SUDDIKSHANA KANNADA NEWS/ DAVANAGERE/ DATE:19-11-2024
ಬೆಂಗಳೂರು: ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದಿ ನಿಗಮ ಮತ್ತು ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ವತಿಯಿಂದ ಪ್ರಸ್ತಕ ಸಾಲಿಗೆ ಮ್ಯಾನ್ಯುಯಲ್ ಸ್ಕಾಂವೆಂಜರ್ಸ್ ಮತ್ತು ಅವರ ಅವಲಂಬಿತ ಯುವಕ ಮತ್ತು ಯುವತಿಯರಿಗೆ ಗ್ರಾಫಿಕ್ಸ್ ಡಿಸೈನಿಂಗ್ ಮತ್ತು ವಿಡಿಯೋ ಎಡಿಟಿಂಗ್ ತರಬೇತಿ ನೀಡಲು ಉದ್ದೇಶಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಯಲ್ಲಿ ಗ್ರಾಫಿಕ್ಸ್ ಡಿಸೈನಿಂಗ್, ವಿಡಿಯೋ ಎಡಿಟಿಂಗ್, ಅಡೋಬ್ ಫೋಟೋ ಶಾಪ್, ಕೊರಾಲ್ ಡ್ರಾ, ಕಾನ್ವಾ, ಆಡೋಬ್ ಪ್ರಿಮಿಯರ್ ಪ್ರೊ, ನುಡಿ ಸಾಫ್ಟ್ವೇರ್ ಹಾಗೂ ಇತರೆ ಸ್ಕಿಲ್ ತರಬೇತಿ ನೀಡಲಾಗುವುದು.
ಅರ್ಹತೆ:
ಮ್ಯಾನ್ಯುಯಲ್ ಸ್ಕಾಂವೆಂಜರ್ಸ್ ಮತ್ತು ಅವರ ಅವಲಂಬಿತರ ಯುವಕ-ಯುವತಿಯರು 18 ರಿಂದ 35 ವಯಸ್ಸನವರಾಗಿರಬೇಕು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಮ್ಯಾನ್ಯಯಲ್ ಸ್ಯಾವೆಂಜರ್ಸ್
ಐಡಿ ಕಾರ್ಡ್ ಇರಬೇಕು. ಜಿಲ್ಲಾ ವ್ಯವಸ್ಥಾಪಕರು ಅರ್ಹತೆ ಪರಿಶೀಲಿಸಿ ಶಿಫಾರಸ್ಸು ವರದಿ ಸಲ್ಲಿಸುವುದು. ಅರ್ಜಿ ಸಲ್ಲಿಸಲು ನ.25 ಕೊನೆಯ ದಿನವಾಗಿದೆ.
ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗಾಗಿ ನಗರದ ಕಂಟೋನ್ಮೆಂಟ್ನ ಆದರ್ಶ ಕಾಲೋನಿಯ ಸೆಂಟ್ ಜೋಸೆಫ್ ಶಾಲೆ ಎದುರಿನ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದಿ ನಿಗಮದ ಜಿಲ್ಲಾ
ವ್ಯವಸ್ಥಾಪಕರ ಕಚೇರಿಗೆ ಸಂಪರ್ಕಿಸಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.