ಕಾಕಿನಾಡ (ಆಂಧ್ರಪ್ರದೇಶ): ಅನೈತಿಕ ಸಂಬಂಧ ಹಾಗೂ ಕ್ಷಣಿಕ ಸುಖದ ವ್ಯಾಮೋಹಕ್ಕಾಗಿ ಪತ್ನಿಯೊಬ್ಬಳು ತನ್ನ ಕಟ್ಟುನಿಟ್ಟಿನ ಗಂಡನನ್ನೇ ಜ್ಯೂಸ್‌ನಲ್ಲಿ ನಿದ್ದೆ ಮಾತ್ರೆ ಬೆರೆಸಿ, ದಿಂಬಿನಿಂದ ಉಸಿರುಗಟ್ಟಿಸಿ ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ಆಂಧ್ರಪ್ರದೇಶದ ಕಾಕಿನಾಡದ ಸಮೀಪದ ಸತ್ಪವರಂನಲ್ಲಿ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಆರೋಪಿ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.
ಇನ್‌ಸ್ಟಾಗ್ರಾಮ್ ಪರಿಚಯ.. ಅನೈತಿಕ ಸಂಬಂಧ!
ಮೃತ ದುರ್ದೈವಿಯನ್ನು ಆಟೋ ಚಾಲಕ ಪುಲ್ಲಾ ದುರ್ಗಾಪ್ರಸಾದ್ (35) ಎಂದು ಗುರುತಿಸಲಾಗಿದೆ. ಈತನಿಗೆ ರಮಾದೇವಿ ಎಂಬ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದರು. ಸುಮಾರು ಎರಡು ವರ್ಷಗಳ ಹಿಂದೆ ದುರ್ಗಾಪ್ರಸಾದ್‌ಗೆ ಹೃದಯಸಂಬಂಧಿ ಕಾಯಿಲೆ ಕಾಣಿಸಿಕೊಂಡು ಸ್ಟಂಟ್ ಅಳವಡಿಸಲಾಗಿತ್ತು. ಇದರಿಂದಾಗಿ ಆತ ಮನೆಯಲ್ಲೇ ಇರುತ್ತಿದ್ದ. ಇದೇ ವೇಳೆ ರಮಾದೇವಿಗೆ ಇನ್‌ಸ್ಟಾಗ್ರಾಮ್ ಮೂಲಕ ಬಾಪಟ್ಲಾ ಮೂಲದ ಗೋಪಿಸಾಯಿ ಎಂಬ ಯುವಕನ ಪರಿಚಯವಾಗಿ, ಅದು ಅನೈತಿಕ ಸಂಬಂಧಕ್ಕೆ ತಿರುಗಿದೆ. ಇವರಿಬ್ಬರ ವರ್ತನೆಯನ್ನು ಗಂಡ ದುರ್ಗಾಪ್ರಸಾದ್ ತರಾಟೆಗೆ ತೆಗೆದುಕೊಂಡು ಬುದ್ಧಿ ಮಾತು ಹೇಳಿದ್ದ.
ಖರ್ಜೂರ ಜ್ಯೂಸ್‌ನಲ್ಲಿ ನಿದ್ದೆ ಮಾತ್ರೆ.. ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ!
ತಮ್ಮ ಸುಖದ ಆಟಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಮುಗಿಸಲು ರಮಾದೇವಿ ಮತ್ತು ಪ್ರಿಯಕರ ಗೋಪಿಸಾಯಿ ಭೀಕರ ಸ್ಕೆಚ್ ಹಾಕಿದ್ದಾರೆ. ಗೋಪಿಸಾಯಿ ತಂದುಕೊಟ್ಟಿದ್ದ 15 ಅಲ್ಪ್ರಾಕ್ಸ್ (Alprax) ನಿದ್ದೆ ಮಾತ್ರೆಗಳನ್ನು ಮಾರ್ಚ್ 13ರ ಬೆಳಗ್ಗೆ ರಮಾದೇವಿ ತನ್ನ ಗಂಡನಿಗೆ ಖರ್ಜೂರ ಜ್ಯೂಸ್‌ನಲ್ಲಿ ಬೆರೆಸಿ ಕುಡಿಸಿದ್ದಾಳೆ. ಮಾತ್ರೆ ಪ್ರಭಾವದಿಂದ ದುರ್ಗಾಪ್ರಸಾದ್ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಂತೆ, ರಮಾದೇವಿ ಆತನ ಮುಖದ ಮೇಲೆ ದಿಂಬನ್ನು ಇಟ್ಟು ಗಟ್ಟಿಯಾಗಿ ಒತ್ತಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಬಳಿಕ ಗಂಡನಿಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಎಲ್ಲರನ್ನೂ ನಂಬಿಸಿ ಶವ ಸಂಸ್ಕಾರವನ್ನೂ ಮುಗಿಸಿದ್ದಾಳೆ.
ಹಳೇ ಪ್ರಿಯಕರನಿಂದಲೇ ಟ್ವಿಸ್ಟ್: ರಹಸ್ಯ ಬಯಲಾಗಿದ್ದು ಹೇಗೆ?
ಗಂಡ ಸತ್ತು ಇನ್ನೂ ಮೂರು ತಿಂಗಳು ಕಳೆಯುವ ಮುನ್ನವೇ ರಮಾದೇವಿ ತನ್ನ ಹಳೇ ಪ್ರಿಯಕರ ಗೋಪಿಸಾಯಿಯನ್ನು ಕೈಬಿಟ್ಟು, ಮತ್ತೊಬ್ಬ ಹೊಸ ಪ್ರಿಯಕರನ ಹಿಂದೆ ಬಿದ್ದಿದ್ದಾಳೆ. ಇದರಿಂದ ರೊಚ್ಚಿಗೆದ್ದ ಹಳೇ ಪ್ರಿಯಕರ ಗೋಪಿಸಾಯಿ, ರಮಾದೇವಿಯ ಮಗಳ ಮೊಬೈಲ್‌ಗೆ ವಾಟ್ಸಾಪ್‌ನಲ್ಲಿ ಮೆಸೇಜ್ ಹಾಗೂ ಮಾತ್ರೆ ಖರೀದಿಸಿದ ಪ್ರಿಸ್ಕ್ರಿಪ್ಷನ್ ಫೋಟೋಗಳನ್ನು ಕಳುಹಿಸಿದ್ದಾನೆ.
“ನಿಮ್ಮ ಅಮ್ಮ ಜ್ಯೂಸ್‌ನಲ್ಲಿ ನಿದ್ದೆ ಮಾತ್ರೆಗಳನ್ನು ಬೆರೆಸಿ ಕೊಟ್ಟು, ಮುಖಕ್ಕೆ ದಿಂಬು ಒತ್ತಿ ನಿಮ್ಮ ಅಪ್ಪನನ್ನು ಕೊಲೆ ಮಾಡಿದ್ದಾಳೆ” ಎಂದು ಗೋಪಿಸಾಯಿ ಸೀಕ್ರೆಟ್ ಬಯಲು ಮಾಡಿದ್ದಾನೆ. ಇದರಿಂದ ಬೆಚ್ಚಿಬಿದ್ದ ಮಗಳು ಹಾಗೂ ದುರ್ಗಾಪ್ರಸಾದ್ ಕುಟುಂಬಸ್ಥರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಸತ್ಪವರಂ ಪೊಲೀಸರು ರಮಾದೇವಿ ಮತ್ತು ಆಕೆಯ ಪ್ರಿಯಕರ ಗೋಪಿಸಾಯಿಯನ್ನು ಕಂಬಿ ಎಣಿಸುವಂತೆ ಮಾಡಿದ್ದಾರೆ.
- Alprax tablets juice murder
- Andhra Pradesh latest viral news
- Durga Prasad murder
- extramarital affair murder India
- Instagram illegal affair murder
- Kakinada crime news
- Ramadevi Gopisai murder case
- Sarpavaram crime updates
- trending crime news Kannada
- wife kills husband in Andhra
- ಆಂಧ್ರಪ್ರದೇಶ ಕ್ರೈಮ್ ನ್ಯೂಸ್.
- ಇನ್‌ಸ್ಟಾಗ್ರಾಮ್ ಅನೈತಿಕ ಸಂಬಂಧ ಕೊಲೆ
- ಕರಾವಳಿ ಲೇಟೆಸ್ಟ್ ಕ್ರೈಮ್ ಸುದ್ದಿ
- ಕಾಕಿನಾಡ ಕೊಲೆ ಪ್ರಕರಣ
- ಜ್ಯೂಸ್‌ನಲ್ಲಿ ನಿದ್ದೆ ಮಾತ್ರೆ ಕೊಟ್ಟು ಕೊಲೆ
- ಟ್ರೆಂಡಿಂಗ್ ಕ್ರೈಮ್ ನ್ಯೂಸ್ ಕನ್ನಡ
- ಪ್ರಿಯಕರನಿಂದ ರಹಸ್ಯ ಬಯಲು
- ರಮಾದೇವಿ ಗೋಪಿಸಾಯಿ ಮರ್ಡರ್ ಕೇಸ್
- ಸತ್ಪವರಂ ಕ್ರೈಮ್ ಅಪ್ಡೇಟ್ಸ್
- ಹೆಂಡತಿಯಿಂದ ಗಂಡನ ಹತ್ಯೆ





Leave a comment