Home ದಾವಣಗೆರೆ ಹಿಂದುಳಿದ ವರ್ಗಗಳ ಧ್ವನಿಯಾಗಿ ಮೂಡಿಬಂದ ಬಿ. ಕೆ. ಹರಿಪ್ರಸಾದ್ ಗೆ ಕೆಪಿಸಿಸಿ ಅಧ್ಯಕ್ಷಗಿರಿ: ಹೊಂದಿರೋ ಆಸ್ತಿ ಎಷ್ಟು? ರಾಜಕೀಯ ಪಯಣದ EXCLUSIVE ಮಾಹಿತಿ!
ದಾವಣಗೆರೆನವದೆಹಲಿಬೆಂಗಳೂರು

ಹಿಂದುಳಿದ ವರ್ಗಗಳ ಧ್ವನಿಯಾಗಿ ಮೂಡಿಬಂದ ಬಿ. ಕೆ. ಹರಿಪ್ರಸಾದ್ ಗೆ ಕೆಪಿಸಿಸಿ ಅಧ್ಯಕ್ಷಗಿರಿ: ಹೊಂದಿರೋ ಆಸ್ತಿ ಎಷ್ಟು? ರಾಜಕೀಯ ಪಯಣದ EXCLUSIVE ಮಾಹಿತಿ!

Share
ಬಿ. ಕೆ. ಹರಿಪ್ರಸಾದ್
Share

ಬೆಂಗಳೂರು: ಸಚಿವ ಸ್ಥಾನದ ಆಕಾಂಕ್ಷಿ ಹೊಂದಿದ್ದ ಕಾಂಗ್ರೆಸ್ ನಾಯಕ ಮತ್ತು ವಿಧಾನ ಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. 

ಕಾಂಗ್ರೆಸ್ ಪಕ್ಷದಲ್ಲಿ ಹಲವು ವರ್ಷಗಳಿಂದ ದುಡಿದಿರುವ ಬಿ. ಕೆ. ಹರಿಪ್ರಸಾದ್ ಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಅಚ್ಚರಿ ನಡೆ ಇಟ್ಟಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಸತೀಶ್ ಜಾರಕಿಹೊಳಿಗೆ ಶಾಕ್ ನೀಡಿದ್ದು, ಕೊನೆ ಗಳಿಗೆಯಲ್ಲಿ ಕೇಳಿ ಬಂದ ಹೆಸರು ಬಿ. ಕೆ. ಹರಿಪ್ರಸಾದ್. ಆದರೆ ಹರಿಪ್ರಸಾದ್ ಈ ಹುದ್ದೆ ನೀಡುವ ಮೂಲಕ ಹೊಸ ದಾಳ ಉರುಳಿಸಿದೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಭಾವಿ ಹಾಗೂ ಹಿರಿಯ ಮುತ್ಸದ್ದಿ ರಾಜಕಾರಣಿ ಬಿ. ಕೆ. ಹರಿಪ್ರಸಾದ್ ಅವರು ದಶಕಗಳಿಂದಲೂ ರಾಷ್ಟ್ರ ಮತ್ತು ರಾಜ್ಯ ರಾಜಕೀಯ ವಲಯದಲ್ಲಿ ತಳಮಟ್ಟದ ಹೋರಾಟಗಾರನಾಗಿ ಗುರುತಿಸಿಕೊಂಡಿದ್ದಾರೆ.

ಇನ್ನು ಬಿ. ಕೆ. ಹರಿಪ್ರಸಾದ್ ಎಲ್ಲಿಯವರು? ಹೊಂದಿರುವ ಆಸ್ತಿ ಎಷ್ಟು? ಕಾಂಗ್ರೆಸ್ ನಲ್ಲಿ ಏನೆಲ್ಲಾ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು? ಕಾಂಗ್ರೆಸ್ ಪಕ್ಷಕ್ಕೆ ಕೊಡುಗೆ ಏನು ಎಂಬ ಕುರಿತ ಎಕ್ಸ್ ಕ್ಯ್ಲೂಸಿವ್ ಮಾಹಿತಿ ಇಲ್ಲಿದೆ.

ಹಿಂದುಳಿದ ವರ್ಗಗಳ (OBC) ಹಿತರಕ್ಷಣೆ ಮತ್ತು ದಲಿತರ ಹಕ್ಕುಗಳ ಪರವಾಗಿ ರಾಜಿಯಿಲ್ಲದೆ ಧ್ವನಿ ಎತ್ತುವ ಮೂಲಕ ಅವರು “ಸಾಮಾಜಿಕ ಕಾವಲುಗಾರ” ಎಂದೇ ಖ್ಯಾತರಾಗಿದ್ದಾರೆ. ಫೆಬ್ರವರಿ 2025 ರಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ಹೊತ್ತು ಹರಿಯಾಣ ರಾಜ್ಯದ ಕಾಂಗ್ರೆಸ್ ಉಸ್ತುವಾರಿಯಾಗಿ ಇವರನ್ನು ನೇಮಿಸಲಾಗಿತ್ತು. ಇತ್ತೀಚಿನ ರಾಜಕೀಯ ಬೆಳವಣಿಗೆಗಳಲ್ಲಿ ಇವರು ಕೆಪಿಸಿಸಿ (KPCC) ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿಯೂ ಮುಂಚೂಣಿಯಲ್ಲಿದ್ದಾರೆ.

ಆರಂಭಿಕ ಜೀವನ ಮತ್ತು ಶಿಕ್ಷಣ:

29 ಜುಲೈ 1954 ರಂದು ಬೆಂಗಳೂರಿನಲ್ಲಿ ಕೆಂಪಯ್ಯ ಎ. ಮತ್ತು ಗುಣವತಿ ದಂಪತಿಯ ಪುತ್ರನಾಗಿ ಜನಿಸಿದ ಹರಿಪ್ರಸಾದ್, ಬೆಂಗಳೂರು ವಿಶ್ವವಿದ್ಯಾಲಯದ ಎಂಇಎಸ್ (MES) ಕಾಲೇಜಿನಿಂದ ಬಿ.ಕಾಂ ಪದವಿ ಪಡೆದಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲೇ ಯುವ ಕಾಂಗ್ರೆಸ್ ಮೌಲ್ಯಗಳ ಮೂಲಕ ಸಕ್ರಿಯ ರಾಜಕೀಯಕ್ಕೆ ಕಾಲಿಟ್ಟರು.

ರಾಷ್ಟ್ರ ಮತ್ತು ರಾಜ್ಯ ರಾಜಕೀಯದ ಮೈಲಿಗಲ್ಲುಗಳು:

21 ವರ್ಷಗಳ ಸಂಸದೀಯ ಸೇವೆ: 1990 ರಲ್ಲಿ ಮೊದಲ ಬಾರಿಗೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಇವರು ಒಟ್ಟು ನಾಲ್ಕು ಅವಧಿಗಳಿಗೆ (1990-1996, 2004-2010, 2013-2020) ಸುದೀರ್ಘ 21 ವರ್ಷಗಳ ಕಾಲ ಮೇಲ್ಮನೆಯ ಸದಸ್ಯರಾಗಿ ದೇಶದ ವಿವಿಧ ಪ್ರಮುಖ ಸಂಸದೀಯ ಸಮಿತಿಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ರಾಜ್ಯಸಭೆ ಉಪಸಭಾಪತಿ ಸ್ಪರ್ಧೆ: ಯುಪಿಎ ಮೈತ್ರಿಕೂಟದ ಒಮ್ಮತದ ಅಭ್ಯರ್ಥಿಯಾಗಿ ರಾಜ್ಯಸಭೆಯ ಉಪಸಭಾಪತಿ ಹುದ್ದೆಗೆ ಸ್ಪರ್ಧಿಸಿ ತೀವ್ರ ಪೈಪೋಟಿ ನೀಡಿದ್ದರು.

ವಿಧಾನ ಪರಿಷತ್ ನಾಯಕತ್ವ: 2020 ರಲ್ಲಿ ರಾಜ್ಯ ರಾಜಕೀಯಕ್ಕೆ ಮರಳಿದ ಇವರು ವಿಧಾನ ಪರಿಷತ್ ಸದಸ್ಯರಾಗಿ (MLC) ಆಯ್ಕೆಯಾದರು. ಜನವರಿ 2022 ರಿಂದ ಮೇ 2023 ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಯಶಸ್ವಿಯಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ.

ವಿಶೇಷತೆ:

ಸ್ವಪಕ್ಷದ ಸರ್ಕಾರಗಳೇ ಇರಲಿ ಅಥವಾ ವಿರೋಧ ಪಕ್ಷಗಳೇ ಇರಲಿ, ಹಿಂದುಳಿದ ವರ್ಗಗಳ ಹಿತಾಸಕ್ತಿಗೆ ಧಕ್ಕೆ ಬಂದಾಗ ಮುಲಾಜಿಲ್ಲದೆ ಧ್ವನಿ ಎತ್ತುವ ಅಪರೂಪದ “ಮಾಸ್ ಲೀಡರ್” ಇವರಾಗಿದ್ದಾರೆ.

ಸಂಕ್ಷಿಪ್ತ ಪ್ರೊಫೈಲ್ ಟೇಬಲ್

ವಿವರಮಾಹಿತಿ
ಪೂರ್ಣ ಹೆಸರುಬಿ. ಕೆ. ಹರಿಪ್ರಸಾದ್ (B. K. Hariprasad)
ರಾಜಕೀಯ ಪಕ್ಷಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC)
ಹುದ್ದೆಗಳುಮಾಜಿ ರಾಜ್ಯಸಭಾ ಸದಸ್ಯ, ಕರ್ನಾಟಕ ವಿಧಾನ ಪರಿಷತ್ ಸದಸ್ಯ (MLC), ಹರಿಯಾಣ ಕಾಂಗ್ರೆಸ್ ಉಸ್ತುವಾರಿ
ಆಸ್ತಿ ಮೌಲ್ಯಒಟ್ಟು ಆಸ್ತಿ: ₹15.27 ಕೋಟಿ, ನಿವ್ವಳ ಆಸ್ತಿ: ₹13.14 ಕೋಟಿ
ಕುಟುಂಬಪತ್ನಿ: ಶ್ರೀಮತಿ ಉಷಾ (ಶಿಕ್ಷಕಿ), ಒಬ್ಬ ಪುತ್ರಿ

Share

Leave a comment

Leave a Reply

Your email address will not be published. Required fields are marked *