ಭಾವುಕರಾಗಿ ಹೇಳಿದ್ದಾರೆ.

ನೇಪಾಳದಲ್ಲಿ ಭೀಕರ ಪರಿಸ್ಥಿತಿ:

ಹಿಮಾಲಯ ಗಡಿಭಾಗದಲ್ಲಿ ಸಂಭವಿಸಿದ ಹಿಮನದಿ ಕುಸಿತದಿಂದಾಗಿ (Glacier Collapse) ಭೋಟೆ ಕೋಶಿ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿದೆ. ಈ ಪ್ರಕೃತಿ ವಿಕೋಪಕ್ಕೆ ಇದುವರೆಗೆ 600ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, ಸಾವಿರಾರು ಜನರು ನಾಪತ್ತೆಯಾಗಿದ್ದಾರೆ. ಸದ್ಯ ಗುಣ ಮಾಯಾ ಬೊಹಾರಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *